ಸುನೀಲ್ ಗವಾಸ್ಕರ್ 
ಕ್ರಿಕೆಟ್

'ಅವರು ನಡೆದುಕೊಂಡು ಬಂದ ರೀತಿಯನ್ನು ನೀವು ಗಮನಿಸಿದಿರಾ?': ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಪ್ರಶ್ನೆ

ಟಾಸ್ ವೇಳೆ ಮಾತನಾಡಿದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ತಂಡದ ಹಿತದೃಷ್ಟಿಯಿಂದಲೇ ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ಸಂಜು ಸ್ಯಾಮ್ಸನ್ ಬದಲಿಗೆ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಐದನೇ ಟಿ20ಐ ಪಂದ್ಯದಿಂದ ಕೈಬಿಡಲಾಯಿತು. ವೈಭವ್ ಸೂರ್ಯವಂಶಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಇಂಗ್ಲೆಂಡ್ ವಿರುದ್ಧದ ಐದನೇ T20I ಗಾಗಿ, ಭಾರತವು ಅನುಭವಿ ಸಂಜು ಸ್ಯಾಮ್ಸನ್ ಅವರನ್ನು ಮತ್ತೆ ಆಯ್ಕೆ ಮಾಡಿತು. ಪಂದ್ಯಕ್ಕೂ ಮೊದಲು, ಭಾರತವು ಸ್ಯಾಮ್ಸನ್ ಮತ್ತು ಸೂರ್ಯವಂಶಿ ಇಬ್ಬರನ್ನೂ ಆಡಿಸುತ್ತದೆ ಮತ್ತು ಇಶಾನ್ ಕಿಶನ್ ಅವರನ್ನು ಕೈಬಿಡುತ್ತದೆ ಎಂಬ ಊಹಾಪೋಹವಿತ್ತು. ಆದರೆ, ವೈಭವ್ ಸೂರ್ಯವಂಶಿಯನ್ನು ಹೊರಗಿಡಲಾಯಿತು.

ಸೂರ್ಯವಂಶಿ ಅವರನ್ನು ಕೈಬಿಡುವ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಟೀಕಿಸಿದ್ದಾರೆ. ಪಂದ್ಯಕ್ಕೂ ಮೊದಲು ಅವರು, ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕ ಆಟಗಾರರಾಗುತ್ತಾರೆ ಮತ್ತು ಸೂರ್ಯವಂಶಿ 3ನೇ ಕ್ರಮಾಂಕದಲ್ಲಿ ಆಡುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

'ಸ್ಯಾಮ್ಸನ್ ಒಳಗೆ ಬರುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ನಾವು ಸೂರ್ಯವಂಶಿಯನ್ನು ನಂಬರ್ 3 ರಲ್ಲಿ ಊಹಿಸಿದ್ದೆವು. ಅವರು ನಡೆದುಕೊಂಡ ರೀತಿಯನ್ನು ನೀವು ನೋಡಿದ್ದೀರಿ. ಆತ ನಿರಾಶೆಗೊಂಡಿದ್ದಾನೆ. ಅವನು ಕಲಿತಿದ್ದಾನೆಯೇ ಎಂದು ನೋಡಲು ನಾವು ಅವನಿಗೆ ಈ ಪಂದ್ಯದಲ್ಲಿ ಇನ್ನೊಂದು ಅವಕಾಶ ನೀಡಬೇಕಾಗಿತ್ತು. ಎರಡು ಬಾರಿ ಅವನು ಹುಕ್ ಶಾಟ್ ಆಡುತ್ತಾ ಔಟ್ ಆಗಿದ್ದಾನೆ. ಆತ ನಿರಾಶೆಗೊಂಡಿದ್ದಾನೆ. ಅವನು ಈಗ ಇದನ್ನು ಒಂದು ಸವಾಲಾಗಿ ಮಾತ್ರ ನೋಡುತ್ತಾನೆ ಎಂದು ನಾನು ಭಾವಿಸುತ್ತೇನೆ. ತಂಡದಲ್ಲಿ ಇಲ್ಲದಿರುವುದು ತುಂಬಾ ನಿರಾಶಾದಾಯಕವಾಗಿದೆ' ಎಂದು ಸೋನಿ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

'ಅವನು ತನ್ನ ಸಾಮರ್ಥ್ಯದ ಝಲಕ್ ತೋರಿಸಿದ್ದ. ಅವನು ಭರ್ಜರಿ ಪ್ರದರ್ಶನ ನೀಡಲು ಸಿದ್ಧನಿದ್ದ. ಆಡಿದ ಮೂರೂ ಇನಿಂಗ್ಸ್‌ಗಳಲ್ಲಿ, ಬ್ಯಾಟ್‌ನ ಮಧ್ಯಭಾಗದಿಂದಲೇ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದಾನೆ. ಎಡ್ಜ್ ಆಗುವುದು ಅಥವಾ ಅಂತಹ ಯಾವುದೇ ತಪ್ಪುಗಳು ಸಂಭವಿಸಿಲ್ಲ. ಅವನಲ್ಲಿ ಆ ಸಾಮರ್ಥ್ಯವಿದೆ. ಸರಣಿಯನ್ನು 2-2 ಸಮಬಲಗೊಳಿಸಲು ಇದು 'ಗೆಲ್ಲಲೇಬೇಕಾದ' ಪಂದ್ಯವಾಗಿದ್ದಿದ್ದರೆ, ಅನುಭವಿ ಆಟಗಾರರಿಗೆ ಅವಕಾಶ ನೀಡುವುದನ್ನು ನಾನು ಅರ್ಥಮಾಡಿಕೊಳ್ಳುತ್ತಿದ್ದೆ. ಆದರೆ, ಅವನಿಗೆ ಮತ್ತೊಂದು ಅವಕಾಶ ನೀಡಬಹುದಾದ ಪಂದ್ಯ ಇದಾಗಿತ್ತು ಎಂದು ನನಗನ್ನಿಸುತ್ತದೆ. ಆ ಅವಕಾಶವನ್ನು ನಾವು ಕಳೆದುಕೊಂಡೆವು. ಯಾರಾದರೂ ಹಿರಿಯ ಆಟಗಾರ ಅವನ ಹೆಗಲ ಮೇಲೆ ಕೈ ಹಾಕಿ, 'ನೋಡು, ಇದೇನೂ ಅಂತ್ಯವಲ್ಲ' ಎಂದು ಹೇಳುತ್ತಾರೆಂದು ನಾನು ಆಶಿಸುತ್ತೇನೆ. ಕೇವಲ ಮೂರು ಪಂದ್ಯಗಳ ನಂತರ 15 ವರ್ಷದ ಆಟಗಾರನನ್ನು ತಂಡದಿಂದ ಕೈಬಿಡುವುದು ಸ್ವಲ್ಪ ಕಠಿಣ ನಿರ್ಧಾರವೆನಿಸುತ್ತದೆ' ಎಂದು ತಿಳಿಸಿದರು.

ಟಾಸ್ ವೇಳೆ ಮಾತನಾಡಿದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ತಂಡದ ಹಿತದೃಷ್ಟಿಯಿಂದಲೇ ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.

'ಹೌದು, ನಾವು ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ವಾಷಿಂಗ್ಟನ್ ಬದಲಿಗೆ ಸೂರ್ಯಾಂಶ್ ಶೆಡ್ಗೆ ಮತ್ತು ಸೂರ್ಯವಂಶಿ ಬದಲಿಗೆ ಸಂಜು ಸ್ಯಾಮ್ಸನ್ ತಂಡಕ್ಕೆ ಬಂದಿದ್ದಾರೆ. ತಂಡವಾಗಿ ಮುಂದಿನ ಹಾದಿಯಲ್ಲಿ ನಮಗೆ ಯಾವುದು ಉತ್ತಮ ಎಂಬುದನ್ನು ಕಂಡುಕೊಳ್ಳಲು ಇದೇ ಸರಿಯಾದ ಸಮಯ ಎಂದು ನನಗೆ ಅನ್ನಿಸುತ್ತದೆ. ಇದನ್ನೇ ಆಧರಿಸಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ' ಎಂದರು.

ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿದ್ದ ಸ್ಯಾಮ್ಸನ್ ಸತತ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾದ ನಂತರ, 15 ವರ್ಷದ ಸೂರ್ಯವಂಶಿಯನ್ನು ಆಯ್ಕೆ ಮಾಡಲಾಯಿತು. ಆದಾಗ್ಯೂ, ಈ ಪ್ರತಿಭಾವಂತ ಬ್ಯಾಟರ್‌ಗೆ ಗಮನಾರ್ಹ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್!

ನಿನ್ನ ತಲೆ ಕಡಿತೀವಿ: ಈದ್ ಮೆರವಣಿಗೆ ವೇಳೆ ಪುನೀತ್ ಕೆರೆಹಳ್ಳಿ ವಿರುದ್ಧ ಘೋಷಣೆ, ಹಿಂದೂ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

Chandra Grahan 2026: ವರ್ಷದ ಕೊನೆಯ ಸುದೀರ್ಘ ಚಂದ್ರಗ್ರಹಣ; ಭಾರತದಲ್ಲಿ ಸೂತಕ ಕಾಲ ಇಲ್ಲ, ಯಾಕೆ ಗೊತ್ತ?

2ನೇ ಟೆಸ್ಟ್ ಗೆಲುವಿನ ಹಾದಿಯಲ್ಲಿ ಟೀಂ ಇಂಡಿಯಾ; ಶ್ರೀಲಂಕಾ ವಿರುದ್ಧ ಭಾರತ ಗೆದ್ದರೆ WTC ಅಂಕಪಟ್ಟಿಯಲ್ಲಿ ಮಹತ್ತರ ಬದಲಾವಣೆ!

ಲಾಲ್ ಬಾಗ್-ಕಬ್ಬನ್ ಪಾರ್ಕ್ ನ 22 ಎಕರೆ ಜಾಗ ಪರಭಾರೆ?, ಬೆಂಗಳೂರಿನ ಪಾರ್ಕ್‌ಗಳಿಗೆ ಹೊಸ ಕಾಯ್ದೆ ಕಂಟಕ?; ರಾಜ್ಯಪಾಲರಿಗೆ ಸಂಸದ Tejasvi Surya ಪತ್ರ