ಕ್ರಿಕೆಟ್

ಬೆಂಗಳೂರು ಕಾರ್ಯಕ್ರಮದಲ್ಲಿ ಗೌನ್ ಧರಿಸಿದ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್: RCB ಸ್ಟಾರ್ ಬ್ಯಾಟರ್ ಹೇಳಿದ್ದೇನು?

ಮಂಧಾನ ಗೌನ್ ಧರಿಸಿದ ಚಿತ್ರಗಳನ್ನು ಟ್ರೋಲ್ ಮಾಡಲಾಗುತ್ತಿದ್ದು, ಒಬ್ಬ ಕ್ರೀಡಾಪಟುವನ್ನು ಅವರ ಕೌಶಲ್ಯ, ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಗುರುತಿಸಬೇಕು ಹೊರತು ಅವರು ಧರಿಸುವ ಬಟ್ಟೆಯಿಂದ ಅಲ್ಲ ಎಂದು ಅನೇಕರು ಕಿಡಿ ಕಾರಿದ್ದಾರೆ.

ಬೆಂಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಹಾಗೂ RCB ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾಡಿ ಶೇಮಿಂಗ್ ಮಾಡಲಾಗುತ್ತಿದ್ದು, ಅವರ ಬ್ಯಾಟ್ ಮಾತನಾಡುತ್ತದೆ ಎಂದು ಟ್ರೋಲರ್ ಗಳಿಗೆ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಒನ್‌ಪ್ಲಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸ್ಮೃತಿ ಮಂಧಾನ ಅವರು ಗೌನ್ ಧರಿಸಿದ್ದರು. ಮಂಧಾನ ಗೌನ್ ಧರಿಸಿದ ಚಿತ್ರಗಳನ್ನು ಟ್ರೋಲ್ ಮಾಡಲಾಗುತ್ತಿದ್ದು, ಒಬ್ಬ ಕ್ರೀಡಾಪಟುವನ್ನು ಅವರ ಕೌಶಲ್ಯ, ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಗುರುತಿಸಬೇಕು ಹೊರತು ಅವರು ಧರಿಸುವ ಬಟ್ಟೆಯಿಂದ ಅಲ್ಲ ಎಂದು ಅನೇಕರು ಕಿಡಿ ಕಾರಿದ್ದಾರೆ.

ಇದು ಮತ್ತೊಂದು ಅನಗತ್ಯ ವಿವಾದಂತೆ ಕಾಣುತ್ತಿದ್ದು, ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ತೀವ್ರ ಆಘಾತಗೊಂಡಿದ್ದಾರೆ.

ಸ್ಮೃತಿ ಮಂಧಾನ ಹೇಳಿದ್ದೇನು?

"ನಾನು ನನ್ನ ತೋಳುಗಳು ಕಾಣುವಷ್ಟು ಉಡುಪನ್ನು ಧರಿಸಿದ್ದೆ. ಇದರಿಂದ ಜನ ಸ್ನಾಯುಗಳನ್ನು ಹೊಂದಿದ್ದೇನೆ ಎಂದು ನನ್ನನ್ನು ಟ್ರೋಲ್ ಮಾಡಲು ಆರಂಭಿಸಿದರು."

"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಅದನ್ನು ತಮಾಷೆಯಾಗಿ ನೋಡುತ್ತೇನೆ. ಏಕೆಂದರೆ ಒಬ್ಬ ಕ್ರೀಡಾಪಟುವಾಗಿ ಮತ್ತು ಸಾಮಾನ್ಯ ಮನುಷ್ಯನಾಗಿಯೂ ಸ್ನಾಯುಗಳು ಹಾಗೂ ಫಿಟ್ ಆದ ದೇಹವನ್ನು ಹೊಂದಿರುವುದು ಒಳ್ಳೆಯದು" ಎಂದು ತಿರುಗೇಟು ನೀಡಿದ್ದಾರೆ.

ನೀವು ಜಿಮ್‌ನಲ್ಲಿ ಬಲವಾದ ಮತ್ತು ಫಿಟ್ ಆದ ದೇಹವನ್ನು ನಿರ್ಮಿಸಲು ನಿಜವಾಗಿಯೂ ಶ್ರಮಿಸುತ್ತೀರಿ. ಅದನ್ನು ಏಕೆ ಟೀಕಿಸಬೇಕು?"

"ನಾನು ನನ್ನ ದೇಶವನ್ನು ಪ್ರತಿನಿಧಿಸುತ್ತೇನೆ. ನಾನು ಅತ್ಯುನ್ನತ ಮಟ್ಟದಲ್ಲಿ ಪ್ರದರ್ಶನ ನೀಡಬೇಕಾದರೆ ನಾನು ನನ್ನ ದೇಹವನ್ನು ಅದಕ್ಕೆ ತಕ್ಕಂತೆ ಸಿದ್ಧಪಡಿಸಿಕೊಳ್ಳಬೇಕು" ಎಂದು ಸ್ಮೃತಿ ಹೇಳಿದ್ದಾರೆ.

"ಬಹಳ ಸಮಯದಿಂದ, ಸಮಾಜವು ಹುಡುಗಿಯರು ಒಂದು ನಿರ್ದಿಷ್ಟ ರೀತಿಯಲ್ಲಿ ಕಾಣಬೇಕೆಂದು ನಿರೀಕ್ಷಿಸುತ್ತಿದೆ. ಆದರೆ ಆದರೆ ಇದನ್ನು ಬ್ರೇಕ್ ಮಾಡುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆಯ

ವರ್ಷಗಳ ತ್ಯಾಗ, ಶಿಸ್ತು ಮತ್ತು ಕಠಿಣ ಪರಿಶ್ರಮದ ನಂತರ ಬಲಿಷ್ಠವಾಗಿ ಕಾಣುವ ಕ್ರೀಡಾಪಟುವನ್ನು ಟ್ರೋಲ್ ಮಾಡುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯ ಸಂಘರ್ಷ ಅಂತ್ಯ; ಅಮೆರಿಕ-ಇರಾನ್ ಒಪ್ಪಂದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ, ಹಾರ್ಮುಜ್ ಜಲಸಂಧಿ ಪುನರಾರಂಭಕ್ಕೆ ಸಂತಸ

ಶಾಂತಿ ಒಪ್ಪಂದದ ಭಾಗವಾಗಿ ಅಮೆರಿಕದಿಂದ ಇರಾನಿನ 12 ಬಿಲಿಯನ್ ಡಾಲರ್ ಸಂಪತ್ತು ಬಿಡುಗಡೆ ಸಾಧ್ಯತೆ

ಬಿಜೆಪಿ ಸರ್ಕಾರ ಬಿಡದಿಯ 1 ಸಾವಿರ ಎಕರೆ ಭೂಮಿ ಸ್ವಾಧೀನ ಮಾಡಿಕೊಂಡಾಗ ಇವರ್ಯಾಕೆ ಸುಮ್ಮನಿದ್ದರು? ಕುಮಾರಸ್ವಾಮಿ ವಿರುದ್ಧ ಸಿಎಂ DKS ಕಿಡಿ

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಕಚ್ಚಾ ತೈಲ ಬೆಲೆ ಭಾರೀ ಇಳಿಕೆ; ಪೆಟ್ರೋಲ್, ಡೀಸೆಲ್ ದರ ಕಮ್ಮಿ ಮಾಡ್ತಾರಾ ಮೋದಿ?

ಪಿ.ಲಂಕೇಶ್ ಪತ್ನಿ, ಲೇಖಕಿ ಇಂದಿರಾ ಲಂಕೇಶ್ ನಿಧನ; ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ ಸಂತಾಪ

SCROLL FOR NEXT