ಭಾರತಕ್ಕೆ ಭರ್ಜರಿ ಜಯ 
ಕ್ರಿಕೆಟ್

Women's T20 World Cup 2026: ನೆದರ್ಲೆಂಡ್ ವಿರುದ್ಧ ಭಾರತಕ್ಕೆ 95 ರನ್ ಭರ್ಜರಿ ಜಯ

ಭಾರತ ನೀಡಿದ್ದ 211 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನೆದರ್ಲೆಂಡ್ಸ್ ತಂಡ 17.3 ಓವರ್ ನಲ್ಲಿ 114 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದು 95 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಲೀಡ್ಸ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಭಾರತ 2ನೇ ಜಯ ದಾಖಲಿಸಿದ್ದು, ನೆದರ್ಲೆಂಡ್ ವಿರುದ್ಧ ಬರೊಬ್ಬರಿ 95 ರನ್ ಗಳ ಅಮೋಘ ಜಯ ದಾಖಲಿಸಿದೆ.

ಲೀಡ್ಸ್ ನ ಹೆಡಿಂಗ್ಲೇ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 211 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನೆದರ್ಲೆಂಡ್ಸ್ ತಂಡ 17.3 ಓವರ್ ನಲ್ಲಿ 114 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದು 95 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಭಾರತದ ಪರ ಶ್ರೀ ಚರಣಿ 4 ವಿಕೆಟ್ ಕಬಳಿಸಿದರೆ, ಶಫಾಲಿ ವರ್ಮಾ 3, ನಂದಿನಿ ಶರ್ಮಾ 2 ವಿಕೆಟ್ ಪಡೆದರು. ಅಂತೆಯೇ ದೀಪ್ತಿ ಶರ್ಮಾ 1 ವಿಕೆಟ್ ಪಡೆದರು.

ಭಾರತಕ್ಕೆ ಸವಾಲೇ ಆಗದ ನೆದರ್ಲೆಂಡ್ಸ್

ಇನ್ನು ಈ ಪಂದ್ಯದ ಯಾವುದೇ ಹಂತದಲ್ಲಿಯೂ ನೆದರ್ಲೆಂಡ್ಸ್ ಭಾರತಕ್ಕೆ ಸಾವಾಲಗಲೇ ಇಲ್ಲ. ಮೊದಲು ಬ್ಯಾಟಿಂಗ್ ನಲ್ಲಿ ಭಾರತೀಯ ಮಹಿಳಾ ಬ್ಯಾಟರ್ ಗಳು ನೆದರ್ಲೆಂಡ್ಸ್ ನ ಬೌಲರ್ ಗಳನ್ನು ದಂಡಿಸಿದರೆ, ಇತ್ತ ಬೌಲಿಂಗ್ ನಲ್ಲಿ ಭಾರತೀಯ ಬೌಲರ್ ಗಳು ನೆದರ್ಲೆಂಡ್ಸ್ ಬ್ಯಾಟರ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ಇನ್ನಿಂಗ್ಸ್ ನ ಯಾವುದೇ ಹಂತದಲ್ಲೂ ನೆದರ್ಲೆಂಡ್ಸ್ ಮೇಲುಗೈ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ. ನಿಯಮಿತವಾಗಿ ವಿಕೆಟ್ ಪಡೆಯುತ್ತಾ ನೆದರ್ಲೆಂಡ್ಸ್ ಬ್ಯಾಟರ್ ಗಳ ಮೇಲೆ ಒತ್ತಡ ಹೇರಿದರು.

ನೆದರ್ಲೆಂಡ್ಸ್ ನ ನಾಯಕಿ ಬಾಬೆಟ್ಟೆ ಡಿ ಲೀಡೆ ಅವರು ಗಳಿಸಿದ 28 ರನ್ ಗಳೇ ಆ ತಂಡ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಅವರನ್ನು ಬಿಟ್ಟರೆ ಆರಂಭಿಕ ಆಟಗಾರ್ತಿ ಹೀದರ್ ಸೀಗರ್ಸ್ 21 ಮತ್ತು ಫೆಬೆ ಮೊಲ್ಕೆನ್ಬೋರ್ 15 ರನ್ ಗಳಿಸಿದ್ದು ಬಿಟ್ಟರೆ ನೆದರ್ಲೆಂಡ್ ನ ಉಳಿದಾವ ಆಟಗಾರ್ತಿಯರ ವೈಯುಕ್ತಿಕ ಮೊತ್ತ ಎರಡಂಕಿ ದಾಟಲೇ ಇಲ್ಲ. ಇದು ನೆದರ್ಲೆಂಡ್ ಗೆ ದುಬಾರಿಯಾಗಿ ಪರಿಣಮಿಸಿತು.

ಭಾರತದ ಪರ ಶ್ರೀ ಚರಣಿ 4 ವಿಕೆಟ್ ಕಬಳಿಸಿದರೆ, ಶಫಾಲಿ ವರ್ಮಾ 3, ನಂದಿನಿ ಶರ್ಮಾ 2 ವಿಕೆಟ್ ಪಡೆದರು. ಅಂತೆಯೇ ದೀಪ್ತಿ ಶರ್ಮಾ 1 ವಿಕೆಟ್ ಪಡೆದರು.

ಭಾರತ ಭರ್ಜರಿ ಬ್ಯಾಟಿಂಗ್

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಮಹಿಳಾ ತಂಡ ಸ್ಮೃತಿ ಮಂದಾನ (74) ಮತ್ತು ಶಫಾಲಿ ವರ್ಮಾ (55) ಅವರ ಅರ್ಧಶತಕಗಳ ನೆರವಿನಿಂದ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 209 ರನ್ ಪೇರಿಸಿತು.

ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಆರಂಭಿಕರಿಬ್ಬರೂ ಅರ್ಧಶತಕ ಸಿಡಿಸಿದರು. ಬಳಿಕ ಜೆಮಿಮಾ ರೋಡ್ರಿಗಸ್ (19), ರಿಚಾ ಘೋಷ್ (ಅಜೇಯ 20), ನಾಯಕಿ ಹರ್ಮನ್ ಪ್ರೀತ್ ಕೌರ್ (12) ಮತ್ತು ದೀಪ್ತಿ ಶರ್ಮಾ (ಅಜೇಯ 10) ಭಾರತದ ರನ್ ಗಳಿಕೆಯನ್ನು 200ರ ಗಡಿ ದಾಟಿಸಿದರು.

ಅಂತೆಯೇ 74 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಸ್ಮೃತಿ ಮಂದಾನ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಪ್ರಮಾಣವಚನ ಸಮಾರಂಭಕ್ಕೆ ಸಕಲ ಸಿದ್ಧತೆ, 20 ಸಚಿವರ ಪಟ್ಟಿಗೆ ಹೈಕಮಾಂಡ್ ಅಸ್ತು..?

ಪೆರುವಿನಲ್ಲಿ ಭೀಕರ ದುರಂತ: ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿ ಸ್ಫೋಟಗೊಂಡ ವಿಮಾನ, 11 ವಿದೇಶಿ ಪ್ರವಾಸಿಗರು ಸೇರಿ 13 ಮಂದಿ ದುರ್ಮರಣ..!

35 ವರ್ಷಗಳಿಂದ ಲೆಕ್ಕಪರಿಶೋಧನೆ ಇಲ್ಲ...! ಕೂಡಲಸಂಗಮ ಮಂಡಳಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ DCM ಪರಮೇಶ್ವರ್..!

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!