ದಕ್ಷಿಣ ಆಫ್ರಿಕಾ ಆಟಗಾರರ ಸಂಭ್ರಮ 
ಕ್ರಿಕೆಟ್

T20 World cup 2026: ದಕ್ಷಿಣ ಆಫ್ರಿಕಾ ಎದುರು 76 ರನ್ ಗಳಿಂದ ಸೋತ ಭಾರತ!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಗಳ ಬೃಹತ್ ರನ್ ಗಳಿಸಿತು.

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-08 ಹಂತದ ಪಂದ್ಯದಲ್ಲಿ ಭಾರತವನ್ನು 76 ರನ್ ಗಳ ಅಂತರದಿಂದ ದಕ್ಷಿಣ ಆಫ್ರಿಕಾ ಸೋಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಗಳ ಬೃಹತ್ ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರರಾದ ಏಡೆನ್ ಮಾಕ್ರಾಮ್ 4, ಕ್ವಿಂಟಾನ್ ಡಿ ಕಾಕ್ ಹಾಗೂ ರಿಯಾನ್ ರೆಕೆಲ್ಟನ್ ಅವರನ್ನು ಕೇವಲ 7 ರನ್ ಗಳಿಗೆ ಫೆವಿಲಿಯನ್ ಗೆ ಅಟ್ಟುವಲ್ಲಿ ಟೀಂ ಇಂಡಿಯಾ ಬೌಲರ್ ಗಳು ಯಶಸ್ವಿಯಾದರು.

ಆದರೆ, ಡಿ. ಬ್ರೀವಿಸ್ 45 ಮತ್ತು ಡೇವಿಡ್ ಮಿಲ್ಲರ್ 63 ರನ್ ಗಳಿಸುವುದರೊಂದಿಗೆ ಭಾರತದ ಬೌಲರ್ ಗಳನ್ನು ಬೆಂಡತ್ತಿದರು. ಬಳಿಕ ಬಂದ ತ್ರಿಸ್ಟಾನ್ ಸ್ಟಾಬ್ಸ್ ಕೂಡಾ ಅಜೇಯ 44 ರನ್ ಗಳಿಸುವುದರೊಂದಿಗೆ ದಕ್ಷಿಣ ಆಫ್ರಿಕಾದ ರನ್ ವೇಗವನ್ನು ಹೆಚ್ಚಿಸಿದರು. ಈ ಮೂವರು ಆಟಗಾರರು ದಕ್ಷಿಣ ಆಫ್ರಿಕಾ ತಂಡ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು.

ಭಾರತದ ಪರ ಬೂಮ್ರಾ 3 ವಿಕೆಟ್ ಪಡೆದರೆ, ಅರ್ಶ್ ದೀಪ್ ಸಿಂಗ್ 2, ವರುಣ್ ಚಕ್ರವರ್ತಿ ಹಾಗೂ ಶಿವಂ ದುಬೆ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.

ದಕ್ಷಿಣ ಆಫ್ರಿಕಾ ನೀಡಿದ 188ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತದ ಪರ ಆರಂಭಿಕ ಆಟಗಾರರಾದ ಇಶಾನ್ ಕಿಶಾನ್, ರಿಯಾನ್ ಗೆ ಕ್ಯಾಚ್ ನೀಡಿ ಡೆಕ್ ಔಟ್ ಆದರು. ಅಭಿಷೇಕ್ ಶರ್ಮಾ ಕೇವಲ 15 ರನ್ ಗಳಿಗೆ ಕ್ಯಾಚ್ ನೀಡುವ ಮೂಲಕ ಮತ್ತೆ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಬಳಿಕ ಬಂದ ತಿಲಕ್ ವರ್ಮಾ ಕೇವಲ 1 ರನ್ ಗಳಿಗೆ ಕ್ವಿಂಟನ್ ಡಿ ಕಾಕ್ ಗೆ ಕ್ಯಾಚ್ ನೀಡಿ ಫೆವಿಲಿಯನ್ ಸೇರಿದರು.

ಉಳಿದಂತೆ ನಾಯಕ ಸೂರ್ಯ ಕುಮಾರ್ ಯಾದವ್ 18, ವಾಷಿಂಗ್ಟನ್ ಸುಂದರ್ 11 ರನ್ ಗಳಿಗೆ ಔಟಾಗುವ ಮೂಲಕ ಭಾರತದ ಅಭಿಮಾನಿಗಳಲ್ಲಿ ಭರವಸೆಯನ್ನು ಹುಸಿಗೊಳಿಸಿದರು. ಆಲ್ ರೌಂಡರ್ ಶಿವಂ ದುಬೆ ಮಾತ್ರ ಅತಿ ಹೆಚ್ಚು ಅಂದ್ರೆ 42 ರನ್ ಗಳಿಸಿದರು.

ಬಳಿಕ ಬಂದ ಹಾರ್ದಿಕ್ ಪಾಂಡ್ಯ 18 ರನ್ ಗಳಿಗೆ ತ್ರಿಸ್ತಾನ್ ಸ್ಟಾಬ್ಸ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅರ್ಶ್ ದೀಪ್ ಸಿಂಗ್ ಕೇವಲ 1 ರನ್ ಗಳಿಗೆ ಔಟಾದರು. ಹೀಗಾಗಿ ಭಾರತ 18.5 ಓವರ್ ಗಳಲ್ಲಿ 111 ರನ್ ಗಳಿಸುವುದರೊಂದಿಗೆ ಆಲೌಟ್ ಆಗುವುದರೊಂದಿಗೆ ದಕ್ಷಿಣ ಆಫ್ರಿಕಾ 76 ರನ್ ಗಳಿಂದ ಗೆಲುವಿನ ನಗೆ ಬೀರಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಂಚ ಪ್ರಕರಣ: BJP ಶಾಸಕ ಡಾ. ಚಂದ್ರು ಲಮಾಣಿ, ಇಬ್ಬರು ಆಪ್ತರಿಗೆ ನ್ಯಾಯಾಂಗ ಬಂಧನ!

ಅಣು ಶಕ್ತಿ ಒಪ್ಪಂದ ಮಾತುಕತೆ ವಿಫಲ? ಇರಾನ್ ಕಡೆಗೆ ಮಿಲಿಟರಿ ವಿಮಾನ, ಬೃಹತ್ 'ಏರ್ ಬ್ರಿಡ್ಜ್' ಸಜ್ಜುಗೊಳಿಸಿದ ಅಮೆರಿಕ! Video

ಜಮ್ಮು-ಕಾಶ್ಮೀರ: ಕಾಲಿಗೆ ಗುಂಡು ತಗುಲಿದರೂ ಮೂವರು ಜೈಷ್ ಉಗ್ರರನ್ನು ಹೊಡೆದುರುಳಿಸುವಲ್ಲಿ ನೆರವಾದ 'ಆರ್ಮಿ ಡಾಗ್' ಟೈಸನ್!

ಅಮೆರಿಕದಲ್ಲಿ ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯ! ಥಿಂಕ್ ಟ್ಯಾಂಕ್ Pew ಅಧ್ಯಯನ

ಪ್ರಿಯಾಂಕ್ ಖರ್ಗೆ ಕುಟುಂಬದಲ್ಲಿ ನಿಜವಾದ ದಲಿತತ್ವ ಇದೆಯೇ? ಛಲವಾದಿ ನಾರಾಯಣ ಸ್ವಾಮಿ ಪ್ರಶ್ನೆ! Video

SCROLL FOR NEXT