ಬಾಂಗ್ಲಾದೇಶ vs ಭಾರತ 
ಕ್ರಿಕೆಟ್

'ಬಾಲ ಸುಟ್ಕೋ ಬೇಡಿ': T20 ವಿಶ್ವಕಪ್ ಪಂದ್ಯ ಸ್ಥಳಾಂತರಕ್ಕೆ ಆಗ್ರಹಿಸಿದ್ದ ಬಾಂಗ್ಲಾದೇಶಕ್ಕೆ ಎಚ್ಚರಿಕೆ!

ಭಾರತ ಸರ್ಕಾರವು ಬಾಂಗ್ಲಾದೇಶ ಕ್ರಿಕೆಟಿಗರಿಗೆ 'ರಾಷ್ಟ್ರ ಮುಖ್ಯಸ್ಥ' ಮಟ್ಟದ ಭದ್ರತೆಯನ್ನು ಖಾತರಿಪಡಿಸಬಹುದು ಮತ್ತು ಆ ಸಂದರ್ಭದಲ್ಲಿ, ಚೆಂಡು ಮತ್ತೊಮ್ಮೆ ಬಾಂಗ್ಲಾದೇಶದ ಅಂಗಳದಲ್ಲಿರದೆ ಎಂದು ಹಕ್ ವಿವರಿಸಿದರು.

ಢಾಕಾ: ಐಪಿಎಲ್ ನಿಂದ ಬಾಂಗ್ಲಾದೇಶ ಕ್ರಿಕೆಟಿಗ ಮುಸ್ತಫಿಜುರ್ ರೆಹಮಾನ್ ರನ್ನು ಕೈಬಿಟ್ಟ ವಿಚಾರವಾಗಿ ಕೆಂಡಾಮಂಡಲವಾಗಿರುವ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಇದೀಗ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ಆಗ್ರಹಿಸುತ್ತಿದೆ. ಆದರೆ ಅದರ ಹಠಮಾರಿ ಧೋರಣೆ ಅದಕ್ಕೇ ತಿರುಗುಬಾಣವಾಗಲಿದೆ ಎಂದು ಹೇಳಲಾಗುತ್ತಿದೆ.

ಹೌದು.. ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ಬಾಂಗ್ಲಾದೇಶ ಹೊಸ ತಕರಾರು ತೆಗೆದಿದ್ದು, ಭಾರತದಲ್ಲಿ ಬಾಂಗ್ಲಾದೇಶ ಆಟಗಾರರಿಗೆ ಸುರಕ್ಷತೆ ಇಲ್ಲ. ಹೀಗಾಗಿ ಭಾರತದಲ್ಲಿ ನಡೆಯಲಿರುವ ಬಾಂಗ್ಲಾದೇಶದ ಪಂದ್ಯಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಆಗ್ರಹಿಸಿದೆ.

ಇದು ಇದೀಗ ಬಿಸಿಬಿ ಮತ್ತು ಬಿಸಿಸಿಐ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವಂತೆಯೇ ಈ ವಿಚಾರದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗಂಭೀರವಾಗಿ ಎಚ್ಚರಿಕೆಯ ನಡೆ ಇಡಬೇಕು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಿಇಒ ಆಗಿಯೂ ಸೇವೆ ಸಲ್ಲಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮಾಜಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ರಫುಲ್ ಹಕ್ ಹೇಳಿದ್ದಾರೆ.

ಮುಂಬರುವ 2026 ರ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸದಿರುವ ಬಾಂಗ್ಲಾದೇಶದ ನಿರ್ಧಾರದ ವಿರುದ್ಧ ಪರೋಕ್ಷ ಕಿಡಿಕಾರಿದ ಹಕ್, ಬಾಂಗ್ಲಾದೇಶವು 'ಭದ್ರತಾ ಕಾಳಜಿ'ಗಳನ್ನು ಉಲ್ಲೇಖಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ವಿನಂತಿಸುತ್ತಿದೆ.

ಬಿಸಿಸಿಐ ವಿನಂತಿಯ ಮೇರೆಗೆ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಬಾಂಗ್ಲಾದೇಶ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿದ ಸ್ವಲ್ಪ ಸಮಯದ ನಂತರ ಈ ವಿನಂತಿ ಬಂದಿತು. ಭಾರತ ಸರ್ಕಾರವು ಬಾಂಗ್ಲಾದೇಶ ಕ್ರಿಕೆಟಿಗರಿಗೆ 'ರಾಷ್ಟ್ರ ಮುಖ್ಯಸ್ಥ' ಮಟ್ಟದ ಭದ್ರತೆಯನ್ನು ಖಾತರಿಪಡಿಸಬಹುದು ಮತ್ತು ಆ ಸಂದರ್ಭದಲ್ಲಿ, ಚೆಂಡು ಮತ್ತೊಮ್ಮೆ ಬಾಂಗ್ಲಾದೇಶದ ಅಂಗಳದಲ್ಲಿರದೆ ಎಂದು ಹಕ್ ವಿವರಿಸಿದರು.

ಬಾಂಗ್ಲಾದೇಶ ಆದಾಯಕ್ಕೆ ಕೊಕ್ಕೆ

ಬಾಂಗ್ಲಾದೇಶ ಭಾರತಕ್ಕೆ ಪ್ರಯಾಣಿಸದಿರುವ ತಮ್ಮ ನಿಲುವಿಗೆ ಅಂಟಿಕೊಂಡು ವಿಶ್ವಕಪ್‌ನಿಂದ ಹೊರಗುಳಿಯಲು ನಿರ್ಧರಿಸಿದರೆ, ಅವರು ಆದಾಯದ ಪಾಲನ್ನು ಕಳೆದುಕೊಳ್ಳುತ್ತಾರೆ ಮತ್ತು ಬಿಸಿಸಿಐ ಜೊತೆ ಸಂಘರ್ಷಕ್ಕೆ ಒಳಗಾಗಬಹುದು ಎಂದು ಹಕ್ ಹೇಳಿದರು.

