ಶುಭ್ ಮನ್ ಗಿಲ್ 
ಕ್ರಿಕೆಟ್

ಇದೇ ಮೊದಲು, ಭಾರತದ ಯಾವುದೇ ಆಟಗಾರ ಮಾಡದ ಸಾಧನೆ ಮಾಡಿದ ನಾಯಕ ಶುಭ್ ಮನ್ ಗಿಲ್! ಏನಿದು ಹೊಸ ಇತಿಹಾಸ?

ಗಿಲ್ 126 ರನ್ ಗಳಿಸಿದರು. ಇದು ಟೆಸ್ಟ್ ನಾಯಕನಾಗಿ ಅವರು ಗಳಿಸಿದ 6 ನೇ ಶತಕವಾಗಿದೆ. ಈ ಪಂದ್ಯದಲ್ಲಿ ಅವರು ನಾಯಕನಾಗಿ 82.76 ಸರಾಸರಿಯಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದರು.

ಮುಲ್ಲಾನ್‌ಪುರ: ಭಾನುವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ 2 ನೇ ದಿನದಂದು ಅದ್ಭುತ ಶತಕ ಗಳಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಗಿಲ್ 126 ರನ್ ಗಳಿಸಿದರು. ಇದು ಟೆಸ್ಟ್ ನಾಯಕನಾಗಿ ಅವರು ಗಳಿಸಿದ 6 ನೇ ಶತಕವಾಗಿದೆ. ಈ ಪಂದ್ಯದಲ್ಲಿ ಅವರು ನಾಯಕನಾಗಿ 82.76 ಸರಾಸರಿಯಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದರು.

ಕ್ರಿಕೆಟ್ ಇತಿಹಾಸದಲ್ಲಿ 101 ನಾಯಕರು 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ ಆದರೆ ಡಾನ್ ಬ್ರಾಡ್ಮನ್ ಮಾತ್ರ ಗಿಲ್‌ಗಿಂತ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಬೇರೆ ಯಾವುದೇ ನಾಯಕ 70 ಕ್ಕಿಂತ ಹೆಚ್ಚಿನ ಸರಾಸರಿಯನ್ನು ಹೊಂದಿಲ್ಲ.

ಶ್ರೀಲಂಕಾದ ಕುಮಾರ್ ಸಂಗಕ್ಕಾರ 69.6 ರೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಗಿಲ್ 14 ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 1000 ರನ್ ಗಳಿಸಿದ ಭಾರತದ ಎರಡನೇ ಆಟಗಾರರಾಗಿದ್ದಾರೆ.ದಂತಕಥೆ ಸುನಿಲ್ ಗವಾಸ್ಕರ್ 14 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ ಖ್ಯಾತಿ ಪಡೆದಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 564 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದ ಭಾರತ, ಚಹಾ ವಿರಾಮದ ವೇಳೆಗೆ 39. 5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 113 ರನ್ ಗಳಿಗೆ ಅಪ್ಘಾನಿಸ್ತಾವನ್ನು ಕಟ್ಟಿಹಾಕಿತ್ತು. ಪ್ರವಾಸಿ ತಂಡ 394 ರನ್‌ಗಳ ಹಿನ್ನಡೆ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಸೂಚನೆಗೆ ಕ್ಯಾರೆ ಎನ್ನದ ಇಸ್ರೇಲ್: ಇರಾನ್ ಮೇಲೆ ವೈಮಾನಿಕ ದಾಳಿ; ಟೆಹ್ರಾನ್ ವಾಯುಪ್ರದೇಶ ಬಂದ್, ಯುದ್ಧ ಪುನರಾರಂಭ ಸಾಧ್ಯತೆ

2028ರ ಚುನಾವಣಾ ತಯಾರಿಯಲ್ಲಿ ಕಾಂಗ್ರೆಸ್! ಬಿಜೆಪಿ-ಜೆಡಿಎಸ್ ಮತ ವಿಭಜನೆಯ ಚಿಂತೆ; ಉಳಿಯುತ್ತಾ NDA ಮೈತ್ರಿ?

Women's T20 World Cup 2026: ಭಾರತ vs ಪಾಕಿಸ್ತಾನ ಪಂದ್ಯ, ಎಲ್ಲಿ, ಯಾವಾಗ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ..

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಕ್ಷಿಪಣಿ ದಾಳಿ, ಗಾಜಾ ಗಡಿದ್ವಾರ ಬಂದ್; ‘ಪ್ರತಿದಾಳಿ ಬೇಡ’- ನೆತನ್ಯಾಹುಗೆ ಟ್ರಂಪ್ ಖಡಕ್ ಸಂದೇಶ

ಸಾಮಾನ್ಯವಾದ ನೀರಿನ ಬಾಟಲಿಗೂ ವಿಮಾನ ನಿಲ್ದಾಣಗಳು ಹೆದರುತ್ತವೇಕೆ?

SCROLL FOR NEXT