ಕ್ರಿಕೆಟ್

Vijay Hazare Trophy: ಸೆಮಿಫೈನಲ್‌ಗೆ ಕರ್ನಾಟಕ ಲಗ್ಗೆ

ಮುಂಬೈ ನೀಡಿದ 255 ರನ್ ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಪರ ಮಾಯಾಂಕ್ ಅಗರವಾಲ್ 12 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ದೇವದತ್ ಪಡಿಕ್ಕಲ್ ಅಜೇಯ 81 ಹಾಗೂ ಕರುಣ್ ನಾಯರ್ ಅಜೇಯ 74 ರನ್ ಗಳಿಸಿದ್ದರು.

ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 254 ರನ್ ಪೇರಿಸಿತು.

ಮುಂಬೈ ನೀಡಿದ 255 ರನ್ ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಪರ ಮಾಯಾಂಕ್ ಅಗರವಾಲ್ 12 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ದೇವದತ್ ಪಡಿಕ್ಕಲ್ ಅಜೇಯ 81 ಹಾಗೂ ಕರುಣ್ ನಾಯರ್ ಅಜೇಯ 74 ರನ್ ಗಳಿಸಿದ್ದರು. ಇಬ್ಬರೂ 143 ರನ್ ಗಳ ಜೊತೆಯಾಟವಾಡಿದರು. ಕರ್ನಾಟಕ ತಂಡ 33 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಪೇರಿಸಿತ್ತು. ಈ ವೇಳೆ ಮಳೆಯಾಗಿದ್ದರಿಂದ ಪಂದ್ಯ ಸ್ಥಗಿತಗೊಂಡಿತ್ತು. ಅಂತಿಮವಾಗಿ ವಿಜೆಡಿ ನಿಯಮದಡಿ ಕರ್ನಾಟಕ ತಂಡ 55 ರನ್ ಗಳಿಂದ ಗೆಲುವು ಸಾಧಿಸಿದೆ. ಗ್ರೂಪ್ ಎ ತಂಡದಲ್ಲಿದ್ದ ಕರ್ನಾಟಕ ಇದೀಗ ಸೆಮಿಫೈನಲ್ ಗೆ ಪ್ರವೇಶಿಸಿದೆ.

ಮುಂಬೈ ಪರ ಬ್ಯಾಟಿಂಗ್ ನಲ್ಲಿ ರಘುವಂಶಿ 27, ಇಶಾನ್ 20, ಸಿದ್ದೇಶ್ ಲಾಡ್ 38, ಶಮ್ಸ್ ಮೌಲಾನಿ 86 ಮತ್ತು ಸಾಯಿರಾಜ್ ಪಾಟೀಲ್ ಅಜೇಯ 33 ರನ್ ಗಳಿಸಿದ್ದು ತಂಡದ ಮೊತ್ತ 254 ರನ್ ಗೆ ತಲುಪಲು ಸಾಧ್ಯವಾಯಿತು. ಕರ್ನಾಟಕ ಪರ ಬೌಲಿಂಗ್ ನಲ್ಲಿ ವಿದ್ಯಾಧಾರ್ ಪಾಟೀಲ್ 3, ವಿಧ್ವತ್ ಕಾವೇರಪ್ಪ, ಅಭಿಲಾಶ್ ಶೆಟ್ಟಿ ತಲಾ 2 ವಿಕೆಟ್ ಪಡೆದರೆ ವಿಜಯ್ ಕುಮಾರ್ ವ್ಯಾಸಕ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