ರೋಹಿತ್ ಶರ್ಮಾ, ಪ್ರಸಿದ್ಧ್ ಕೃಷ್ಣ 
ಕ್ರಿಕೆಟ್

India vs Afghanistan 3rd ODI: ರೋಹಿತ್ ಶರ್ಮಾ, ಪ್ರಸಿದ್ಧ್ ಕೃಷ್ಣರಿಂದ ವಿಶಿಷ್ಟ ಹ್ಯಾಟ್ರಿಕ್ ಸಾಧನೆ!

ಟಾಸ್​ ಗೆದ್ದಿರುವ ಪ್ರವಾಸಿ ತಂಡ ಅಫ್ಘಾನ್​ ಮೊದಲಿಗೆ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅಗ್ರ ಕ್ರಮಾಂಕದ ಮೊದಲ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಚೆನ್ನೈ: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಅಂತಿಮ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಪ್ರಸಿದ್ಧ್ ಕೃಷ್ಣ ಅವರು ಜಂಟಿಯಾಗಿ ಅಪರೂಪದ ಸಾಧನೆ ಮಾಡಿದರು.

ಅನುಭವಿ ಆರಂಭಿಕ ಆಟಗಾರ ಮೊದಲ ಸ್ಲಿಪ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಹಿಡಿದರೆ, ಪ್ರಸಿದ್ಧ್ ಕೃಷ್ಣ ಅವರು ಆರಂಭಿಕ ಸ್ಪೆಲ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ಟಾಸ್​ ಗೆದ್ದಿರುವ ಪ್ರವಾಸಿ ತಂಡ ಅಫ್ಘಾನ್​ ಮೊದಲಿಗೆ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು. ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅಗ್ರ ಕ್ರಮಾಂಕದ ಮೊದಲ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಕುತೂಹಲಕಾರಿಯಾಗಿ, ರೋಹಿತ್ ಶರ್ಮಾ ಹಾಗೂ ಪ್ರಸಿದ್ಧ್ ಕೃಷ್ಣ ಜೊತೆಗೂಡಿ ಎಂಟು ಓವರ್‌ಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ವಿಶಿಷ್ಟ ದಾಖಲೆ ಸೃಷ್ಟಿಸಿದರು.

ರೋಹಿತ್ ಶರ್ಮಾ, ಪ್ರಸಿದ್ಧ್ ಕೃಷ್ಣ ವಿಶಿಷ್ಟ ಹ್ಯಾಟ್ರಿಕ್ ಸಾಧನೆ

ಪ್ರಸಿದ್ಧ್ ಕೃಷ್ಣ ತಮ್ಮ ಸ್ಪೆಲ್‌ನ ಮೊದಲ ಎಸೆತದಲ್ಲೇ ರಹಮಾನಲ್ಲಾ ಗುರ್ಬಾಜ್ ಅವರನ್ನು ಔಟ್ ಮಾಡಿದರು. ಪ್ರಸಿದ್ಧ್ ನಾಲ್ಕು ವಿಕೆಟ್​ಗಳಲ್ಲಿ ಮೂರು ವಿಕೆಟ್​ ಉರುಳಿಸುವುದರ ಹಿಂದೆ ರೋಹಿತ್ ಶರ್ಮಾ ಅವರ ಪಾತ್ರವೂ ಅಪಾರವಾಗಿತ್ತು. ಸ್ಲಿಪ್​ನಲ್ಲಿ ಫಿಲ್ಡಿಂಗ್​ಗೆ ನಿಂತಿದ್ದ ರೋಹಿತ್ ಶರ್ಮಾ ಮೊದಲಿಗೆ ಅಫ್ಘನ್ ಆರಂಭಿಕ ರಹಮಾನಲ್ಲಾ ಗುರ್ಬಾಜ್ ಅವರ ಕ್ಯಾಚ್ ತೆಗೆದುಕೊಂಡರು. ನಂತರ ರಹಮತ್ ಶಾ ನೀಡಿದ ಕ್ಯಾಚ್ ಕೂಡ ರೋಹಿತ್ ಕೈ ಸೇರಿತು. ಮೂರನೇ ಕ್ಯಾಚ್ ರೂಪದಲ್ಲಿ ರೋಹಿತ್ ಶರ್ಮಾ, ಇಬ್ರಾಹಿಂ ಜದ್ರಾನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.

ರೋಹಿತ್ ಶರ್ಮಾ ಅವರು ಅಫ್ಘಾನಿಸ್ತಾನದ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಕ್ಯಾಚ್‌ಗಳನ್ನು ಪೂರ್ಣಗೊಳಿಸಿದರು. ಇದರೊಂದಿಗೆ ವಿವಿಎಸ್ ಲಕ್ಷ್ಮಣ್ ಮತ್ತು ಶಿಖರ್ ಧವನ್ ಅವರ ದಾಖಲೆಯನ್ನು ಸರಿಗಟ್ಟಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ಯಾರೆಂಟಿ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ಟೀಂ ಇಂಡಿಯಾಗೆ ಭಾರೀ ಹಿನ್ನಡೆ; ಇಂಗ್ಲೆಂಡ್ ಸರಣಿಗೆ ಸ್ಟಾರ್ ಆಲ್‌ರೌಂಡರ್ ಅಲಭ್ಯ!

Video: IIT Bombay ಆವರಣದಲ್ಲಿ ನಾಯಿ ಬೇಟೆಯಾಡಿದ ಚಿರತೆ; ಸಿಸಿಟಿವಿ ದೃಶ್ಯ ವೈರಲ್, ಬೆಚ್ಚಿಬಿದ್ದ ಸ್ಥಳೀಯರು!

ಕದನ ವಿರಾಮ ಒಪ್ಪಂದವಾದ 24 ಗಂಟೆಗಳಲ್ಲೇ ಲೆಬನಾನ್ ಮೇಲೆ ಇಸ್ರೇಲ್ ದಾಳಿ; ಐವರ ಸಾವು, ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ

ಬೆಂಗಳೂರು-ತುಮಕೂರು ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಚತುಷ್ಪಥ ರೈಲು ಮಾರ್ಗ ಕಾಮಗಾರಿ ಆರಂಭ