ಭಾರತಕ್ಕೆ ಭರ್ಜರಿ ಜಯ 
ಕ್ರಿಕೆಟ್

T20 ವಿಶ್ವಕಪ್ 2026: ಇತಿಹಾಸ ಬರೆದ ಭಾರತ.. ಅತೀ ದೊಡ್ಡ ಜಯ, ಜಗತ್ತಿನ ಯಾವ ತಂಡವೂ ಮಾಡದ ದಾಖಲೆ!

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 210 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ನಮೀಬಿಯಾ 18.2 ಓವರ್ ನಲ್ಲಿ 116 ರನ್ ಗಳಿಗೆ ಆಲೌಟ್ ಆಗುವ ಮೂಲಕ 93 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯಲ್ಲಿ ನಮೀಬಿಯಾ ವಿರುದ್ಧದ 2ನೇ ಗೆಲುವಿನೊಂದಿಗೆ ಭಾರತ ತಂಡ ಮತ್ತೊಂದು ಅಮೋಘ ದಾಖಲೆ ನಿರ್ಮಿಸಿದ್ದು, ಪ್ರಬಲ ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಯಾವ ತಂಡವೂ ಮಾಡದ ದಾಖಲೆ ನಿರ್ಮಿಸಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 210 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ನಮೀಬಿಯಾ 18.2 ಓವರ್ ನಲ್ಲಿ 116 ರನ್ ಗಳಿಗೆ ಆಲೌಟ್ ಆಗುವ ಮೂಲಕ 93 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಸ್ಪಿನ್ನರ್ ಗಳಿಗೆ ಗರಿಷ್ಠ ವಿಕೆಟ್

ಇಂದಿನ ಪಂದ್ಯದಲ್ಲಿ ಸ್ಪಿನ್ನರ್ ಗಳಿಗೆ ಗರಿಷ್ಠ ಅಂದರೆ 10 ವಿಕೆಟ್ ಗಳು ಬಂದಿದ್ದು, ಭಾರತದಲ್ಲಿ ಪುರುಷರ T20I ಪಂದ್ಯವೊಂದರಲ್ಲಿ ಸ್ಪಿನ್ನರ್ ಗಳಿಗೆ ಸಿಕ್ಕ ಗರಿಷ್ಠ ಸಂಖ್ಯೆಯ ವಿಕೆಟ್ ಗಳಾಗಿವೆ. ಈ ಹಿಂದೆ 2016 ರ T20 ವಿಶ್ವಕಪ್‌ನಲ್ಲಿ ನಾಗ್ಪುರದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದಲ್ಲಿ ಸ್ಪಿನ್ನರ್ ಗಳಿಗೆ 12 ವಿಕೆಟ್‌ಗಳು ದೊರೆತಿತ್ತು.

ಅಂತೆಯೇ ಹಾಲಿ ಟೂರ್ನಮೆಂಟ್‌ನ 18 ಪಂದ್ಯಗಳಲ್ಲಿ, ಸ್ಪಿನ್ನರ್‌ಗಳು ಇಲ್ಲಿಯವರೆಗೆ 50.4% ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಇದು T20 ವಿಶ್ವಕಪ್ ಆವೃತ್ತಿಯಲ್ಲಿ ಅತ್ಯಧಿಕವಾಗಿದೆ. ನಂತರ 2012 ರಲ್ಲಿ (ಶ್ರೀಲಂಕಾದಲ್ಲಿ) 45.8% ಓವರ್‌ಗಳು ಬೌಲ್ ಮಾಡಲಾಗಿತ್ತು.

ಜಗತ್ತಿನ ಯಾವ ತಂಡವೂ ಮಾಡದ ದಾಖಲೆ ಬರೆದ ಟೀಂ ಇಂಡಿಯಾ!