"ಈ ಸಂದರ್ಭದಲ್ಲಿ, ಭಾರತ ಸರ್ಕಾರವು ಬಾಂಗ್ಲಾದೇಶಕ್ಕೆ 'ರಾಷ್ಟ್ರ ಮುಖ್ಯಸ್ಥ' ಮಟ್ಟದ ಭದ್ರತೆಯನ್ನು ಒದಗಿಸುವುದಾಗಿ ಹೇಳುತ್ತದೆ ಎಂದು ನಾನು ನಂಬುತ್ತೇನೆ. ನಂತರ ಚೆಂಡು ಮತ್ತೆ ನಮ್ಮ ಅಂಗಳಕ್ಕೆ ಬರುತ್ತದೆ. ನಂತರ ನಾವು ಪ್ರಯಾಣಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತೇವೆ" ಎಂದು ಅಶ್ರಫುಲ್ ದಿ ಡೈಲಿ ಸ್ಟಾರ್‌ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ನನ್ನ ಅನುಭವದ ಆಧಾರದ ಮೇಲೆ, ಪಂದ್ಯಾವಳಿಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ, ಸ್ಥಳಗಳನ್ನು ಸ್ಥಳಾಂತರಿಸುವುದು ಅತ್ಯಂತ ಕಠಿಣ ಕೆಲಸ. ಇದಲ್ಲದೆ, ಬಾಂಗ್ಲಾದೇಶ ಆಡದಿದ್ದರೆ - ಅಥವಾ ಐಸಿಸಿ ಸ್ಥಳಾಂತರವನ್ನು ನಿರಾಕರಿಸಿದರೆ ಮತ್ತು ಬಾಂಗ್ಲಾದೇಶ ಹೊರಗುಳಿದರೆ - ಮಂಡಳಿಯು ವಿಶ್ವಕಪ್ ಆದಾಯದ ಪಾಲನ್ನು ಪಡೆಯುವ ಸಾಧ್ಯತೆಯಿಲ್ಲ. ಇದು ಬಿಸಿಸಿಐ ಜೊತೆ ನೇರ ಸಂಘರ್ಷಕ್ಕೂ ಕಾರಣವಾಗಬಹುದು" ಎಂದು ಅವರು ವಿವರಿಸಿದರು.

ಏತನ್ಮಧ್ಯೆ, ಭಾರತದೊಂದಿಗಿನ ದೇಶದ ರಾಜತಾಂತ್ರಿಕ ಸಂಬಂಧಗಳು ನಿರಂತರವಾಗಿ ಹದಗೆಡುತ್ತಿರುವ ನಡುವೆ, ಬಿಸಿಸಿಐ ಸೂಚನೆಯ ಮೇರೆಗೆ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ವಿಶ್ವದ ಅತಿದೊಡ್ಡ ಟಿ20 ಲೀಗ್‌ನಿಂದ ಹೊರಹಾಕಿದ್ದನ್ನು ಪ್ರತಿಭಟಿಸಲು ಬಾಂಗ್ಲಾದೇಶ ಐಪಿಎಲ್‌ನ ಮುಂಬರುವ ಋತುವಿನ ಪ್ರಸಾರವನ್ನು ನಿಷೇಧಿಸಿತು.

ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೇಳಿಕೆಯು, ಐಪಿಎಲ್ ಫ್ರಾಂಚೈಸ್ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 2026 ರ ಪಟ್ಟಿಯಿಂದ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡುವಾಗ ಬಿಸಿಸಿಐ ಯಾವುದೇ "ತಾರ್ಕಿಕ ಕಾರಣ" ನೀಡಿಲ್ಲ ಎಂದು ಹೇಳಿದೆ. ಅಂದಹಾಗೆ ಐಪಿಎಲ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ವಶಪಡಿಸಿಕೊಂಡಿದ್ದ ತೈಲ ಟ್ಯಾಂಕರ್ ನಲ್ಲಿ ಮೂವರು ಭಾರತೀಯರೂ ಇದ್ದರು!

'ಧೈರ್ಯ ಇದ್ದರೆ ಈಗ ಮುಟ್ಟಿ..': ಅಮೆರಿಕಕ್ಕೆ ರಷ್ಯಾ ಸವಾಲು; ಅಣ್ವಸ್ತ್ರ ನೌಕೆಗಳ ನಿಯೋಜನೆ, US ಹಡುಗುಗಳ ಮುಳುಗಿಸಲು ಕರೆ!

RCB ಅಭಿಮಾನಿಗಳಿಗೆ ತೀವ್ರ ನಿರಾಸೆ: ಚಿನ್ನಸ್ವಾಮಿಗಿಲ್ಲ IPL ಭಾಗ್ಯ?, ಹೊಸ ತವರು ಮೈದಾನ ಬಹುತೇಕ ಫಿಕ್ಸ್!

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಈಗ ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಪರ್ಧೆ!

ನಟಿ ಜಯಮಾಲ, ಸಾ.ರಾ ಗೋವಿಂದುಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ; ಎಂ.ಎಸ್ ಸತ್ಯುಗೆ ಪುಟ್ಟಣ್ಣ ಕಣಗಾಲ್ ಅವಾರ್ಡ್

SCROLL FOR NEXT