ಟಿವಿ ಹೊಡೆದು ಹಾಕಿದ ಪಾಕ್ ಅಭಿಮಾನಿ 
ಕ್ರಿಕೆಟ್

T20 ವಿಶ್ವಕಪ್ 2026: ಭಾರತದ ವಿರುದ್ಧ ಹೀನಾಯ ಸೋಲು; ಪಾಕ್ ಅಭಿಮಾನಿಗಳ ಆಕ್ರೋಶ, ಟಿವಿಗಳು ಧ್ವಂಸ; Video Viral

ನಿನ್ನೆ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 61 ರನ್ ಗಳ ಹೀನಾಯ ಸೋಲುಕಂಡಿತು.

ಇಸ್ಲಾಮಾಬಾದ್: ಐಸಿಸಿ ಟಿ20 ನವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯ ಎಂದೇ ಭಾವಿಸಲಾಗಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದ್ದು, ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಹೌದು.. ನಿನ್ನೆ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 61 ರನ್ ಗಳ ಹೀನಾಯ ಸೋಲುಕಂಡಿತು.

ಭಾರತ ನೀಡಿದ್ದ 176 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಾಕಿಸ್ತಾನ 18 ಓವರ್ ನಲ್ಲಿ ಕೇವಲ 114ರನ್ ಗೆ ಆಲೌಟ್ ಆಯಿತು. ಆ ಮೂಲಕ ಪಾಕಿಸ್ತಾನದ ಎದುರು ವಿಶ್ವಕಪ್ ಟೂರ್ನಿಗಳಲ್ಲಿ ಭಾರತದ ಪ್ರಾಬಲ್ಯ ಮುಂದುವರೆದಂತಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಒಟ್ಟು 16 ಬಾರಿ ಮುಖಾಮುಖಿಯಾಗಿದ್ದು, ಈ 16 ಪಂದ್ಯಗಳ ಪೈಕಿ 15 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, 1 ಪಂದ್ಯದಲ್ಲಿ ಮಾತ್ರ ಪಾಕಿಸ್ತಾನ ಗೆಲುವು ದಾಖಲಿಸಿತ್ತು.

ಪಾಕ್ ಅಭಿಮಾನಿಗಳ ಆಕ್ರೋಶ

ಇನ್ನು ಭಾರತದ ವಿರುದ್ಧ ಮತ್ತೆ ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಸೋಲುಕಂಡ ಹಿನ್ನಲೆಯಲ್ಲಿ ಅತ್ತ ಪಾಕಿಸ್ತಾನದಲ್ಲಿ ಅಭಿಮಾನಿಗಳ ಆಕ್ರೋಶದ ಕಟ್ಟೆ ಹೊಡೆದಿದೆ. ಪಾಕಿಸ್ತಾನ ಆಟಗಾರರು ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಆಟಗಾರರು ಮತ್ತು ಪಿಸಿಬಿ ಅಧಿಕಾರಿಗಳಿಗೆ ಏಕವಚನದಲ್ಲೇ ಬೈಗುಳಗಳ ಸುರಿಮಳೆಯನ್ನೇ ಸುರಿಸಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಟಿವಿಗಳು ಧ್ವಂಸ

ಅಂತೆಯೇ ತಮ್ಮ ತಂಡದ ಹೀನಾಯ ಸೋಲಿನಿಂದ ಕೆರಳಿದ ಅಭಿಮಾನಿಗಳು ಟೆಲಿವಿಷನ್ ಸೆಟ್‌ಗಳನ್ನು ಬ್ಯಾಟ್‌ನಿಂದ ಹೊಡೆದು ಪುಡಿಗಟ್ಟುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಭಾರತದ ವಿರುದ್ಧದ 61 ರನ್ ಗಳ ಹೀನಾಯ ಸೋಲನ್ನು ಜೀರ್ಣಿಸಿಕೊಳ್ಳಲಾಗದ ಓರ್ವ ಅಭಿಮಾನಿ ತನ್ನ ಮನೆಯ ಟಿವಿ ಸೆಟ್ ಅನ್ನು ಹೊಡೆದು ಹಾಕುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

"ಈ ಅವಮಾನ ಮತ್ತು ಆಘಾತದಿಂದ ಮಾತುಗಳೇ ಬರುತ್ತಿಲ್ಲ" ಎಂದು ಟಿವಿ ಒಡೆದುಹಾಕಿದ ಪಾಕ್ ಅಭಿಮಾನಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿದ್ದ ರಿಗ್ಗಿಂಗ್ ವಾತಾವರಣದಲ್ಲಿ ನಿಜವಾಗಿಯೂ ಕೆಲಸ ಮಾಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