ರಾಜೀವ್ ಶುಕ್ಲಾ 
ಕ್ರಿಕೆಟ್

T20 World Cup 2026: ಭಾರತ-ಪಾಕ್ ಪಂದ್ಯದ ಬಗ್ಗೆ ನಕಲಿ ವಿಡಿಯೋ ಪ್ರಸಾರ; ಪಾಕಿಸ್ತಾನದ ಟಿವಿ ವಿರುದ್ಧ ರಾಜೀವ್ ಶುಕ್ಲಾ ಕಿಡಿ!

ಎಆರ್‌ವೈ ನ್ಯೂಸ್‌ನಲ್ಲಿ ಪ್ರಸಾರವಾದ ಈ ಕಾರ್ಯಕ್ರಮದಲ್ಲಿ ಭಾನುವಾರ ಕೊಲಂಬೊದಲ್ಲಿ ಭಾರತ ವಿರುದ್ಧ ಆಡುವುದನ್ನು ಪಾಕಿಸ್ತಾನ ತಿರಸ್ಕರಿಸಿದ್ದಕ್ಕೆ ಶುಕ್ಲಾ ಅವರ ಪ್ರತಿಕ್ರಿಯೆಯಾಗಿ ಈ ಕ್ಲಿಪ್ ಅನ್ನು ತೋರಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರ ಹೆಸರಿನಲ್ಲಿ ಎಐ ತಿದ್ದುಪಡಿ ಮಾಡಲಾದ ಪಾಕಿಸ್ತಾನದ ಟಿವಿಯೊಂದರಲ್ಲಿ ಪ್ರಸಾರ ಮಾಡಿದ ನಂತರ ವಿವಾದ ಭುಗಿಲೆದ್ದಿದೆ. ಪಾಕ್ ಮಾಜಿ ನಾಯಕ ಶೋಯೆಬ್ ಮಲಿಕ್ ನಡೆಸಿಕೊಡುವ ಪಾಕಿಸ್ತಾನದ ಕ್ರಿಕೆಟ್ ಕಾರ್ಯಕ್ರಮವೊಂದರಲ್ಲಿ ಮುಂಬರುವ ಟಿ20 ವಿಶ್ವಕಪ್ 2026 ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಬಗ್ಗೆ ಶುಕ್ಲಾ ಮಾತನಾಡುತ್ತಿರುವ ಎಡಿಟೆಡ್ ವಿಡಿಯೋವನ್ನು ಪ್ರಸಾರ ಮಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಎಆರ್‌ವೈ ನ್ಯೂಸ್‌ನಲ್ಲಿ ಪ್ರಸಾರವಾದ ಈ ವಿಡಿಯೋದಲ್ಲಿ ಭಾನುವಾರ ಕೊಲಂಬೊದಲ್ಲಿ ಭಾರತ ವಿರುದ್ಧ ಆಡುವುದನ್ನು ಪಾಕಿಸ್ತಾನ ತಿರಸ್ಕರಿಸಿದ್ದಕ್ಕೆ ಶುಕ್ಲಾ ಅವರ ಪ್ರತಿಕ್ರಿಯೆಯಾಗಿ ತೋರಿಸಿದೆ. ಆದಾಗ್ಯೂ, ಎಐ ಬಳಸಿ ವಿಡಿಯೋವನ್ನು ಕುಶಲತೆಯಿಂದ ತಿರುಚಲಾಗಿದೆ ಮತ್ತು ಅಂತಹ ದಾರಿತಪ್ಪಿಸುವ ವಿಷಯವನ್ನು ಯಾರೊಬ್ಬರೂ ನಂಬಬೇಡಿ ಎಂದು ಶುಕ್ಲಾ ಒತ್ತಾಯಿಸಿದ್ದಾರೆ.

'ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ಕುರಿತು ನನ್ನ ಹೇಳಿಕೆಗಳ ವಿಡಿಯೋದಲ್ಲಿ ಎಐ ಬಳಿಕ ಆಡಿಯೋ ಬದಲಿಸಲಾಗಿದೆ. ಈ ಹೇಳಿಕೆಗಳು ನನ್ನದಲ್ಲ. ಈ ದಾರಿತಪ್ಪಿಸುವ ವಿಷಯವನ್ನು ನಂಬಬೇಡಿ ಅಥವಾ ಪ್ರಸಾರ ಮಾಡಬೇಡಿ ಮತ್ತು ಅಂತಹ ವಿಡಿಯೋಗಳು ಎಲ್ಲಿಯೇ ಕಂಡುಬಂದರೂ ಅದನ್ನು ರಿಪೋರ್ಟ್ ಮಾಡಬೇಕೆಂದು ನಾನು ಎಲ್ಲರನ್ನೂ ಒತ್ತಾಯಿಸುತ್ತೇನೆ' ಎಂದು ಅವರು X ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಟಿ20 ವಿಶ್ವಕಪ್ ಪಂದ್ಯದ ಕುರಿತು ಪಾಕಿಸ್ತಾನ-ಐಸಿಸಿ ಬಿಕ್ಕಟ್ಟಿನ ಬಗ್ಗೆ ಸಂಪಾದಿತ ವಿಡಿಯೋ ತಪ್ಪು ನಿರೂಪಣೆಯನ್ನು ಒದಗಿಸಿದೆ. ಬಾಂಗ್ಲಾದೇಶಕ್ಕೆ ಬೆಂಬಲ ನೀಡುವ ಸಲುವಾಗಿ ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿತು. ಆದರೆ, ಜಾಗತಿಕ ಕ್ರಿಕೆಟ್ ಸಂಸ್ಥೆಯೊಂದಿಗೆ ಮಾತುಕತೆ ನಂತರ, ಅವರು ತಮ್ಮ ನಿರ್ಧಾರವನ್ನು ಬದಲಿಸಿದರು. ನಿಗದಿಯಂತೆಯೇ ಭಾರತದ ವಿರುದ್ಧ ಪಂದ್ಯ ಆಡಲು ಒಪ್ಪಿಕೊಂಡರು.

