ಸೂರ್ಯಕುಮಾರ್ ಯಾದವ್-ಅಭಿಷೇಕ್ ಶರ್ಮಾ 
ಕ್ರಿಕೆಟ್

ನನಗೂ ಚಿಂತೆಯಾಗಿದೆ: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಷೇಕ್ ಶರ್ಮಾ ಕುರಿತು ಸೂರ್ಯ ಸ್ಫೋಟಕ ಹೇಳಿಕೆ

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಈ ಸಮಯದಲ್ಲಿ ಯಾವುದೇ ಆತಂಕದಲ್ಲಿಲ್ಲ. ಅಭಿಷೇಕ್ ಶರ್ಮಾ ಸತತ ಮೂರು ಪಂದ್ಯಗಳಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರೂ ಅವರೂ ಸಹ ಚಿಂತಿತರಾಗಿಲ್ಲ.

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಈ ಸಮಯದಲ್ಲಿ ಯಾವುದೇ ಆತಂಕದಲ್ಲಿಲ್ಲ. ಅಭಿಷೇಕ್ ಶರ್ಮಾ ಸತತ ಮೂರು ಪಂದ್ಯಗಳಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರೂ ಅವರೂ ಸಹ ಚಿಂತಿತರಾಗಿಲ್ಲ. ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಸಂಪೂರ್ಣವಾಗಿ ಕೂಲ್ ಆಗಿ ಕಾಣುತ್ತಿದ್ದರು. ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಮುಗುಳ್ನಗುತ್ತಾ, ನಿಜ ಹೇಳಬೇಕೆಂದರೆ ಅಭಿಷೇಕ್ ಅವರ ಫಾರ್ಮ್ ಬಗ್ಗೆ ಚಿಂತಿತರಾಗಿರುವವರ ಬಗ್ಗೆ ನನಗೆ ಚಿಂತೆಯಾಗಿದೆ. ಜನರು ಏಕೆ ಇಷ್ಟೊಂದು ಚಿಂತಿಸುತ್ತಿದ್ದಾರೆ? ನಾನು ಅಭಿಷೇಕ್ ವಿರುದ್ಧ ಬೌಲಿಂಗ್ ಮಾಡಬೇಕಾದ ತಂಡಗಳ ಬಗ್ಗೆ ಯೋಚಿಸುತ್ತಿದ್ದೇನೆ. ಅವರು ಇನ್ನೂ ರನ್ ಗಳಿಸಿಲ್ಲ. ಆದರೆ ಅವರು ರನ್ ಗಳಿಸಿದ ದಿನ ಏನಾಗುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿದೆ ಎಂದು ಹೇಳಿದರು.

ಆಟದಲ್ಲಿ ಇಂತಹ ವಿಷಯಗಳು ನಡೆಯುತ್ತವೆ. ಶೂನ್ಯಕ್ಕೆ ಔಟಾಗುವುದು ಕ್ರಿಕೆಟ್‌ನಲ್ಲಿ ನಡೆಯುತ್ತಿರುತ್ತದೆ. ಆದರೆ ಇದು ತಂಡದ ಆಟ. ತಂಡವು ಈಗ ಈ ವ್ಯಕ್ತಿ ತನ್ನ ನೈಸರ್ಗಿಕ ಆಟವನ್ನು ಆಡಬೇಕೆಂದು ಬಯಸುತ್ತದೆ . ಅವನು ಅದನ್ನೇ ಮಾಡಲು ಪ್ರಯತ್ನಿಸುತ್ತಿದ್ದಾನೆ. ಎಲ್ಲವೂ ಸರಿಯಾಗಿ ನಡೆದರೆ, ಅದು ಅದ್ಭುತವಾಗಲಿದೆ. ಇಲ್ಲದಿದ್ದರೆ ನಾವು ಅದನ್ನು ನಿಭಾಯಿಸುತ್ತೇವೆ ಎಂದರು. ಅಭಿಷೇಕ್ ರನ್‌ಗಳ ಕೊರತೆಯ ಹೊರತಾಗಿಯೂ, ಟೀಮ್ ಇಂಡಿಯಾ ಆಡುವ XI ನಲ್ಲಿ ಬದಲಾವಣೆಗಳನ್ನು ಮಾಡುವ ಮನಸ್ಥಿತಿಯಲ್ಲಿಲ್ಲ ಎಂದು ತೋರುತ್ತದೆ. ಆದಾಗ್ಯೂ, ಅಗ್ರ 8 ಬ್ಯಾಟ್ಸ್‌ಮನ್‌ಗಳಲ್ಲಿ ಆರು ಎಡಗೈ ಬ್ಯಾಟ್ಸ್‌ಮನ್‌ಗಳು ಇರುವುದರಿಂದ ಎದುರಾಳಿ ಆಫ್‌ಸ್ಪಿನ್ನರ್‌ಗಳಿಗೆ ಕಾರ್ಯತಂತ್ರ ರೂಪಿಸುವುದು ಸುಲಭವಾಗಿದೆ.