ಇನ್ನು ನಮೀಬಿಯಾ ವಿರುದ್ಧದ ಗೆಲುವಿನ ಬಳಿಕ ಭಾರತ ತಂಡ ಮತ್ತೊಂದು ಅಮೋಘ ಸಾಧನೆ ಮಾಡಿದ್ದು, ಇದು ಟಿ20 ವಿಶ್ವಕಪ್ ನಲ್ಲಿ ಭಾರತಕ್ಕೆ ಸಿಕ್ಕ ಸತತ 10ನೇ ಗೆಲುವಾಗಿದೆ.

ಅಂತೆಯೇ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ 10 ಗೆಲುವುಗಳನ್ನು ದಾಖಲಿಸಿದ ಮೊದಲ ತಂಡ ಎಂಬ ಕೀರ್ತಿಗೂ ಭಾರತ ಭಾಜನವಾಗಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ ಅದೇ ಅಜೇಯ ಸಾಧನೆಯನ್ನು 2026ರಲ್ಲೂ ಮುಂದುವರೆಸಿದೆ.

ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ 2ನೇ ಸ್ಥಾನದಲ್ಲಿದ್ದು, 2024ರಲ್ಲಿ ದಕ್ಷಿಣ ಆಫ್ರಿಕಾ ಮತ್ತು 2022 ರಿಂದ 2024ರವೆರಗೂ ಆಸ್ಟ್ರೇಲಿಯಾ ತಂಡಗಳು ತಲಾ ಸತತ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದವು. ಇದೇ ಭಾರತ ತಂಡ 2012ರಿಂದ 2014ರವರೆಗೆ ಭಾರತ ಸತತ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

Most consecutive wins in Men’s T20 WC

  • 10* - India (2024-2026)

  • 8 - South Africa (2024)

  • 8 - Australia (2022-2024)

  • 7 - England (2010-2012)

  • 7 - India (2012-2014)

ಅತೀ ದೊಡ್ಡ ಜಯ

ನಮೀಬಿಯಾ ವಿರುದ್ಧ ಭಾರತಕ್ಕೆ ಸಿಕ್ಕ 93 ರನ್ ಅಂತರದ ಜಯ ಟಿ20 ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ ಭಾರತಕ್ಕೆ ಸಿಕ್ಕ ಅತಿ ದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು 2012ರಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 90 ರನ್ ಗಳ ಜಯ ದಾಖಲಿಸಿತ್ತು.

Biggest victory margins for India at T20 WC (by runs)

  • 93 runs vs NAM, Delhi, 2026

  • 90 runs vs ENG, Colombo RPS, 2012

  • 73 runs vs AUS, Mirpur, 2014

  • 71 runs vs ZIM, Melbourne, 2022

  • 68 runs vs ENG, Providence, 2024 SF

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

RCB ಫ್ಯಾನ್ಸ್ ಗೆ ಸಿಹಿಸುದ್ದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯ ಆಯೋಜನೆಗೆ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್!

T20 ವಿಶ್ವಕಪ್ 2026: ಭಾರತ ಭರ್ಜರಿ ಬೌಲಿಂಗ್, ನಮೀಬಿಯಾ ವಿರುದ್ಧ 93 ರನ್ ಜಯ

T20 ವಿಶ್ವಕಪ್ 2026: ನಮೀಬಿಯಾ ವಿರುದ್ಧ ಭರ್ಜರಿ ಜಯ, ಟಿ20 ಇತಿಹಾಸದ ಅಮೋಘ ದಾಖಲೆ ಬರೆದ ಭಾರತ!

Betting Case: MS ಧೋನಿಗೆ ಮದ್ರಾಸ್ ಹೈಕೋರ್ಟ್ ಶಾಕ್, 10 ಲಕ್ಷ ರೂ ಶುಲ್ಕ! ಕಾರಣ?

T20 ವಿಶ್ವಕಪ್ 2026: 6, 6, 6, 6, 4.. ಒಂದೇ ಓವರ್ ನಲ್ಲಿ 28 ರನ್; ದಾಖಲೆಗಳ ಮಳೆ; ಎಲೈಟ್ ಗ್ರೂಪ್ ಸೇರಿದ Ishan Kishan!

SCROLL FOR NEXT