ಸಿಸಿಎಲ್ ಕ್ರಿಕೆಟ್ ಹಬ್ಬ ಮತ್ತೆ ಶುರುವಾಗಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಮೊದಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದೆ ಶೇರ್ ಪಂದ್ಯ ನಿನ್ನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಮೊದಲ ಪಂದ್ಯವನ್ನು ಕರ್ನಾಟಕ ಬುಲ್ಡೋಜರ್ ಗೆದ್ದಿದೆ.
ಪ್ರದೀಪ್ ಅವರ ಬೌಲಿಂಗ್ ವೇಳೆ ಬಬ್ಬಲ್ ಅವರು ಬ್ಯಾಟಿಂಗ್ ನಿಂತಿದ್ದರು. ಅವರು ಬೀಸಲು ಹೋಗಿ ಬಾಲ್ ಬ್ಯಾಟ್ಗೆ ಟಚ್ ಆಗಿ ಕೀಪರ್ನಿಂದ ಹೊರ ಹೋಗುತ್ತಿತ್ತು. ಈ ವೇಳೆ ಕಿಚ್ಚ ಸುದೀಪ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ವಿಶಾಖಪಟ್ಟಣಂನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಕಳೆದ ಆವೃತ್ತಿಯ ಸಿಸಿಎಲ್‌ನಲ್ಲಿ ಪ್ರತಿ ತಂಡಗಳಿಗೂ 10 ಓವರ್‌ಗಳ ಎರಡು ಇನಿಂಗ್ಸ್ ನೀಡಲಾಗಿತ್ತು. ಆದರೆ ಈ ಬಾರಿ 20 ಓವರ್‌ಗಳ ಪಂದ್ಯವನ್ನು ನಡೆಸಲಾಯಿತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡಕ್ಕೆ ಆರಂಭದಲ್ಲಿ ಭಾರೀ ಪೆಟ್ಟು ಬಿದ್ದಿತು.