ಅಭಿಷೇಕ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಆಡಿಸಬಹುದೇ ಎಂದು ಸೂರ್ಯ ಅವರನ್ನು ಕೇಳಿದಕ್ಕೆ ತಮಾಷೆಯಾಗಿ ನಾನು ನಿಜವಾಗಿಯೂ ಅಭಿಷೇಕ್ ಬದಲಿಗೆ ಸಂಜು ಅವರನ್ನು ಆಡಿಸಬೇಕೇ?" ಎಂದು ಕೇಳಿದರು. ಸ್ಯಾಮ್ಸನ್ 3ನೇ ಸ್ಥಾನದಲ್ಲಿ ಆಡಬಹುದೆಂದು ಕೇಳಿದ್ದಕ್ಕೆ ಸೂರ್ಯ ಆಶ್ಚರ್ಯ ವ್ಯಕ್ತಪಡಿಸಿದರು. ಹಾಗಾದರೆ, ನಾನು ತಿಲಕ್ ಅವರನ್ನು ಸಂಜು ಜೊತೆ ಬದಲಾಯಿಸಬೇಕೇ? ನೋಡಿ, ಪವರ್‌ಪ್ಲೇನಲ್ಲಿ ನಮ್ಮ ಬ್ಯಾಟಿಂಗ್ ಚೆನ್ನಾಗಿ ನಡೆಯುತ್ತಿದೆ. ನಾವು ಅಲ್ಲಿ 40-50 ರನ್‌ಗಳನ್ನು ಸೇರಿಸುತ್ತಿದ್ದೇವೆ. ನೀವು ನಮ್ಮಿಂದ 220-250 ರನ್‌ಗಳನ್ನು ನಿರೀಕ್ಷಿಸುತೀರಾ. ಆದರೆ ಇಲ್ಲಿನ ಪಿಚ್‌ಗಳು ಹಾಗಲ್ಲ. ನಾವು ಇಲ್ಲಿಯವರೆಗೆ ಆಡಿದ ನಾಲ್ಕು ಮೈದಾನಗಳು ವಿಭಿನ್ನ ಸವಾಲುಗಳನ್ನು ಒಡ್ಡಿವೆ. ಮೊದಲು, ಎದುರಾಳಿಗಳು ಹೆಚ್ಚು ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿರಲಿಲ್ಲ. ಆದರೆ ಈಗ ಅವು ಹಾಗೆ ನಡೆಯುತ್ತಿಲ್ಲ. ನಾವು ಅದಕ್ಕೆ ಪರಿಹಾರವನ್ನು ಕಂಡುಕೊಂಡಿದ್ದೇವೆ. ಸೂಪರ್ 8ರಲ್ಲಿ ಅದರ ಪರಿಣಾಮವನ್ನು ನೀವು ನೋಡುತ್ತೀರಿ ಎಂದರು.

ನಮಗೆ ಒತ್ತಡವಿಲ್ಲ ಎಂದು ಹೇಳುವುದು ತಪ್ಪು. ನೀವು ಮನೆಯಲ್ಲಿ ಇಷ್ಟು ದೊಡ್ಡ ಟೂರ್ನಮೆಂಟ್ ಆಡುವಾಗ, ನೀವು ಒತ್ತಡವನ್ನು ಅನುಭವಿಸುವುದು ಖಚಿತ. ನೀವು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನೀವು ಎಲ್ಲಿಗೆ ಹೋದರೂ ಜನರು ಒಂದೇ ಮಾತನ್ನು ಹೇಳುತ್ತಾರೆ, ನಾವು ವಿಶ್ವಕಪ್ ಗೆಲ್ಲಬೇಕು. ಪ್ರತಿಯೊಬ್ಬ ಆಟಗಾರನು ಈ ಒತ್ತಡವನ್ನು ಎದುರಿಸಲು ತನ್ನದೇ ಆದ ಮಾರ್ಗವನ್ನು ಹೊಂದಿರುತ್ತಾನೆ. ನಾವು ವಿಷಯಗಳನ್ನು ಸಾಧ್ಯವಾದಷ್ಟು ಸರಳವಾಗಿಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