ಸಿವರ್ ಬ್ರಂಟ್ 
ಕ್ರಿಕೆಟ್

WPL ಇತಿಹಾಸದಲ್ಲೇ ಇದೇ ಮೊದಲು: 'ಚೊಚ್ಚಲ ಶತಕ' ಸಿಡಿಸಿ, ಹೊಸ ದಾಖಲೆ ಬರೆದ ಸಿವರ್ ಬ್ರಂಟ್!

ವಡೋದರಾದ BCA ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 57 ಎಸೆತಗಳಲ್ಲಿ ಶತಕ ಬಾರಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ 200 ಟಾರ್ಗೆಟ್ ನೀಡುವಲ್ಲಿ ಪ್ರಮುಖ ಕೊಡುಗೆ ನೀಡಿದರು.

ವಡೋದರಾ: ಮಹಿಳಾ ಕ್ರಿಕೆಟ್ ಲೀಗ್ (WPL) ನಲ್ಲಿ ಚೊಚ್ಚಲ ಶತಕ ದಾಖಲಾಗಿದೆ. ಇಂಗ್ಲೆಂಡ್‌ ತಂಡದ ನಾಯಕಿ, ಮುಂಬೈ ಇಂಡಿಯನ್ಸ್‌ (MI) ಆಲ್‌ರೌಂಡರ್‌ ನಾಟ್- ಸಿವರ್ ಬ್ರಂಟ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ವಡೋದರಾದ BCA ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 57 ಎಸೆತಗಳಲ್ಲಿ ಶತಕ ಬಾರಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ 200 ಟಾರ್ಗೆಟ್ ನೀಡುವಲ್ಲಿ ಪ್ರಮುಖ ಕೊಡುಗೆ ನೀಡಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜೀವನ್ ಸಜನಾ, ಕೇವಲ 7 ರನ್ ಗಳಿಗೆ ಎಲ್ ಬಿ ಬಲೆಗೆ ಬಿದ್ದರು. ನಂತರ ಹೇಲಿ ಮ್ಯಾಥ್ಯೂಸ್ ಜೊತೆಗೂಡಿದ ಬ್ರಂಟ್‌ 32 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ತದನಂತರ 25 ಎಸೆತಗಳಲ್ಲಿ 50 ರನ್‌ ಹೊಡೆದರು.

73 ಎಸೆತಗಳಲ್ಲಿ 131 ರನ್‌ ಜೊತೆಯಾಟವಾಡಿದ ಬ್ರಂಟ್‌ ನಾಲ್ಕನೇ ವಿಕೇಟಿಗೆ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಜೊತೆ 25 ಎಸೆತಗಳಲ್ಲಿ 42 ರನ್‌ ಜೊತೆಯಾಟವಾಡಿದರು.

ಹೇಲಿ ಮ್ಯಾಥ್ಯೂಸ್ 56 ರನ್‌(39 ಎಸೆತ, 9 ಬೌಂಡರಿ), ಪದ್ಮಶ್ರೀ ವಿಜೇತೆ ಹರ್ಮನ್‌ ಪ್ರೀತ್‌ ಕೌರ್‌ 20 ರನ್‌(12 ಎಸೆತ, 2 ಬೌಂಡರಿ, 1 ಸಿಕ್ಸ್‌) ಹೊಡೆದು ಔಟಾದರು.

ಸಿವರ್ ಬ್ರಂಟ್ ಅವರ ಸ್ಫೋಟಕ ಶತಕದಿಂದ ಮುಂಬೈ ಇಂಡಿಯನ್ಸ್ 4 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆದಿದ್ದು, ಆರ್ ಸಿಬಿ ಗೆಲ್ಲಲು 200 ರನ್ ಗಳ ದೊಡ್ಡ ಟಾರ್ಗೆಟ್ ನೀಡಿದೆ. ಈಗಾಗಲೇ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಿದ್ದು, ಇಂದಿನ ಪಂದ್ಯ ಗೆದ್ದರೆ ಫೈನಲ್‌ ಪ್ರವೇಶಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಖಮೇನಿ ಕಾಲು ಕಟ್, ಕೋಮಾ ಸ್ಥಿತಿಯಲ್ಲಿ ಇರಾನ್ ನೂತನ ಪರಮೋಚ್ಛ ನಾಯಕ..?

ಇಂದು ಏನಾಗಲಿದೆ ಎಂಬುದನ್ನು ನೋಡಿ: ಇರಾನ್ ಗೆ ಟ್ರಂಪ್ ಹೊಸ ಬೆದರಿಕೆ!

ನನಗಿದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಸರ್ಕಾರದಿಂದಲೂ ಮಾಡುತ್ತಿರುವೆ: ಡಿ.ಕೆ.ಶಿವಕುಮಾರ್

ದುಬೈನಲ್ಲಿ ಮತ್ತೆ ಸ್ಫೋಟ: ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಬಳಿ ದಟ್ಟ ಕಪ್ಪು ಹೊಗೆ!

ಜೀವಾವಧಿ ಶಿಕ್ಷೆಗೊಳಗಾದ 30 ಕೈದಿಗಳ ಅವಧಿಪೂರ್ವ ಬಿಡುಗಡೆ: ಸನ್ನಡತೆ ಆಧಾರದಲ್ಲಿ ರಿಲೀಸ್ ಗೆ ಸರ್ಕಾರ ಸೂಚನೆ

SCROLL FOR NEXT