ಟೀಂ ಇಂಡಿಯಾ 
ಕ್ರಿಕೆಟ್

T20 World Cup, IND vs Pak: ಇಶಾನ್ ಕಿಶನ್ ವೇಗದ ಅರ್ಧ ಶತಕ; ಪಾಕ್‌ಗೆ 176 ರನ್ ಟಾರ್ಗೆಟ್!

ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ ಮೊದಲ ಓವರ್ ನಲ್ಲೇ ಡಕೌಟ್ ಆಗಿ ಪೆವಿಲಿಯನ್ ಸೇರಿದರು.

ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಗ್ರೂಪ್ ಎ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಮಾಡಿದ್ದು 175 ರನ್ ಕಲೆ ಹಾಕಿದೆ. ಕೊಲಂಬೋದ ಪ್ರೇಮದಾಸ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡತ್ತು. ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ ಮೊದಲ ಓವರ್ ನಲ್ಲೇ ಡಕೌಟ್ ಆಗಿ ಪೆವಿಲಿಯನ್ ಸೇರಿದರು. ಆದರೆ ಇಶಾನ್ ಕಿಶನ್ 27 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಅರ್ಧಶತಕ ಸಿಡಿಸಿದ್ದು ಟೀಮ್ ಇಂಡಿಯಾವನ್ನು ಆರಂಭಿಕ ಹಿನ್ನಡೆಯಿಂದ ಪಾರು ಮಾಡಿದ್ದಾರೆ.

ತಿಲಕ್ ವರ್ಮಾ 25 ರನ್‌ಗಳಿಗೆ ಸ್ಯಾಮ್ ಅಯೂಬ್‌ಗೆ ಎಲ್‌ಬಿಡಬ್ಲ್ಯೂ ಆದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಮುಂದಿನ ಎಸೆತದಲ್ಲಿ ರನ್ ಗಳಿಸದೆ ಔಟಾದರು. 77 ರನ್ ಗಳಿಸಿ ಇಶಾನ್ ಕಿಶನ್ ಔಟಾದ ನಂತರ, ಸೂರ್ಯ ಕುಮಾರ್ ಮತ್ತು ತಿಲಕ್ ರನ್ ವೇಗವನ್ನು ನಿಧಾನವಾಯಿತು. 13 ಓವರ್‌ಗಳಲ್ಲಿ ಭಾರತ 2 ವಿಕೆಟ್‌ಗಳ ನಷ್ಟಕ್ಕೆ 118 ರನ್ ಗಳಿಸಿತ್ತು. ನಿಗದಿತ ಓವರ್ ನಲ್ಲಿ ಭಾರತ 7 ನಷ್ಟಕ್ಕೆ 175 ರನ್ ಗಳಿಸಿದೆ. ಪಾಕ್ ಪರ ಸೈಮ್ ಆಯೂಬ್ 3 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಹಾರ್ಮೊಜ್ ಮೇಲೆ ಈಗಲೂ ನಮ್ಮದೇ ನಿಯಂತ್ರಣ: ವಾಸ್ತವಕ್ಕೂ ಅಮೆರಿಕ ಹೇಳಿಕೆಗಳಿಗೂ ತಾಳೆಯಾಗುವುದಿಲ್ಲ- ಇರಾನ್

ಮೆಟ್ರೋ ರೈಲಿನಲ್ಲೇ ಮಹಿಳೆಯ ಪುಲ್‌ಅಪ್ಸ್‌ ಕಸರತ್ತು; ಹೊಸ ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ!