ಬಂಧಿತ ಮಂಜೋತ್ ಕಾಲ್ರಾ Online Desk
ಕ್ರಿಕೆಟ್

ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಮಾಜಿ ಸ್ಟಾರ್ ಆಟಗಾರ ಬಂಧನ; ಶ್ರೀಲಂಕಾದಲ್ಲಿ ಮಂಜೋತ್ ಕಾಲ್ರಾ ಅರೆಸ್ಟ್!

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಫಿಕ್ಸಿಂಗ್ ಜಾಲ: ಶ್ರೀಲಂಕಾದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭಾರತದ ಅಂಡರ್-19 ವಿಶ್ವಕಪ್ ಹೀರೊ! ಜಾಫ್ನಾ ಕಿಂಗ್ಸ್ ಸಹ-ಮಾಲೀಕ ಮಂಜೋತ್ ಕಾಲ್ರಾ ಪೊಲೀಸರ ವಶಕ್ಕೆ!

ಕೊಲೊಂಬೊ (ಶ್ರೀಲಂಕಾ): ಮಹತ್ವದ ಬೆಳವಣಿಗೆಯಲ್ಲಿ ಲಂಕಾ ಪ್ರೀಮಿಯರ್ ಲೀಗ್ (LPL) 2026 ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಆಟಗಾರನಿಗೆ ಲಂಚ ನೀಡಲು ಯತ್ನಿಸಿದ ಗಂಭೀರ ಆರೋಪದ ಮೇಲೆ ಭಾರತದ ಮಾಜಿ ಅಂಡರ್-19 ವಿಶ್ವಕಪ್ ಸ್ಟಾರ್ ಮಂಜೋತ್ ಕಾಲ್ರಾ (Manjot Kalra) ಅವರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದದ್ದು ಹೇಗೆ?

ಶ್ರೀಲಂಕಾದ ಕ್ರೀಡಾ ಸಂಬಂಧಿತ ಅಪರಾಧ ತನಿಖಾ ದಳ (SIU) ಕೊಲಂಬೋದ ಪ್ರತಿಷ್ಠಿತ ಹೋಟೆಲೊಂದರಲ್ಲಿ ಕಾರ್ಯಾಚರಣೆ ನಡೆಸಿ ಮಂಜೋತ್ ಕಾಲ್ರಾನನ್ನು ಬಂಧಿಸಿದೆ. ಸ್ಥಳೀಯ ಆಟಗಾರನಿಗೆ ಮ್ಯಾಚ್ ಫಿಕ್ಸಿಂಗ್‌ಗಾಗಿ 95 ಲಕ್ಷ ಶ್ರೀಲಂಕಾ ರೂಪಾಯಿ (ಸುಮಾರು 27.7 ಲಕ್ಷ ಭಾರತೀಯ ರೂಪಾಯಿ) ಲಂಚದ ಹಣವನ್ನು ನೀಡುವ ವೇಳೆ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. 10 ದಿನಗಳ ಹಿಂದೆಯೇ ಮಂಜೋತ್ ತನ್ನನ್ನು ಸಂಪರ್ಕಿಸಿದ್ದಾಗಿ ಲಂಕಾ ಆಟಗಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪಕ್ಕಾ ಸ್ಕೆಚ್ ಹಾಕಿ ಹಣ ನೀಡುವಾಗಲೇ ದಾಳಿ ಮಾಡಿದ್ದಾರೆ.

ಏತನ್ಮಧ್ಯೆ ಮಂಜೋತ್ ಕಾಲ್ರಾ ಪ್ರಸಕ್ತ ಸಾಲಿನ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಜಾಫ್ನಾ ಕಿಂಗ್ಸ್ ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದರು. ಈತನೊಂದಿಗೆ ಯುವರಾಜ್ ಪುಷ್ಪ ಎಂಬ ಮತ್ತೊಬ್ಬ ಭಾರತೀಯ ಪ್ರಜೆಯನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ನ್ಯಾಯಾಲಯವು ಮಂಜೋತ್ ಕಾಲ್ರಾನನ್ನು ಜುಲೈ 31 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅಂಡರ್-19 ವಿಶ್ವಕಪ್‌ನ ಹೀರೊ ಈ ಕಾಲ್ರಾ

ಪೃಥ್ವಿ ಶಾ ನೇತೃತ್ವದ ಭಾರತ ತಂಡ 2018 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದಾಗ ಮಂಜೋತ್ ಕಾಲ್ರಾ ಆ ತಂಡದ ಪ್ರಮುಖ ಆಟಗಾರನಾಗಿದ್ದರು. ಅದ್ರಂತೆ, ಅಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಕಾಲ್ರಾ ಅಜೇಯ 101 ರನ್ ಗಳಿಸಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಹೀರೊ ಎನಿಸಿಕೊಂಡಿದ್ದರು. ಆ ತಂಡದಲ್ಲಿ ಶುಭ್‌ಮನ್ ಗಿಲ್ ಮತ್ತು ಅರ್ಶ್‌ದೀಪ್ ಸಿಂಗ್ ಅವರಂತಹ ಇಂದಿನ ಸ್ಟಾರ್ ಆಟಗಾರರು ಈತನ ಸಹ ಆಟಗಾರರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bidadi Township: ದೋಸ್ತಿಗಳ ಮಧ್ಯೆಯೇ ಕ್ರೆಡಿಟ್‌ ವಾರ್; ಬಿಜೆಪಿ ಬಿಟ್ಟು ಜೆಡಿಎಸ್'ನಿಂದ ಪ್ರತ್ಯೇಕ ಪಾದಯಾತ್ರೆ, ದೇವೇಗೌಡರೂ ಭಾಗಿ!

‘ಟ್ರಂಪ್‌ ಕೊಲ್ಲುತ್ತೇವೆ’ ಪೋಸ್ಟರ್ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರ ಹತ್ಯೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಣೆ!

ನಿಮ್ಮ ಜಾತಕ ನಿಮಗೊತ್ತಿಲ್ವಾ?: Toxic ಆವರೇಜ್‌ ಎಂದ ಆರ್ಯವರ್ಧನ್‌ ಗುರೂಜಿಗೆ ಹಿಗ್ಗಾಮುಗ್ಗಾ ಜಾಡಿಸಿದ Yash ಅಭಿಮನಿಗಳು!

ಇತಿಹಾಸ ನಿರ್ಮಿಸಿದ ಭಾರತ: ದೇಶದ ಮೊದಲ ಖಾಸಗಿ ಕಕ್ಷಾ ರಾಕೆಟ್ 'ವಿಕ್ರಮ್-1' ಯಶಸ್ವಿ ಉಡಾವಣೆ, ವಿಜ್ಞಾನಿಗಳ ಸಂಭ್ರಮ

ಲಿಫ್ಟ್‌ನಲ್ಲಿ ಸಾಕು ನಾಯಿ ಹುಚ್ಚಾಟ: ಬೆಚ್ಚಿಬಿದ್ದ ಬಾಲಕಿಯರು! Video Viral