ಕಾವ್ಯಾ ಮಾರನ್ - ಅನಿರುದ್ಧ್ ರವಿಚಂದ್ರನ್ 
ಕ್ರಿಕೆಟ್

ಅನಿರುದ್ಧ್ ರವಿಚಂದರ್ ಜೊತೆ ಮದುವೆ ವದಂತಿ; ಕೊನೆಗೂ ಮೌನ ಮುರಿದ ಸನ್‌ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್!

ಕಾವ್ಯಾ ಮಾರನ್ ಸನ್‌ರೈಸರ್ಸ್ ಹೈದರಾಬಾದ್‌ನ (SRH) ನಿರ್ವಹಣೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಇತ್ತ ಅನಿರುದ್ಧ್ ಭಾರತದ ಅತ್ಯಂತ ಬ್ಯುಸಿಯಾಗಿರುವ ಸಂಗೀತ ಸಂಯೋಜಕರಲ್ಲಿ ಒಬ್ಬರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ, ಜನಪ್ರಿಯ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್ ಅವರು ವಿವಾಹವಾಗಲಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿವೆ ಮತ್ತು ಮದುವೆಯ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ ಎಂದು ಹಲವಾರು ವೈರಲ್ ಪೋಸ್ಟ್‌ಗಳು ಹೇಳಿಕೊಂಡಿವೆ.

ಅನಿರುದ್ಧ್ ಅವರ ಆಪ್ತ ಸಂಬಂಧಿ, ನಟ ವೈಜಿ ಮಹೇಂದ್ರನ್ ಅವರ ಹೇಳಿಕೆಗಳು ಅಭಿಮಾನಿಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾದ ನಂತರ ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಯಿತು.

ಆದರೆ, ಕಾವ್ಯಾ ಮಾರನ್ ಅವರ ತಂಡ ಇದೀಗ ಈ ಊಹಾಪೋಹಗಳಿಗೆ ಅಂತ್ಯ ಹಾಡಿದೆ. ಕಾವ್ಯಾ ಮತ್ತು ಅನಿರುದ್ಧ್ ಅವರ ವಿವಾಹದ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಯಾವುದೇ ವಾಸ್ತವಿಕ ಆಧಾರವಿಲ್ಲ ಎಂದು ಪ್ರತಿನಿಧಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ವೈರಲ್ ಆಗಿರುವ ಈ ಹೇಳಿಕೆಗಳನ್ನು ಆಧಾರರಹಿತ ವದಂತಿಗಳೆಂದು ತಂಡ ತಳ್ಳಿಹಾಕಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪರಿಶೀಲಿಸದ ಮಾಹಿತಿಯನ್ನು ಜನರು ನಂಬಬಾರದು ಅಥವಾ ಪ್ರಸಾರ ಮಾಡಬಾರದು ಎಂದು ಒತ್ತಾಯಿಸಿದೆ.

ಅನಿರುದ್ಧ್ ರವಿಚಂದರ್ ಅವರು ಈ ರೀತಿಯ ವದಂತಿಗಳಿಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರ ಹೆಸರು ಹಲವಾರು ಸೆಲೆಬ್ರಿಟಿಗಳೊಂದಿಗೆ ತಳುಕು ಹಾಕಿಕೊಂಡಿತ್ತು.

ಈಮಧ್ಯೆ, ಕಾವ್ಯಾ ಮಾರನ್ ಸನ್‌ರೈಸರ್ಸ್ ಹೈದರಾಬಾದ್‌ನ (SRH) ನಿರ್ವಹಣೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಇತ್ತ ಅನಿರುದ್ಧ್ ಭಾರತದ ಅತ್ಯಂತ ಬ್ಯುಸಿಯಾಗಿರುವ ಸಂಗೀತ ಸಂಯೋಜಕರಲ್ಲಿ ಒಬ್ಬರಾಗಿದ್ದಾರೆ. ಅವರು ಇದೀಗ ಹಲವಾರು ಹೈ-ಪ್ರೊಫೈಲ್ ಯೋಜನೆಗಳನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಷ್ಯಾ ಯುದ್ಧಕ್ಕೆ ನೆರವು ನೀಡಿದ ಆರೋಪ: 4 ಭಾರತೀಯ ಕಂಪನಿಗಳ ಮೇಲಿನ ನಿರ್ಬಂಧ ತೆರವುಗೊಳಿಸಿದ ಅಮೆರಿಕ..!

ಇಲಾಖೆಗಳ ನಡುವಿನ ತಡೆಗೋಡೆ ಒಡೆಯಿರಿ, ಒಂದೇ ತಂಡವಾಗಿ ಕೆಲಸ ಮಾಡಿ: ಕೇಂದ್ರ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಖಡಕ್ ಸೂಚನೆ..!

ವಿಮಾನಯಾನ ಸಂಸ್ಥೆಗಳಿಗೆ ಬಿಗ್ ರಿಲೀಫ್; ATF ದರ ಲೀಟರ್‌ಗೆ 5 ರೂ. ಇಳಿಕೆ, ವಿಮಾನ ಪ್ರಯಾಣ ದರವೂ ಕಡಿಮೆಯಾಗುತ್ತಾ..?

ಜನ್ಮಸಿದ್ಧ ಪೌರತ್ವ ರದ್ದತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಟ್ರಂಪ್‌ಗೆ ಭಾರೀ ಶಾಕ್, 'ದೇಶಕ್ಕೆ ಮಾರಕ' ಎಂದ ಅಮೆರಿಕ ಅಧ್ಯಕ್ಷ..!

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ; ಇಂದಿನಿಂದ ಹೊಸ ದರ ಜಾರಿ, ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು..?