ಚೆನ್ನೈ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಭಾರಿ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಬ್ಯಾಟರ್ ಮೂಳೆ ಮುರಿತಕ್ಕೊಳಗಾಗಿದ್ದಾರೆ.
ಹೌದು.. ಯುವ ಆಟಗಾರ ಸಾಯಿ ಸುದರ್ಶನ್ ಗಂಭೀರ ಗಾಯಕ್ಕೆ ತುತ್ತಾಗಿದ್ದು, ಕೆಲವು ವಾರಗಳ ವರೆಗೆ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ. ಸಾಯಿ ಸುದರ್ಶನ್ ಪಕ್ಕೆಲುಬು ಗಾಯಕ್ಕೆ ಒಳಗಾಗಿದ್ದು, ಮುಂದಿನ 6 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ತಂಡಕ್ಕೆ ಇದು ದೊಡ್ಡ ಹಿನ್ನಡೆಯಾಗಿದೆ. ನ್ಯೂಜಿಲೆಂಡ್ ಸರಣಿ ಆಯ್ಕೆಗೆ ಪರಿಣಾಮವಿಲ್ಲದಿದ್ದರೂ, ಐಪಿಎಲ್ 2026 ಆರಂಭಕ್ಕೂ ಮುನ್ನ ಅವರ ಚೇತರಿಕೆ ನಿರ್ಣಾಯಕವಾಗಿದೆ.
ಮೂಲಗಳ ಪ್ರಕಾರ ಕೆಲವು ದಿನಗಳ ಹಿಂದೆ ಅಭ್ಯಾಸದ ಸಮಯದಲ್ಲಿ ಸಾಯಿ ಸುದರ್ಶನ್ ಅವರ ಪಕ್ಕೆಲುಬುಗಳಿಗೆ ಚೆಂಡು ತಗುಲಿತ್ತು. ಇದರ ನಡುವೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದ ಸುದರ್ಶನ್ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದ್ದರು. ಆದರೆ ಅದೇ ಪಂದ್ಯದಲ್ಲಿ ರನ್ಗಾಗಿ ಓಡುವ ವೇಳೆ ಸುದರ್ಶನ್ಗೆ ಪಕ್ಕೆಲುಬು ನೋವು ಮತ್ತಷ್ಟು ಹೆಚ್ಚಾಗಿತ್ತು.
ದೀರ್ಘಕಾಲ ಕ್ರಿಕೆಟ್‌ನಿಂದ ದೂರ!
ವರದಿಯ ಪ್ರಕಾರ ನೋವಿನ ನಡುವೆಯೂ ಆಟ ಮುಂದುವರೆಸಿದ್ದ ಸುದರ್ಶನ್ ಅವರನ್ನು ಪಂದ್ಯ ಮುಗಿದ ಬಳಿಕ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ದಾಖಲಿಸಲಾಗಿತ್ತು. ಇದೀಗ ಸುದರ್ಶನ್ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲಿದ್ದಾರೆ.
ಸುದರ್ಶನ್ ಸುಮಾರು 6 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಹೀಗಾಗಿ ಸಾಯಿ ಸುದರ್ಶನ್ ಬಾಕಿ ಉಳಿದಿರುವ ವಿಜಯ್ ಹಜಾರೆ ಟ್ರೋಫಿ ಲಭ್ಯರಾಗುವುದು ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
ತಂಡಕ್ಕಿಲ್ಲ ಸಮಸ್ಯೆ
ಇನ್ನು ಸಾಯಿ ಸುದರ್ಶನ್ ಗಾಯಗೊಂಡಿದ್ದರಿಂದ ಟೀಂ ಇಂಡಿಯಾ ಆಯ್ಕೆಗೆ ಯಾವುದೇ ಸಮಸ್ಯೆಯನ್ನುಂಟು ಮಾಡುವುದಿಲ್ಲ. ಏಕೆಂದರೆ ಅವರನ್ನು ಏಕದಿನ ಸರಣಿಗೆ ಅವರನ್ನು ಆಯ್ಕೆಗೆ ಪರಿಗಣಿಸುವ ಸಾಧ್ಯತೆಗಳಿರಲಿಲ್ಲ. ಆದರೆ ಸಾಯಿ ಸುದರ್ಶನ್ ಗಾಯಗೊಂಡಿರುವುದರಿಂದ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿರುವ ತಮಿಳುನಾಡು ತಂಡಕ್ಕೆ ದೊಡ್ಡ ಆಘಾತ ನೀಡಿದೆ.
ಮಾತ್ರವಲ್ಲದೇ 2026 ರ ಐಪಿಎಲ್ ಆರಂಭಕ್ಕೂ ಮುನ್ನ ಸುದರ್ಶನ್ ಗುಣಮುಖರಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಈ ಪಂದ್ಯಾವಳಿ ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗಲಿದ್ದು, ಸುದರ್ಶನ್ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ.