ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

10 ಓವರ್ ಬೌಲಿಂಗ್ ಮಾಡಿ BCCI ಇಂಪ್ರೆಸ್ ಮಾಡಿದ ಹಾರ್ದಿಕ್ ಪಾಂಡ್ಯ; ಏಕದಿನ ತಂಡಕ್ಕೆ ಮರಳುವ ಸೂಚನೆ ನೀಡಿದ ಆಲ್‌ರೌಂಡರ್!

ಸೋಮವಾರ, ಭಾರತದ ಸಹಾಯಕ ಕೋಚ್ ಸೀತಾಂಶು ಕೊಟಕ್ ಅವರು ಪಾಂಡ್ಯ ಅವರ ಫಿಟ್ನೆಸ್ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ, ಆಲ್‌ರೌಂಡರ್ ಉತ್ತಮವಾಗಿದ್ದಾರೆ ಎಂದು ನಂಬುವುದಾಗಿ ಹೇಳಿದ್ದರು.

ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಂಪೂರ್ಣವಾಗಿ ಫಿಟ್ ಆಗಿದ್ದು, ಭಾನುವಾರ ಧರ್ಮಶಾಲಾದಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಿಂದ ಅನುಮತಿ ಪಡೆದಿದ್ದಾರೆ. ಬೆನ್ನುನೋವಿನಿಂದಾಗಿ ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ (MI) ಪರ ಹಲವು ಐಪಿಎಲ್ ಪಂದ್ಯಗಳಿಂದ ಹೊರಗುಳಿದಿದ್ದ 32 ವರ್ಷದ ಅವರು ಜೂನ್ 2 ರಿಂದ ಬೆಂಗಳೂರಿನ ಸಿಒಇಯಲ್ಲಿದ್ದಾರೆ.

'ಜೂನ್ 2 ರಂದು ಸಿಒಇಗೆ ಭೇಟಿ ನೀಡುವ ಮೊದಲು ಹಾರ್ದಿಕ್ ವಿದೇಶದಲ್ಲಿದ್ದರು. ಮುಂದಿನ ಐದು ದಿನಗಳಲ್ಲಿ, ಅವರು ಹಲವಾರು ಪಂದ್ಯಗಳ ಸಿಮ್ಯುಲೇಶನ್‌ಗಳನ್ನು ಮಾಡಿದರು ಮತ್ತು 10 ಓವರ್‌ಗಳ ಪೂರ್ಣ ಕೋಟಾವನ್ನು ಬೌಲಿಂಗ್ ಮಾಡಿದರು' ಎಂದು ಬಿಸಿಸಿಐ ಮೂಲವೊಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.

'ಯಾವುದೇ ಅಸ್ವಸ್ಥತೆ ಕಂಡುಬಂದಿಲ್ಲ ಮತ್ತು ವಿವಿಧ ಪ್ಯಾರಾಮೀಟರ್ಸ್‌ಗಳಿಗೆ ತಕ್ಕಂತೆ ಅವರ ಫಿಟ್ನೆಸ್ ಡೇಟಾವನ್ನು ಸಿಒಇಯಲ್ಲಿನ ಸಾಮರ್ಥ್ಯ ಮತ್ತು ಕಂಡೀಷನಿಂಗ್ ತರಬೇತುದಾರರು ಪರಿಶೀಲಿಸಿದ್ದಾರೆ ಎಂಬ ಮಾಹಿತಿಯಿದೆ' ಎಂದು ಮೂಲಗಳು ತಿಳಿಸಿವೆ.

ಸೋಮವಾರ, ಭಾರತದ ಸಹಾಯಕ ಕೋಚ್ ಸೀತಾಂಶು ಕೊಟಕ್ ಅವರು ಪಾಂಡ್ಯ ಅವರ ಫಿಟ್ನೆಸ್ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ, ಆಲ್‌ರೌಂಡರ್ ಉತ್ತಮವಾಗಿದ್ದಾರೆ ಎಂದು ನಂಬುವುದಾಗಿ ಹೇಳಿದ್ದರು.

ಭಾರತದ ವೈಟ್ ಬಾಲ್ ವ್ಯವಸ್ಥೆಯಲ್ಲಿ ಪಾಂಡ್ಯ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ತಮ್ಮ ವೇಗದ ಬೌಲಿಂಗ್ ಮತ್ತು ಡೆತ್ ಓವರ್‌ಗಳಲ್ಲಿ ಆಕರ್ಷಕ ಹೊಡೆತಗಳ ಮೂಲಕ ತಂಡಕ್ಕೆ ಸಮತೋಲನವನ್ನು ನೀಡುತ್ತಾರೆ.

ಅತ್ಯಂತ ಸಮಾಧಾನಕರ ಅಂಶವೆಂದರೆ ಪಾಂಡ್ಯ ತರಬೇತಿ ಅವಧಿಯಲ್ಲಿ 10 ಓವರ್‌ಗಳನ್ನು ಬೌಲಿಂಗ್ ಮಾಡುತ್ತಿದ್ದಾರೆ. ಅಂದರೆ, ಅವರು 50 ಓವರ್‌ಗಳ ಕ್ರಿಕೆಟ್‌ನ ಕಠಿಣತೆಗೆ ಸಿದ್ಧರಾಗಿದ್ದಾರೆ.

ಆದಾಗ್ಯೂ, ಪಾಂಡ್ಯ ಚಂಡೀಗಢದಲ್ಲಿ ತರಬೇತಿ ಅವಧಿಗೆ ತಂಡದೊಂದಿಗೆ ಸೇರಿಕೊಳ್ಳುತ್ತಾರೋ ಅಥವಾ ಮೂಲ ಯೋಜನೆಯಂತೆ ಧರ್ಮಶಾಲಾದಲ್ಲಿ ನೇರವಾಗಿ ಭಾಗವಹಿಸುತ್ತಾರೋ ಎಂಬುದು ಸ್ಪಷ್ಟವಾಗಿಲ್ಲ.

ಈ ಮಧ್ಯೆ, ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಇತ್ತೀಚಿನ ಐಪಿಎಲ್‌ನಲ್ಲಿ ಮುಂಬೈ ಪರ ಹಲವಾರು ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಅವರು ಸಿಒಇಯಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

Friendship Cupಗೆ ತಕ್ಕ ಗೌರವ: ಕಪ್ ಜೊತೆಗೇ ಆಫ್ಘನ್ ಅಭಿಮಾನಿಗಳ ಮನ ಗೆದ್ದ ಟೀಂ ಇಂಡಿಯಾ, Sarpanch Saab ಮಾಡಿದ್ದೇನು?

‘ಪ್ರಜಾಪ್ರಭುತ್ವದ ಕರಾಳ ದಿನ’, 'ತಲೆ ಬಾಗಲ್ಲ, ಯಾರಿಗೂ ಶರಣಾಗಲ್ಲ'; ಮಮತಾ ಬ್ಯಾನರ್ಜಿ ಕೆಂಡಾಮಂಡಲ

ನವಜಾತ ಶಿಶುಗಳಿಗೆ ಒಂದು ಗ್ರಾಂ ಚಿನ್ನದ ಉಂಗುರ ಉಡುಗೊರೆ ಯೋಜನೆ: ಸೆ. 28 ರಂದು ಸಿಎಂ ವಿಜಯ್ ಅಧಿಕೃತವಾಗಿ ಚಾಲನೆ!