ಓಲಿ ರಾಬಿನ್ಸನ್ 
ಕ್ರಿಕೆಟ್

0,0,W,0,W,W: ಲಾರ್ಡ್ಸ್‌ನಲ್ಲಿ ಅಬ್ಬರಿಸಿದ ಓಲಿ ರಾಬಿನ್ಸನ್​; ವೈಭವ್ ಸೂರ್ಯವಂಶಿ ವಿಷಯ ಚರ್ಚೆ, ಯಾಕೆ ಗೊತ್ತಾ?

ಭಾರತದ ವಂಡರ್​ ಕಿಡ್​ ವೈಭವ್ ಸೂರ್ಯವಂಶಿ ಹಾಗೂ ಓಲಿ ರಾಬಿನ್ಸನ್ ನಡುವೆ ಕ್ರಿಕೆಟ್ ಅಭಿಮಾನಿಗಳು ಚರ್ಚಿಸಲು ಆರಂಭಿಸಿದ್ದಾರೆ.

ಲಾರ್ಡ್ಸ್‌: ತನ್ನ ವೃತ್ತಿಜೀವನವೇ ಮುಗಿಯಿತು ಎಂಬ ಆತಂಕದ ಕಾರ್ಮೋಡದಲ್ಲಿದ್ದ ಇಂಗ್ಲೆಂಡ್ ವೇಗಿ ಓಲಿ ರಾಬಿನ್ಸನ್, ಗುರುವಾರ ನ್ಯೂಜಿಲೆಂಡ್ ವಿರುದ್ಧಆರಂಭವಾದ ಟೆಸ್ಟ್ ಪಂದ್ಯದ ಮೊದಲ ದಿನವೇ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

ತಮ್ಮ ಮೊದಲ ಓವರ್‌ನಲ್ಲೇ ಯಾವುದೇ ರನ್ ನೀಡದೆ 3 ವಿಕೆಟ್ (0,0,W,0,W,W) ಪಡೆದು ಅಬ್ಬರಿಸಿದರು. ಹೌದು ತಮ್ಮ ಮೊದಲ ಹಾಗೂ ಎರಡನೇ ಎಸೆತಕ್ಕೆ ಯಾವುದೇ ರನ್ ನೀಡದ ಓಲಿ ರಾಬಿನ್ಸನ್, 3ನೇ ಎಸೆತದಲ್ಲಿ ಡೆವೊನ್ ಕಾನ್ವೆ ವಿಕೆಟ್ ಪಡೆದರು.

ಇನ್ನೂ 4ನೇ ಎಸೆತದಲ್ಲೂ ಯಾವುದೇ ರನ್ ನೀಡದ ರಾಬಿನ್ಸನ್, 5 ಮತ್ತು 6ನೇ ಎಸೆತದಲ್ಲಿ ಕ್ರಮವಾಗಿ ಕೇನ್ ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ ಅವರ ವಿಕೆಟ್ ಪಡೆದರು. ಈ ಮಾರಕ ಬೌಲಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ನಡುವೆ ಭಾರತದ ವಂಡರ್​ ಕಿಡ್​ ವೈಭವ್ ಸೂರ್ಯವಂಶಿ ಹಾಗೂ ಓಲಿ ರಾಬಿನ್ಸನ್ ನಡುವೆ ಕ್ರಿಕೆಟ್ ಅಭಿಮಾನಿಗಳು ಚರ್ಚಿಸಲು ಆರಂಭಿಸಿದ್ದಾರೆ. ಒಂದು ವೇಳೆ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಪರಿಸ್ಥಿತಿಯಲ್ಲಿದ್ದಿದ್ದರೆ ರಾಬಿನ್ಸನ್ ಅವರ ಆ ಮಾರಕ ದಾಳಿಯನ್ನು ಹೇಗೆ ಎದುರಿಸಿ ಕ್ರೀಸ್ ನಲ್ಲಿ ಉಳಿಯುತ್ತಿದ್ದರು ಎಂಬುದಾಗಿ ಚರ್ಚೆ ನಡೆಸುತ್ತಿದ್ದಾರೆ.

ಲಾರ್ಡ್ಸ್ ಮೈದಾನದ ಈ ಸವಾಲಿನ ಪಿಚ್‌ನಲ್ಲಿ ಇಂಗ್ಲೆಂಡ್ ವೇಗಿಯ ಮಾರಕ ದಾಳಿಯನ್ನು ಎದುರಿಸಲು ವೈಭವ್ ಸೂರ್ಯವಂಶಿಗೆ ಆಗುತ್ತಿರಲಿಲ್ಲ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ವೈಭವ್ ಇನ್ನೂ ಭಾರತ ತಂಡಕ್ಕೇ ಪದಾರ್ಪಣೆ ಮಾಡಿಲ್ಲ, ಅಷ್ಟರಲ್ಲೇ ಇಂತಹ ಕಠಿಣ ಪಿಚ್‌ಗಳಲ್ಲಿ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಅಳೆಯುವುದು ಅಥವಾ ನಿರ್ಣಯಿಸುವುದು ಸರಿಯಲ್ಲ ಎಂದು ಕೆಲವರು ಯುವ ಆಟಗಾರನನ್ನು ಬೆಂಬಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ: ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ, ರಫ್ತುದಾರರಲ್ಲಿ ಹೆಚ್ಚಿದ ಆತಂಕ

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!