ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 2026ರ ಟಿ20 ವಿಶ್ವಕಪ್‌ಗಾಗಿ ತನ್ನ 15 ಸದಸ್ಯರ ತಂಡವನ್ನು ಭಾನುವಾರ ಪ್ರಕಟಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಟೂರ್ನಿ ಬಹಿಷ್ಕಾರದ ಕುರಿತು ಹೇಳಿಕೆ ನೀಡಿದ ಕೇವಲ ಒಂದು ದಿನದ ನಂತರ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಟೂರ್ನಿಯಲ್ಲಿ ಆಡಬೇಕಾ ಇಲ್ಲವೆ ಎಂಬುದನ್ನು ಪಾಕ್ ಸರ್ಕಾರ ನಿರ್ಧರಿಸಲಿದೆ.
ಭದ್ರತಾ ಕಾರಣಗಳಿಂದಾಗಿ ಬಾಂಗ್ಲಾದೇಶ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ಬಾಂಗ್ಲಾದೇಶ ಹಿಂದೆ ಸರಿದ ನಂತರ ಸ್ಕಾಟ್ಲೆಂಡ್ ಅನ್ನು ಬಾಂಗ್ಲಾದೇಶದ ಸ್ಥಾನದಲ್ಲಿ ಸೇರಿಸಲಾಗಿದೆ. ಪಾಕಿಸ್ತಾನವನ್ನು ನೆದರ್ಲ್ಯಾಂಡ್ಸ್, ಯುಎಸ್ಎ, ನಮೀಬಿಯಾ ಮತ್ತು ಭಾರತದೊಂದಿಗೆ ಗ್ರೂಪ್ ಎ ನಲ್ಲಿ ಇರಿಸಲಾಗಿದೆ. ಪಾಕಿಸ್ತಾನ ಫೆಬ್ರವರಿ 7ರಂದು ಕೊಲಂಬೊದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಸಲ್ಮಾನ್ ಅಲಿ ಅಘಾ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಂಡವನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಪಿಸಿಬಿ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಮತ್ತು ಆಯ್ಕೆ ಸಮಿತಿ ಸದಸ್ಯ ಆಕಿಬ್ ಜಾವೇದ್, ನಾಯಕ ಸಲ್ಮಾನ್ ಅಘಾ ಮತ್ತು ವೈಟ್-ಬಾಲ್ ತಂಡದ ಮುಖ್ಯ ತರಬೇತುದಾರ ಮೈಕೆಲ್ ಜೇಮ್ಸ್ ಹೆಸ್ಸನ್ ಉಪಸ್ಥಿತರಿದ್ದರು.
ನಾವು ಆಯ್ಕೆದಾರರು, ತಂಡವನ್ನು ಆಯ್ಕೆ ಮಾಡುವುದು ನಮ್ಮ ಕೆಲಸ. ನಾವು ಗಡುವಿಗೆ ಬಹಳ ಹತ್ತಿರದಲ್ಲಿ ತಂಡವನ್ನು ಘೋಷಿಸಿದ್ದೇವೆ. ಸರ್ಕಾರವು ಪಂದ್ಯಾವಳಿಯಲ್ಲಿ ನಮ್ಮ ಭಾಗವಹಿಸುವಿಕೆಯನ್ನು ನಿರ್ಧರಿಸುತ್ತದೆ. ಆದ್ದರಿಂದ ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅಧ್ಯಕ್ಷರು ಸಹ ಅದೇ ಮಾತನ್ನು ಹೇಳಿದ್ದಾರೆ. ನಾವು ಈಗ ಸರ್ಕರಾದ ನಿರ್ಧಾರಕ್ಕಾಗಿ ಕಾಯುತ್ತೇವೆ ಎಂದು ಆಕಿಬ್ ಜಾವೇದ್ ತಿಳಿಸಿದ್ದಾರೆ.
ಪಾಕಿಸ್ತಾನದ ಪೂರ್ಣ ಟಿ20 ವಿಶ್ವಕಪ್ ತಂಡ
ಸಲ್ಮಾನ್ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ನಫೆ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಸಲ್ಮಾನ್ ಮಿರ್ಜಾ, ನಸೀಮ್ ಶಾ, ಸಾಹಿಬ್ಜಾದಾ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯೂಬ್, ಶಾಹೀನ್ ಶಾ ಅಫ್ರಿದಿ, ಶಾದಬ್ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಮತ್ತು ಉಸ್ಮಾನ್ ತಾರಿಕ್.