ಬಾಬರ್ ಅಜಮ್-ಮೈಕ್ ಹೆಸ್ಸನ್ 
ಕ್ರಿಕೆಟ್

ತಾಕತ್ ಇಲ್ಲ, ಹೀಗಾಗಿ 4ನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ: ಬಾಬರ್ ಅಜಮ್ ಮಾನ ಕಳೆದ ಪಾಕ್ ಕೋಚ್ ಮೈಕ್ ಹೆಸ್ಸನ್!

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ವಿವಾದಗಳ ಸರಣಿ ನಿರಂತರವಾಗಿ ಮುಂದುವರೆದಿದೆ. ಬಾಬರ್ ಅಜಮ್ ಅವರ ಬ್ಯಾಟಿಂಗ್ ಮತ್ತು ಅವರ ಪಾತ್ರದ ಬಗ್ಗೆ ಮುಖ್ಯ ಕೋಚ್ ಮೈಕ್ ಹೆಸ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ನಲ್ಲಿ ವಿವಾದಗಳ ಸರಣಿ ನಿರಂತರವಾಗಿ ಮುಂದುವರೆದಿದೆ. ಬಾಬರ್ ಅಜಮ್ ಅವರ ಬ್ಯಾಟಿಂಗ್ ಮತ್ತು ಅವರ ಪಾತ್ರದ ಬಗ್ಗೆ ಮುಖ್ಯ ಕೋಚ್ ಮೈಕ್ ಹೆಸ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಬರ್ ಪವರ್‌ಪ್ಲೇ ಅಥವಾ ಅಂತಿಮ ಓವರ್‌ಗಳಿಗೆ ಸೂಕ್ತವಲ್ಲ ಎಂದು ಕೋಚ್ ಹೇಳಿದ್ದಾರೆ. ಬಾಬರ್ ಮೊದಲ ಆರು ಓವರ್‌ಗಳಲ್ಲಿ ಅವರಿಗೆ ಸ್ಫೋಟಕ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಸ್ಟ್ರೈಕ್ ರೇಟ್ 100ಕ್ಕಿಂತ ಕಡಿಮೆಯಿದೆ. ಹೀಗಾಗಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ ಎಂದು ಮೈಕ್ ಹೆಸ್ಸನ್ ಹೇಳಿದರು. ಇನ್ನು 10ನೇ ಓವರ್ ನಂತರವೂ ಆಡಲು ಸಾಧ್ಯವಾಗದಿದ್ದರೆ, ಅವರು ತಂಡದಲ್ಲಿ ಏಕೆ ಆಡುತ್ತಿದ್ದಾರೆ? ಎಂದು ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ.

ನಾಯಕ ಸಲ್ಮಾನ್ ಅಲಿ ಅಘಾ ನೇತೃತ್ವದಲ್ಲಿ, ಬಾಬರ್ ಅಜಮ್ ಅವರನ್ನು 2026ರ ಟಿ20 ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟಿಂಗ್ ಸ್ಥಾನದಿಂದ 4ನೇ ಸ್ಥಾನಕ್ಕೆ ಇಳಿಸಲಾಗಿದೆ. ಅವರ ಗುಂಪು ಹಂತದ ಪ್ರದರ್ಶನ ನಿರಾಶಾದಾಯಕವಾಗಿತ್ತು. ನೆದರ್ಲ್ಯಾಂಡ್ ಮತ್ತು ಭಾರತ ವಿರುದ್ಧ ವಿಫಲವಾಗಿದ್ದರೂ ಅಮೆರಿಕ ವಿರುದ್ಧ ಆಡಿ ಕಷ್ಟದ ಸಮಯದಲ್ಲಿ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದ್ದ ಬಾಬರ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ ಎಂದು ಕೋಚ್ ಹೆಸ್ಸನ್ ವಾದಿಸಿದರು.

ತಂಡ ಸಂಕಷ್ಟದಲ್ಲಿದ್ದಾಗ ಮಧ್ಯಮ ಓವರ್‌ಗಳಲ್ಲಿ ಇನ್ನಿಂಗ್ಸ್‌ಗೆ ಸ್ಥಿರತೆ ನೀಡಲು ಬಾಬರ್ ಅಜಮ್ ಸೂಕ್ತ ಆಟಗಾರ. ಆದರೆ ಬಾಬರ್ ಪವರ್ ಹಿಟ್ಟರ್ ಅಲ್ಲ ಎಂಬುದು ಸತ್ಯ. ಪಂದ್ಯದ 12ನೇ ಓವರ್ ನಂತರ ಬಾಬರ್ ಅಜಮ್ ಕ್ರೀಸ್‌ಗೆ ಬರುವುದು ತಂಡಕ್ಕೆ ಅಷ್ಟೊಂದು ಲಾಭದಾಯಕವಲ್ಲ. ಆ ಸಮಯದಲ್ಲಿ ಅವರಿಗಿಂತ ವೇಗವಾಗಿ ರನ್ ಗಳಿಸುವ ಪವರ್ ಹಿಟ್ಟರ್‌ಗಳು ತಂಡಕ್ಕೆ ಅಗತ್ಯ ಎಂದು ಹೆಸ್ಸನ್ ಹೇಳಿದರು.

ಆದಾಗ್ಯೂ, ಪತ್ರಿಕಾಗೋಷ್ಠಿಯಲ್ಲೇ ಕೋಚ್‌ ಇಂತಹ ಹೇಳಿಕೆ ನೀಡಿರುವುದು ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬನೆಂದು ಪರಿಗಣಿಸಲಾದ ಬಾಬರ್ ಅಜಮ್ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಟಿ20 ವಿಶ್ವಕಪ್ ಗುಂಪು ಹಂತದ ಪಂದ್ಯಗಳಲ್ಲಿ ಬಾಬಾರ್ ಅಜಮ್ ನೆದರ್ಲ್ಯಾಂಡ್ಸ್ ವಿರುದ್ಧ 18 ಎಸೆತಗಳಲ್ಲಿ 15 ಮತ್ತು ಭಾರತ ವಿರುದ್ಧ 7 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ದೆಹಲಿಯಲ್ಲಿ ಸಿದ್ದರಾಮಯ್ಯ-ಡಿಕೆ.ಶಿವಕುಮಾರ್; ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಬೀಳುತ್ತಾ ತೆರೆ? ಕುತೂಹಲ ಮೂಡಿಸಿದ ಕಾಂಗ್ರೆಸ್ ಸಭೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ತಮಿಳುನಾಡು ಸರ್ಕಾರದಿಂದ ಮತ್ತೊಂದು ಮಹತ್ವದ ಘೋಷಣೆ: ಸಣ್ಣ ರೈತರ ₹50,000 ವರೆಗಿನೆ ಬೆಳೆ ಸಾಲ ಮನ್ನಾ!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

SCROLL FOR NEXT