ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2026ರ ನಾಲ್ಕನೇ ಆವೃತ್ತಿಗೂ ಮುನ್ನ ಗುಜರಾತ್ ಜೈಂಟ್ಸ್ (ಜಿಜಿ) ಆಶಿಸಿದ್ದು ನಿಜವಾಗಿಲ್ಲ. ಏಕೆಂದರೆ, ವಿಕೆಟ್ ಕೀಪರ್-ಬ್ಯಾಟರ್ ಯಸ್ತಿಕಾ ಭಾಟಿಯಾ ಅವರು ಪಂದ್ಯಾವಳಿಯಿಂದಲೇ ಹೊರಗುಳಿದಿದ್ದಾರೆ. ಆದರೆ, ಜಿಜಿ ಇದೀಗ ತಂಡದಲ್ಲಿ ಬದಲಿ ಆಟಗಾರ್ತಿಯನ್ನು ತರಲು ಸಾಧ್ಯವಿಲ್ಲ. ಇತ್ತೀಚೆಗೆ ನಡೆದ ಹರಾಜಿನಲ್ಲಿ ₹50 ಲಕ್ಷಕ್ಕೆ ಖರೀದಿಸಲಾದ 25 ವರ್ಷದ ಆಟಗಾರ್ತಿ ನಿರಂತರ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ವಿಫಲರಾಗಿದ್ದಾರೆ. ಇದು ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಭಾರತ ಸರಣಿ ಮತ್ತು ಮಹಿಳಾ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅವರಿಗೆ ಅವಕಾಶ ನೀಡಿಲ್ಲ. ಅಲ್ಲಿ, ಅವರ ಬದಲಿಗೆ ಉಮಾ ಚೇಟ್ರಿ ಸ್ಥಾನ ಪಡೆದಿದ್ದಾರೆ.
ಗುಜರಾತ್ ಜೈಂಟ್ಸ್ ತಂಡವು ಯಸ್ತಿಕಾ ಅವರನ್ನು ಹರಾಜಿನಲ್ಲಿ ಖರೀದಿಸುವಾಗಲೇ ಅವರು ಗಾಯಗೊಂಡಿದ್ದರಿಂದ ಅವರ ಬದಲಿ ಆಟಗಾರ್ತಿಯನ್ನು ತರಲು ಸಾಧ್ಯವಿಲ್ಲ ಮತ್ತು ಅಸ್ತಿತ್ವದಲ್ಲಿರುವ ಬಿಸಿಸಿಐ ನಿಯಮಗಳ ಅಡಿಯಲ್ಲಿ, ಖರೀದಿಯ ಸಮಯದಲ್ಲಿ ಲಭ್ಯವಿಲ್ಲದ ಆಟಗಾರರನ್ನು ಬದಲಿಸಲು ತಂಡಗಳಿಗೆ ಅನುಮತಿ ಇಲ್ಲ. WPL ಮೆಗಾ ಹರಾಜಿನ ಮೊದಲೇ ಬಿಸಿಸಿಐ ಇದನ್ನು ಸ್ಪಷ್ಟಪಡಿಸಿದೆ. ಹೀಗಾಗಿ, ಗುಜರಾತ್ ತಂಡವು ತಮ್ಮ ಪ್ರಾಥಮಿಕ ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಮತ್ತು ಮೊದಲ ಆಯ್ಕೆಯ ವಿಕೆಟ್‌ಕೀಪರ್ ಇಲ್ಲದೆ, ಇಡೀ ಆವೃತ್ತಿಯನ್ನು ಎದುರಿಸಬೇಕಿದೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗ್ರೂಪ್ ಪಂದ್ಯದ ಸಮಯದಲ್ಲಿ ಗಾಯದ ಹೊರತಾಗಿಯೂ, ಯುಪಿ ವಾರಿಯರ್ಸ್ ತಂಡಕ್ಕೆ ಬಿಕರಿಯಾದ ಪ್ರತೀಕಾ ರಾವಲ್ ವಿಷಯದಲ್ಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿದೆ.
ಗುಜರಾತ್ ಜೈಂಟ್ಸ್ ತಂಡವು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋದೊಂದಿಗೆ ಈ ಹಿನ್ನಡೆಯನ್ನು ಒಪ್ಪಿಕೊಂಡಿದೆ. ತಂಡದ ಸದಸ್ಯರು ಮತ್ತು ಸಿಬ್ಬಂದಿ ಯಸ್ತಿಕಾ ಅವರ ಅನುಪಸ್ಥಿತಿ ಬಗ್ಗೆ ನಿರಾಶೆ ವ್ಯಕ್ತಪಡಿಸುತ್ತಾ, ಅವರು ಬೇಗನೆ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.
2026ರ WPL ನಿಂದ ಹೊರಗುಳಿದವರ ಪೈಕಿ ಯಸ್ತಿಕಾ ಅವರೇ ಮೊದಲಿಗರಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು UP ವಾರಿಯರ್ಜ್ ತಂಡ ಕೂಡ ಇದೇ ರೀತಿಯ ಅನಿಶ್ಚಿತತೆಯನ್ನು ಎದುರಿಸುತ್ತಿವೆ. ಪೂಜಾ ವಸ್ತ್ರಕರ್ ಮತ್ತು ಪ್ರತೀಕಾ ರಾವಲ್ ಸಂಪೂರ್ಣ ಫಿಟ್ನೆಸ್ ಪಡೆಯಲು ಹೋರಾಡುತ್ತಿದ್ದಾರೆ. ಇಬ್ಬರೂ ಚೇತರಿಸಿಕೊಳ್ಳುವಲ್ಲಿ ವಿಫಲವಾದರೆ, ಅವರ ಫ್ರಾಂಚೈಸಿಗಳು ಸಹ ಬದಲಿ ಆಟಗಾರರನ್ನು ಸಹಿ ಮಾಡುವುದಕ್ಕೆ ಅವಕಾಶವಿಲ್ಲದಂತಾಗುತ್ತದೆ.
ಆಸ್ಟ್ರೇಲಿಯಾದ ಐಕಾನ್‌ಗಳಾದ ಎಲಿಸ್ ಪೆರ್ರಿ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ಇಬ್ಬರೂ ವೈಯಕ್ತಿಕ ಕಾರಣಗಳನ್ನು ನೀಡಿ WPL 2026 ರಿಂದ ಹಿಂದೆ ಸರಿದಿದ್ದಾರೆ. ಎಲಿಸ್ ಪೆರ್ರಿ ಅವರ ಅಲಭ್ಯತೆಯು ಆರ್‌ಸಿಬಿಗೆ ಸಂಕಷ್ಟ ತಂದೊಡ್ಡಿದರೆ, ಸದರ್ಲ್ಯಾಂಡ್ ಅನುಪಸ್ಥಿತಿಯು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಅನ್ನು ಸಹ ಬೃಹತ್ ಪ್ರಮಾಣದಲ್ಲಿ ದುರ್ಬಲಗೊಳಿಸಿದೆ. ಆರ್‌ಸಿಬಿ ತ್ವರಿತವಾಗಿ ಸಯಾಲಿ ಸತ್‌ಘರೆ ಅವರನ್ನು ₹30 ಲಕ್ಷ ಮೂಲ ಬೆಲೆಗೆ ಡ್ರಾಫ್ಟ್ ಮಾಡಿದ್ದರೆ, ಡಿಸಿ ಲೆಗ್-ಸ್ಪಿನ್ನರ್ ಅಲಾನಾ ಕಿಂಗ್ ಅವರನ್ನು ₹60 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದೆ.
ಗುಜರಾತ್ ಜೈಂಟ್ಸ್ WPL 2026 ತಂಡ
ಡ್ಯಾನಿ ವ್ಯಾಟ್-ಹಾಡ್ಜ್, ಬೆತ್ ಮೂನಿ (ವಿಕೆಟ್ ಕೀಪರ್), ಶಿವಾನಿ ಸಿಂಗ್, ಭಾರತಿ ಫುಲ್ಮಾಲಿ, ಸೋಫಿ ಡಿವೈನ್, ಆಶ್ಲೀಗ್ ಗಾರ್ಡ್ನರ್ (ನಾಯಕಿ), ಜಾರ್ಜಿಯಾ ವೇರ್ಹ್ಯಾಮ್, ಕನಿಕಾ ಅಹುಜಾ, ಆಯುಷಿ ಸೋನಿ, ಕಾಶ್ವೀ ಗೌತಮ್, ತನುಜಾ ಕನ್ವರ್, ಕಿಮ್ ಗಾರ್ತ್, ಅನುಷ್ಕಾ ಶರ್ಮಾ, ಹ್ಯಾಪಿ ಕುಮಾರಿ, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್ ಠಾಕೂರ್.