ಕ್ರಿಕೆಟ್

ODI ನಲ್ಲಿ 400ಕ್ಕೂ ಹೆಚ್ಚು ರನ್: ದಕ್ಷಿಣ ಆಫ್ರಿಕಾ ದಾಖಲೆ ಸಮಗಟ್ಟಿದ ಭಾರತ

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹಲವು ತಂಡಗಳು 400ಕ್ಕೂ ಹೆಚ್ಚು ರನ್ ಸಿಡಿಸಿದ ದಾಖಲೆ ಬರೆದಿವೆ. ಇನ್ನು ಅತೀ ಹೆಚ್ಚು ಬಾರಿ ಈ ರನ್ ಗಡಿ ದಾಟಿದ ಅಗ್ರಗಣ್ಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇತ್ತು. ಇದೀಗ ಟೀಂ ಇಂಡಿಯಾ ಈ ದಾಖಲೆಯನ್ನು ಸಮಗಟ್ಟಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹಲವು ತಂಡಗಳು 400ಕ್ಕೂ ಹೆಚ್ಚು ರನ್ ಸಿಡಿಸಿದ ದಾಖಲೆ ಬರೆದಿವೆ. ಇನ್ನು ಅತೀ ಹೆಚ್ಚು ಬಾರಿ ಈ ರನ್ ಗಡಿ ದಾಟಿದ ಅಗ್ರಗಣ್ಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇತ್ತು. ಇದೀಗ ಟೀಂ ಇಂಡಿಯಾ ಈ ದಾಖಲೆಯನ್ನು ಸಮಗಟ್ಟಿದೆ. ಉಭಯ ತಂಡಗಳು ಏಕದಿನ ಕ್ರಿಕೆಟ್ ನಲ್ಲಿ 8 ಬಾರಿ 400ಕ್ಕೂ ಹೆಚ್ಚು ರನ್ ಗಡಿ ದಾಟಿವೆ.

ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ತಂಡ ಇಂಗ್ಲೆಂಡ್ ಆಗಿದೆ. 2022ರ ಜೂನ್ ನಲ್ಲಿ ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 498 ರನ್ ಗಳಿಸಿದ್ದು ಪಟ್ಟಿದಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು 2011ರಲ್ಲಿ ಇಂದೋರ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 418 ರನ್ ಬಾರಿಸಿದ್ದು ಅತೀ ಹೆಚ್ಚು ರನ್ ಆಗಿದೆ. ಸದ್ಯ ಲಖನೌನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 402 ರನ್ ಗಳಿಗೆ ಆಲೌಟ್ ಆಗಿದ್ದು ಈ ಮೂಲಕ 8ನೇ ಬಾರಿಗೆ 400ರ ಗಡಿ ದಾಟಿದ ಎರಡನೇ ತಂಡವಾಗಿದೆ.

ಅದಾಗಲೇ 8 ಬಾರಿ 400ರ ಗಡಿ ದಾಟಿರುವ ದಕ್ಷಿಣ ಆಫ್ರಿಕಾ 2023ರ ಅಕ್ಟೋಬರ್ ನಲ್ಲಿ ದೆಹಲಿಯಲ್ಲಿ ಲಂಕಾ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿಗೆ 5 ವಿಕೆಟ್ ನಷ್ಟಕ್ಕೆ 428 ರನ್ ಬಾರಿಸಿತ್ತು. ಇನ್ನು 7 ಬಾರಿ 400 ರನ್ ಗಡಿ ದಾಟಿದ ಮೂರನೇ ತಂಡ ಇಂಗ್ಲೆಂಡ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಪ್ರಮಾಣವಚನ ಸಮಾರಂಭಕ್ಕೆ ಸಕಲ ಸಿದ್ಧತೆ, 20 ಸಚಿವರ ಪಟ್ಟಿಗೆ ಹೈಕಮಾಂಡ್ ಅಸ್ತು..?

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!

ಅಯೋಧ್ಯೆಯ ರಾಜರ್ಷಿ ದಶರಥ್ ವೈದ್ಯಕೀಯ ಕಾಲೇಜ್ ನಲ್ಲಿ ಬಾಂಬ್ ತಯಾರಿಕೆ ಕಾಗದ ಪತ್ತೆ; ವಿದ್ಯಾರ್ಥಿ ಬಂಧನ

Commonwealth Games 2026: ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ಸಾಕ್ಷಿ, ಪ್ರಿಯಾ