ರಹ್ಮಾನುಲ್ಲಾ ಗುರ್ಬಾಜ್-ಗೌತಮ್ ಗಂಭೀರ್ 
ಕ್ರಿಕೆಟ್

1st ODI: 'ಗೌತಮ್ ಗಂಭೀರ್ ಅವರೇ ಹೇಳಿದ್ದು..'; ಭಾರತದ ವಿರುದ್ಧ 2ನೇ ಅತಿ ವೇಗದ ಶತಕ ಹಿಂದಿನ ಗುಟ್ಟು ರಟ್ಟು ಮಾಡಿದ Gurbaz

ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗುರ್ಬಾಜ್ ಆಡಿದ ಈ ಸ್ಫೋಟಕ ಇನ್ನಿಂಗ್ಸ್, ಭಾರತದ ವಿರುದ್ಧ ಆಡಲಾದ ಅತ್ಯಂತ ಆಕ್ರಮಣಕಾರಿ ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.

ಧರ್ಮಶಾಲಾ: ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ರಹ್ಮಾನುಲ್ಲಾ ಗುರ್ಬಾಜ್ ಶನಿವಾರ ಭಾರತದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿ ಇದಕ್ಕೆ ಭಾರತದ ಕೋಚ್ ಗೌತಮ್ ಗಂಭೀರ್ ಕಾರಣ ಎಂದು ಹೇಳಿದ್ದಾರೆ.

ಹೌದು.. ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ ಗುರ್ಬಾಜ್ 48 ಎಸೆತಗಳಲ್ಲಿ ಶತಕ ಸಿಡಿಸಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಇದು ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ ಎರಡನೇ ಅತಿ ವೇಗದ ಶತಕ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗುರ್ಬಾಜ್ ಆಡಿದ ಈ ಸ್ಫೋಟಕ ಇನ್ನಿಂಗ್ಸ್, ಭಾರತದ ವಿರುದ್ಧ ಆಡಲಾದ ಅತ್ಯಂತ ಆಕ್ರಮಣಕಾರಿ ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.

ಅಫ್ಘಾನಿಸ್ತಾನದ ಉಳಿದ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ಎದುರು ರನ್ ಗಳಿಸಲು ಪರದಾಡುತ್ತಿದ್ದ ಸಂದರ್ಭದಲ್ಲಿ, ಗುರ್ಬಾಜ್ ಒಬ್ಬರೇ ಹೋರಾಟ ನಡೆಸಿದರು. ಅವರು ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್‌ಗಳನ್ನು ಸಿಡಿಸಿದರು. ಇದುವರೆಗೆ ಯಾವುದೇ ಅಫ್ಘಾನ್ ಬ್ಯಾಟರ್ ದಾಖಲಿಸದ ವೇಗದ ಏಕದಿನ ಶತಕ ಎಂಬ ದಾಖಲೆಗೆ ಗುರ್ಬಾಜ್ ಪಾತ್ರರಾದರು.

ಗುರ್ಬಾಜ್ ಸಾಧನೆಗೆ ಗೌತಮ್ ಗಂಭೀರ್ ಕಾರಣ!

ಆಫ್ಘನ್ ಇನ್ನಿಂಗ್ಸ್ ಮುಕ್ತಾಯದ ಬಳಿಕ ವಿರಾಮದ ವೇಳೆ ಮಾತನಾಡಿದ ಗುರ್ಬಾಜ್, ತಮ್ಮ ಸ್ಫೋಟಕ ಬ್ಯಾಟಿಂಗ್ ಹಿಂದಿನ ಪ್ರಮುಖ ವ್ಯಕ್ತಿಯ ಬಗ್ಗೆ ಬಹಿರಂಗಪಡಿಸಿದರು. ಅಚ್ಚರಿಯ ಸಂಗತಿಯೆಂದರೆ, ಅವರು ತಮ್ಮ ಈ ಸಾಧನೆಗೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಶ್ರೇಯ ನೀಡಿದರು.

ಭಾರತದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಬಳಿಕ ತಾವು ಗಂಭೀರ್ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾಗಿ ಗುರ್ಬಾಜ್ ಹೇಳಿದ್ದು, ವಿಶೇಷವಾಗಿ ಶಾಟ್ ಆಯ್ಕೆ (Shot Selection) ಕುರಿತು ಗಂಭೀರ್ ನೀಡಿದ ಸಲಹೆಗಳು ತಮ್ಮ ಬ್ಯಾಟಿಂಗ್‌ನಲ್ಲಿ ಮಹತ್ತರ ಬದಲಾವಣೆ ತಂದವು ಎಂದು ತಿಳಿಸಿದ್ದಾರೆ.

ಗುರ್ಬಾಜ್ ಹೇಳಿದ್ದೇನು?

“ಟೆಸ್ಟ್ ಪಂದ್ಯದ ನಂತರ ನಾನು ಜಿಜಿ (ಗೌತಮ್ ಗಂಭೀರ್) ಸರ್ ಅವರೊಂದಿಗೆ ಉತ್ತಮ ಚರ್ಚೆ ನಡೆಸಿದೆ. ಆ ಮಾತುಕತೆ ನನಗೆ ತುಂಬಾ ಸಹಾಯ ಮಾಡಿತು. ಅವರು ಸೂಚಿಸಿದ ಅಂಶಗಳ ಮೇಲೆ ನಾನು ನೆಟ್ ಅಭ್ಯಾಸದಲ್ಲಿ ಕೆಲಸ ಮಾಡಿದೆ. ನನ್ನ ಶಾಟ್ ಆಯ್ಕೆಯನ್ನು ಸುಧಾರಿಸಬೇಕೆಂದು ನಾನು ಸ್ವತಃ ಗಂಭೀರ್ ಸರ್ ಬಳಿ ಹೋಗಿ ಹೇಳಿದ್ದೆ,.

ಅವರು ನನಗೆ ಕೆಲವು ಸಕಾರಾತ್ಮಕ ಸಲಹೆಗಳು ಹಾಗೂ ಸುಧಾರಿಸಬೇಕಾದ ಕ್ಷೇತ್ರಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಅದರ ಲಾಭ ಇಂದು ನನಗೆ ಸಿಕ್ಕಿತು. ನಾನು ಧನಾತ್ಮಕವಾಗಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸಿದೆ ಮತ್ತು ಅದು ಯಶಸ್ವಿಯಾಯಿತು,” ಎಂದು ಅವರು ಹೇಳಿದರು.

ಗಂಭೀರ್ ಸಲಹೆಯ ಸ್ಪಷ್ಟ ಪರಿಣಾಮ

ಜೂನ್ 13ರ ಪಂದ್ಯದಲ್ಲಿ ಗುರ್ಬಾಜ್ ಅವರ ಬ್ಯಾಟಿಂಗ್‌ನಲ್ಲಿ ಗಂಭೀರ್ ಸಲಹೆಯ ಪ್ರಭಾವ ಸ್ಪಷ್ಟವಾಗಿ ಗೋಚರಿಸಿತು. ಅವರು ಪದೇ ಪದೇ ಕ್ರೀಸ್‌ನಿಂದ ಮುಂದೆ ಬಂದು ವೇಗದ ಬೌಲರ್‌ಗಳ ಎಸೆತಗಳನ್ನು ನೇರವಾಗಿ ಸಿಕ್ಸರ್ ಹಾಗೂ ಬೌಂಡರಿಗಳಾಗಿ ಪರಿವರ್ತಿಸಿದರು.

ಸ್ವಲ್ಪ ಎತ್ತರಕ್ಕೆ ಬಂದ ಚೆಂಡುಗಳನ್ನು ಅವರು ಕವರ್ ಹಾಗೂ ಪಾಯಿಂಟ್ ಪ್ರದೇಶಗಳ ಮೂಲಕ ಬಲವಾಗಿ ಕಟ್ ಹೊಡೆದು ರನ್ ಗಳಿಸಿದರು. ಎಲ್‌ಬಿಡಬ್ಲ್ಯು ಅಪೀಲ್ ಹಾಗೂ ರನ್‌ಔಟ್ ಅವಕಾಶಗಳಿಂದ ಪಾರಾದ ನಂತರವೂ ಗುರ್ಬಾಜ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗದೆ ಭಾರತೀಯ ಬೌಲಿಂಗ್ ದಾಳಿಯ ಮೇಲೆ ನಿರಂತರವಾಗಿ ದಾಳಿ ನಡೆಸಿದರು.

