ಪ್ರಧಾನಿ ಮೋದಿಯನ್ನು ಆಹ್ವಾನಿಸಿದ ಕುಟುಂಬ  
ಕ್ರಿಕೆಟ್

ರಾಷ್ಟ್ರಪತಿ, ಪ್ರಧಾನಿಗಳಿಂದ ಹಿಡಿದು ಸಚಿನ್ ತೆಂಡೂಲ್ಕರ್ ಪುತ್ರನ ವಿವಾಹಕ್ಕೆ ಗಣ್ಯರ ಆಹ್ವಾನ: ಅರ್ಜುನ್ ತೆಂಡೂಲ್ಕರ್ ಕೈಹಿಡಿಯುವ ಹುಡುಗಿ ಯಾರು?

ಅರ್ಜುನ್ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ನಮಗೆ ಗೌರವ ಸಿಕ್ಕಿದೆ ಎಂದು ಸಚಿನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ತಮ್ಮ ಮಗ ಅರ್ಜುನ್ ಹಾಗೂ ಸಾನಿಯಾ ಜೋಡಿಯ ವಿವಾಹ ಸಮಾರಂಭಕ್ಕೆ ರಾಷ್ಟ್ರಪತಿ, ಪ್ರಧಾನಿಗಳಿಂದ ಹಿಡಿದು ಪ್ರಮುಖ ಗಣ್ಯರನ್ನು ಆಹ್ವಾನಿಸಿದ್ದಾರೆ.

ಅರ್ಜುನ್ ಮತ್ತು ಸಾನಿಯಾ ಅವರ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ನಮಗೆ ಗೌರವ ಸಿಕ್ಕಿದೆ ಎಂದು ಸಚಿನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಹ ಆಹ್ವಾನಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿವಾಹ ಆಮಂತ್ರಣ ಪತ್ರವನ್ನು ನೀಡಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಾಂದೋಕ್ ಅವರನ್ನು ಮಾರ್ಚ್ 3 ರಂದು ವಿವಾಹವಾಗಲಿದ್ದಾರೆ. ಮಾರ್ಚ್ 5 ರಂದು ನಿಕಟ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಭಾಗವಹಿಸುವ ಆತ್ಮೀಯ ಸಮಾರಂಭವಿರುತ್ತದೆ.

26 ವರ್ಷದ ಎಡಗೈ ವೇಗಿ ಅರ್ಜುನ್, ಕಳೆದ ವರ್ಷ ಆಗಸ್ಟ್‌ನಲ್ಲಿ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಚಾಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.

ಸಾನಿಯಾ ಚಾಂದೋಕ್ ಯಾರು?

ಸಾನಿಯಾ ಚಾಂದೋಕ್ ಮುಂಬೈನ ಶ್ರೀಮಂತ ಕುಟುಂಬದಿಂದ ಬಂದವರು. ಶ್ರೀ ಪಾವ್ಸ್ ಪೆಟ್ ಸ್ಪಾ & ಸ್ಟೋರ್ LLP ಯಲ್ಲಿ ನಿಯೋಜಿತ ಪಾಲುದಾರ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಘಾಯ್ ಕುಟುಂಬವು ಆತಿಥ್ಯ ಮತ್ತು ಆಹಾರ ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಇಂಟರ್ ಕಾಂಟಿನೆಂಟಲ್ ಹೋಟೆಲ್ ಮತ್ತು ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಬ್ರೂಕ್ಲಿನ್ ಕ್ರೀಮರಿಯನ್ನು ಹೊಂದಿದೆ.


ಅರ್ಜುನ್ 2021 ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 20 ಲಕ್ಷ ರೂಪಾಯಿ ಫ್ರಾಂಚೈಸಿಯೊಂದಿಗೆ ಸೇರ್ಪಡೆಗೊಂಡಿದ್ದರು. 2022 ರ ಹರಾಜಿನಲ್ಲಿ ಅವರನ್ನು 30 ಲಕ್ಷ ರೂಪಾಯಿಗೆ ಮರಳಿ ತಂಡಕ್ಕೆ ಸೇರ್ಪಡೆ ಮಾಡಲಾಯಿತು. 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅವರು ಐಪಿಎಲ್‌ನಲ್ಲಿ 5 ಪಂದ್ಯಗಳನ್ನು ಆಡಿ 3 ವಿಕೆಟ್‌ಗಳನ್ನು ಪಡೆದಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ, ಅರ್ಜುನ್ ಗೋವಾ ತಂಡ ಪ್ರತಿನಿಧಿಸುತ್ತಾರೆ. 22 ಪ್ರಥಮ ದರ್ಜೆ ಪಂದ್ಯಗಳಲ್ಲಿ 48 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜೊತೆಗೆ 620 ರನ್‌ಗಳನ್ನು ಗಳಿಸಿದ್ದಾರೆ. 23 ಲಿಸ್ಟ್ ಎ ಪಂದ್ಯಗಳಲ್ಲಿ 25 ವಿಕೆಟ್‌ಗಳು ಮತ್ತು 155 ರನ್‌ಗಳನ್ನು ಸಹ ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ ಮೇಯರ್‌ ಆಗಿ ರೀತು ತಾವ್ಡೆ ಅವಿರೋಧ ಆಯ್ಕೆ: 4 ದಶಕಗಳ ನಂತರ ಬಿಜೆಪಿಗೆ ಒಲಿದ ಪಟ್ಟ!

ಭಾರತಕ್ಕೆ ರಾಜತಾಂತ್ರಿಕ ಜಯ: ಫ್ಯಾಕ್ಟ್‌ಶೀಟ್‌ನಲ್ಲಿ ‘ದ್ವಿದಳ ಧಾನ್ಯಗಳು’ ಉಲ್ಲೇಖ ಕೈಬಿಟ್ಟ ಅಮೆರಿಕಾ..!

ಲೋಕಸಭೆ ಕಲಾಪಕ್ಕೆ ಪ್ರಧಾನಿ ಗೈರು: ಮೋದಿ ಮೇಲೆ ದಾಳಿಗೆ ಸಿದ್ಧರಾಗಿದ್ದ 'ಕೈ' ಮಹಿಳಾ ಸಂಸದರು? ಸಂಸತ್ ಆವರಣದಲ್ಲಿ ನಿಜವಾಗಿ ನಡೆದಿದ್ದೇನು? Video

ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಕಡ್ಡಾಯ: ಕಾಂಗ್ರೆಸ್ ಕೈಬಿಟ್ಟಿದ್ದ ಚರಣಗಳ ಮರುಸೇರ್ಪಡೆ, ಹಾಡುವಾಗ ಎದ್ದು ನಿಲ್ಲದಿದ್ದರೆ ಶಿಕ್ಷೆ-ದಂಡಕ್ಕೆ ಅರ್ಹ..!

ಕೆನಡಾ: ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಬಂದೂಕುಧಾರಿ ಸೇರಿ ಕನಿಷ್ಠ 10 ಸಾವು, 27 ಮಂದಿ ಗಾಯ

SCROLL FOR NEXT