'ಭಾರತದ ವಿರುದ್ಧ ಆಡಲು ಪಾಕಿಸ್ತಾನವನ್ನು ಮನವೊಲಿಸಲು ಬಿಸಿಸಿಐ ಪದೇ ಪದೆ ಮಾಡಿದ ವಿನಂತಿಯ ಮೇರೆಗೆ ಐಸಿಸಿ ಪ್ರತಿನಿಧಿಯು ಪ್ರಾರಂಭಿಸಿದ ಚರ್ಚೆಗಳ ಫಲಿತಾಂಶವನ್ನು ನೋಡಿ ನನಗೆ ಸಂತೋಷವಾಗಿದೆ. ಕ್ರಿಕೆಟ್‌ಗೆ ಆದ್ಯತೆ ನೀಡಲು ಇದು ಉತ್ತಮ ಮತ್ತು ಸೌಹಾರ್ದಯುತ ಪರಿಹಾರವಾಗಿದೆ' ಎಂದು ARY ನ್ಯೂಸ್‌ನಲ್ಲಿ ಪ್ರಸಾರವಾದ ಮಾರ್ಫ್ ಮಾಡಿದ ವಿಡಿಯೋದಲ್ಲಿ ರಾಜೀವ್ ಶುಕ್ಲಾ ಹೇಳುವುದನ್ನು ಕೇಳಬಹುದು.

ಶುಕ್ಲಾ ನಿಜವಾಗಿಯೂ ಹೇಳಿದ್ದೇನು?

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಹಿಂದಿನ ನಿರ್ಧಾರವನ್ನು ಹಿಂತೆಗೆದುಕೊಂಡ ನಂತರ, ಪಂದ್ಯವು ವೇಳಾಪಟ್ಟಿಯ ಪ್ರಕಾರ ನಡೆಯುವಂತೆ ಮಾಡಿದ 'ಸೌಹಾರ್ದಯುತ ಪರಿಹಾರ ಕಂಡುಕೊಂಡಿದ್ದಕ್ಕಾಗಿ' ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು (ಐಸಿಸಿ) ಶ್ಲಾಘಿಸಿದರು.

'ಐಸಿಸಿ ಪ್ರತಿನಿಧಿ, ಐಸಿಸಿ ಅಧ್ಯಕ್ಷರ ಮೇಲ್ವಿಚಾರಣೆಯಲ್ಲಿ ಆರಂಭಿಸಿದ ಚರ್ಚೆಗಳ ಫಲಿತಾಂಶವನ್ನು ನೋಡಿ ನನಗೆ ಸಂತೋಷವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡಲು ಲಾಹೋರ್‌ಗೆ ಹೋಗಿದ್ದ ಐಸಿಸಿ ಪ್ರತಿನಿಧಿಗಳು ಈ ಬಗ್ಗೆ ಚರ್ಚಿಸಿದ್ದಾರೆ. ಇದು ಉತ್ತಮ ಪರಿಹಾರವಾಗಿದೆ, ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡಲು ಕಂಡುಬಂದಿರುವ ಸೌಹಾರ್ದಯುತ ಪರಿಹಾರವಾಗಿದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bengal polls: ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ರಾಜಕಾರಣಿಗಳಿಗೆ ಸೆಕ್ಯೂರಿಟಿ ವಾಪಸ್, ಚುನಾವಣಾ ಆಯೋಗ ನಿರ್ದೇಶನ!

ಹುಬ್ಬಳ್ಳಿ Love Jihad ಕೇಸ್‌ಗೆ ಟ್ವಿಸ್ಟ್: Gym ಟ್ರೈನರ್ Sameer Mulla ಮೊಬೈಲ್‌ನಲ್ಲಿ ಯುವತಿಯರ ಫೋಟೋಗಳು ಪತ್ತೆ!

'ನಿಮ್ದೊಂದೆರಡು ಕಿತ್ತೋದ ವಿಮಾನವಾಹಕ ನೌಕೆಗಳು ಇದ್ಯಲ್ಲಾ ಯುದ್ಧಕ್ಕೆ ಕಳಿಸ್ತೀರಾ?' ಅಂತ ಕೇಳಿದ್ದೆ, ಮ್ಯಾಕ್ರಾನ್ ಗೆ ಹೆಂಡ್ತಿ ಕಾಟ: ಬ್ರಿಟನ್, ಫ್ರಾನ್ಸ್ ಬಗ್ಗೆ ಟ್ರಂಪ್ ವ್ಯಂಗ್ಯ

ಭೀಕರ: ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾರು, ಪರಿಸ್ಥಿತಿ ಗಂಭೀರ, Video

ಅಮೆರಿಕದ ಬಲಿಷ್ಠ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ವಿಮಾನದಿಂದ ಧುಮುಕಿದ ಪೈಲಟ್‌ ಗಾಗಿ ಶೋಧ; ಬಹುಮಾನ ಘೋಷಣೆ

SCROLL FOR NEXT