ಗುರ್ಬಾಜ್ ಏಕಾಂಗಿ ಹೋರಾಟ

ಅಫ್ಘಾನಿಸ್ತಾನ ತಂಡದ ಪರ ಗುರ್ಬಾಜ್ ಮಾತ್ರ ದೊಡ್ಡ ಮೊತ್ತ ದಾಖಲಿಸಿದರು. ಅಫ್ಘಾನಿಸ್ತಾನ ತನ್ನ ಮೊದಲ ದ್ವಿಪಕ್ಷೀಯ ಏಕದಿನ ಸರಣಿಯ ಪಂದ್ಯದಲ್ಲಿ 194 ರನ್‌ಗಳಿಗೆ ಆಲೌಟ್ ಆಯಿತು. ಗುರ್ಬಾಜ್ ಅವರ 102 ರನ್ (51 ಎಸೆತ)ಗಳ ಸ್ಫೋಟಕ ಇನ್ನಿಂಗ್ಸ್ ಬಳಿಕ ತಂಡದ ಪರ ಎರಡನೇ ಅತಿ ಹೆಚ್ಚು ಸ್ಕೋರ್ ಹಶ್ಮತುಲ್ಲಾ ಶಾಹಿದಿ ಗಳಿಸಿದ 27 ರನ್ ಮಾತ್ರವಾಗಿತ್ತು.

ಒಂದೆಡೆ ಗುರ್ಬಾಜ್ ರನ್ ಮಳೆಗರೆಯುತ್ತಿದ್ದರೆ, ಇನ್ನೊಂದು ತುದಿಯಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಗುರ್ಬಾಜ್ ಗೆ ಉತ್ತಮ ಸಾಥ್ ದೊರೆತಿದ್ದರೆ ಅಫ್ಘಾನಿಸ್ತಾನ ಇನ್ನೂ ದೊಡ್ಡ ಮೊತ್ತ ದಾಖಲಿಸುವ ಸಾಧ್ಯತೆ ಇತ್ತು. ಆದರೆ ಮಳೆಯಿಂದಾಗಿ 25 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಅಫ್ಘಾನಿಸ್ತಾನ ಅಂತಿಮವಾಗಿ 194 ರನ್‌ಗಳಿಗೆ ಸರ್ವಪತನ ಕಂಡಿತು. ಗುರ್ಬಾಜ್ ಅವರ ಈ ಇನ್ನಿಂಗ್ಸ್ ಮಾತ್ರ ಪಂದ್ಯದಲ್ಲಿ ಅಫ್ಘಾನಿಸ್ತಾನದ ಪ್ರಮುಖ ಹೈಲೈಟ್ ಆಗಿ ಉಳಿಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ: 6 ವರ್ಷಗಳ ಬಳಿಕ ನಾಥೂ ಲಾ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ಪುನರಾರಂಭ..!

ಸಕಲೇಶಪುರ: ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ರೈಲು ಸಂಚಾರ ಸಂಪೂರ್ಣ ಸ್ಥಗಿತ; ಕಾನ್ಸ್ಟೇಬಲ್ ಪರೀಕ್ಷಾರ್ಥಿಗಳ ಪರದಾಟ

ಬೆದರಿಕೆಗಳಿಗೆ ಹೆದರಲ್ಲ, ಮತ್ತೆ ದಾಳಿ ನಡೆದರೆ ತಕ್ಕ ಪ್ರತಿಕ್ರಿಯೆ: ಅಮೆರಿಕಾಗೆ ಇರಾನ್ ತಿರುಗೇಟು, ನೆರೆಹೊರೆಯ ರಾಷ್ಟ್ರಗಳೊಂದಿಗೆ ತುರ್ತು ಮಾತುಕತೆ..!