ಭಾರತ ತಂಡ 
ಕ್ರಿಕೆಟ್

T20 World Cup 2026: ನೆದರ್ಲೆಂಡ್ ವಿರುದ್ಧ 17 ರನ್ ಗಳಿಂದ ಗೆದ್ದು, ಟಿ-20 ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಭಾರತ!

ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ 11 ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿ ಭಾರತ ದಾಖಲೆ ನಿರ್ಮಿಸಿದೆ.

ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಭಾರತ ಮತ್ತೊಂದು ಪಂದ್ಯ ಗೆದ್ದಿದೆ. ಹೌದು. ಗುಜರಾತ್ ನ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧದ 17 ರನ್ ಗಳಿಂದ ಭಾರತ ಗೆಲುವು ಸಾಧಿಸಿದೆ. ಈ ಮೂಲಕ ವಿಶಿಷ್ಟ ದಾಖಲೆಗೂ ಪಾತ್ರವಾಗಿದೆ.

ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ 11 ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿ ಭಾರತ ದಾಖಲೆ ನಿರ್ಮಿಸಿದೆ. 2024 ರಿಂದ 2026ರ ಅವಧಿಯಲ್ಲಿನ ಪ್ರದರ್ಶನದಿಂದ ಈ ಸಾಧನೆ ಸಾಧ್ಯವಾಗಿದ್ದು, ಈ ಹಿಂದೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಲಾ ಎಂಟು ಗೆಲುವುಗಳ ದಾಖಲೆಯನ್ನು ಹೊಂದಿದ್ದವು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶಿವಂ ದುಬೆ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ, ನೆದರ್ಲೆಂಡ್ ಗೆ 194 ರನ್ ಗಳ ಸವಾಲಿನ ಗುರಿ ನೀಡಿತು.

ಭಾರತ ಪರ ಇನ್ನಿಂಗ್ಸ್ ಆರಂಭಿಸಿದ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಮೊದಲ ಓವರ್ ನಲ್ಲೇ ಡಕೌಟ್ ಆಗಿ ಮತ್ತೆ ನಿರಾಶೆ ಮೂಡಿಸಿದರು. ಈ ಸರಣಿಯಲ್ಲಿ ಇದು ಅವರ ಸತತ 3ನೇ ಡಕೌಟ್ ಆಗಿದೆ. ಅಭಿಷೇಕ್ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್ ಕೂಡ 18 ರನ್ ಗಳಿಸಿ ವಿಲಕ್ಷಣ ರೀತಿಯಲ್ಲಿ ಬೌಲ್ಡ್ ಆದರು. ಬಳಿಕ ತಿಲಕ್ ವರ್ಮಾ (31) ಮತ್ತು ನಾಯಕ ಸೂರ್ಯ ಕುಮಾರ್ ಯಾದವ್ (34) ಜೋಡಿ ಮೂರನೇ ವಿಕೆಟ್ ಗೆ 30 ರನ್ ಗಳ ಜೊತೆಯಾಟವಾಡಿತು.

ಬಳಿಕ ಸೂರ್ಯ ಜೊತೆಗೂಡಿದ ಶಿವಂದುಬೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದರೂ ಬಳಿಕ ಲಯಕಂಡುಕೊಂಡು ಉತ್ತಮ ಬ್ಯಾಟಿಂಗ್ ಮಾಡಿದರು.ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 66 ರನ್ ಚಚ್ಚಿದರು. ಮತ್ತೊಂದು ಬದಿಯಲ್ಲಿ ಹಾರ್ದಿಕ್ ಪಾಂಡ್ಯಾ ಕೂಡ 20 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 30 ರನ್ ಸಿಡಿಸಿ ಭಾರತದ ಸವಾಲಿನ ಮೊತ್ತಕ್ಕೆ ಕಾರಣರಾದರು.

ಭಾರತ ನೀಡಿದ 194 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ನೆದರ್ಲೆಂಡ್, 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ 17 ರನ್ ಗಳಿಂದ ಭಾರತ ಗೆಲುವಿನ ನಗೆ ಬೀರಿತು. ಭಾರತದ ಪರ ವರುಣ್ ಚಕ್ರವರ್ತಿ ಮೂರು ವಿಕೆಟ್ ಪಡೆದರೆ, ಶಿವಂದುಬೆ 2, ಹಾರ್ದಿಕ್ ಪಾಂಡ್ಯ ಹಾಗೂ ಬೂಮ್ರಾ ತಲಾ ಒಂದೊಂದು ವಿಕೆಟ್ ಪಡೆದರು. ಶಿವಂ ದುಬೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾರಿಗೆ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ; 26 ತಿಂಗಳ ಅರಿಯರ್ಸ್; ವೇತನ ಪರಿಷ್ಕರಣೆಗೆ ಒಪ್ಪಿಗೆ; ರದ್ದಾಗುತ್ತಾ ಮುಷ್ಕರ?

ಬಾಂಗ್ಲಾ ಪ್ರಧಾನಿಯಾದ ಬೆನ್ನಲ್ಲೇ ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾದ Tarique Rahman; ಆಯ್ಕೆ ಮಾಡಿದ ಜನರಿಂದಲೇ ಅವಮಾನ, ಆರೋಪ?

ಪಂಜಾಬ್: ಬಟಿಂಡಾದಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ, ಅಶ್ರುವಾಯು ಪ್ರಯೋಗ!

ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್-ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ! Video

'ಆಗಿದ್ದಾಯ್ತು ಬಿಡಿ.. ಏನ್ ಮಾಡೋಕ್ ಆಗುತ್ತೆ': S*X ನಿರಾಕರಿಸಿದ MBA ವಿದ್ಯಾರ್ಥಿನಿ ಕತ್ತು ಸೀಳಿದ ಧೂರ್ತನ ಮಾತು! Video

SCROLL FOR NEXT