ಅದಿತಿ ಹುಂಡಿಯಾ - ಇಶಾನ್ ಕಿಶನ್ 
ಕ್ರಿಕೆಟ್

'ಅದಿತಿಯೇ ಅವನ ಗರ್ಲ್‌ಫ್ರೆಂಡ್': ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್‌ ಇಶಾನ್ ಕಿಶನ್ ಬಗ್ಗೆ ತಾತ ಹೇಳಿದ್ದಿಷ್ಟು...

'ಇಶಾನ್ ಯಾರನ್ನು ಮದುವೆಯಾಗಲು ಆರಿಸಿಕೊಂಡರೂ, ಅವನ ನಿರ್ಧಾರವನ್ನು ನಾನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಇಶಾನ್ ಕಿಶಾನ್ ಯಾರನ್ನೇ ಮದುವೆಯಾದರೂ ನಾವು ಅವರನ್ನು ಸ್ವೀಕರಿಸಲು ಸಿದ್ಧರಿದ್ದೇವೆ'.

ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ತಂಡಕ್ಕೆ ಮರಳಿದ ಬಳಿಕ ಭರ್ಜರಿ ಫಾರ್ಮ್‌ನಲ್ಲಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ರಾಷ್ಟ್ರೀಯ ತಂಡದಿಂದ ದೂರವಿದ್ದ ಅವರು, ಬಿಸಿಸಿಐ ಸೆಂಟ್ರಲ್ ಒಪ್ಪಂದವನ್ನು ಕಳೆದುಕೊಂಡಿದ್ದರು. ಇದೀಗ 27 ವರ್ಷದ ಇಶಾನ್ ಕಿಶನ್ ಮರಳಿ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಭೀತುಪಡಿಸಿದ್ದಾರೆ. ಇದೀಗ ಕ್ರಿಕೆಟ್‌ ಹೊರತುಪಡಿಸಿ ತಮ್ಮ ವೈಯಕ್ತಿಕ ಕಾರಣಕ್ಕಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಭಾನುವಾರ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 77 ರನ್‌ಗಳನ್ನು ಗಳಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಭಾರತವು 61 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ, ಕಿಶನ್ ಅವರ ತಾತ ಅವರ ರಿಲೇಷನ್‌ಶಿಪ್‌ ಬಗ್ಗೆ ಮಾಹಿತಿ ನೀಡಿದ್ದು, ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಬಿಹಾರದ ಔರಂಗಾಬಾದ್‌ನಲ್ಲಿ ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಕಿಶನ್ ಅವರ ತಾತ ಅನುರಾಗ್ ಪಾಂಡೆ, ತಮ್ಮ ಮೊಮ್ಮಗ ಸದ್ಯ ಮಾಡೆಲ್ ಅದಿತಿ ಹುಂಡಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ದೃಢಪಡಿಸಿದರು.

'ಇಶಾನ್ ಯಾರನ್ನು ಮದುವೆಯಾಗಲು ಆರಿಸಿಕೊಂಡರೂ, ಅವನ ನಿರ್ಧಾರವನ್ನು ನಾನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಇಶಾನ್ ಕಿಶಾನ್ ಯಾರನ್ನೇ ಮದುವೆಯಾದರೂ ನಾವು ಅವರನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ಅದಿತಿ ಅವನ ಗೆಳತಿ. ಅವರು ಒಬ್ಬ ಮಾಡೆಲ್. ಮಕ್ಕಳು ಸಂತೋಷವಾಗಿರುವುದನ್ನು ನಾವು ಒಪ್ಪಿಕೊಳ್ಳಬೇಕು' ಎಂದರು.

ಈಮಧ್ಯೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿನ ಪ್ರದರ್ಶನದ ಬಗ್ಗೆ ಮಾತನಾಡಿದ ಕಿಶನ್, 'ಈ ಪಂದ್ಯವೂ ಮತ್ತೊಂದು ಆಟವಷ್ಟೇ ಎಂದು ಪರಿಗಣಿಸಿ, ಸರಣವಾಗಿಟ್ಟುಕೊಂಡೆ. ಚೆಂಡನ್ನು ನೋಡುತ್ತಾ ಮತ್ತು ವಿಕೆಟ್ ಮತ್ತು ಗುರಿಯನ್ನು ನಿರ್ಣಯಿಸಿದ ನಂತರ ತನ್ನ ಹೊಡೆತಗಳನ್ನು ಆಡುತ್ತಿದ್ದೇನೆ' ಎಂದು ಹೇಳಿದರು.

ಬಿಸಿಸಿಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಇಶಾನ್ ಕಿಶನ್, 'ನನಗೆ ಮಾತ್ರವಲ್ಲ, ಪಂದ್ಯಾವಳಿಯ ಉದ್ದಕ್ಕೂ, ನಾವು ತುಂಬಾ ಕಠಿಣ ತಯಾರಿ ನಡೆಸುತ್ತಿದ್ದಾಗ ನಮಗೆ ಬೆಂಬಲ ನೀಡಿದ ಎಲ್ಲರಿಗೂ ಈ ಗೆಲುವನ್ನು ಸಮರ್ಪಿಸುತ್ತೇನೆ. ಆದ್ದರಿಂದ, ಇದರ ಶ್ರೇಯ ನನಗೆ ಮಾತ್ರವಲ್ಲ, ಇಡೀ ಭಾರತಕ್ಕೂ ಸಲ್ಲುತ್ತದೆ' ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!