ವೈಭವ್ ಸೂರ್ಯವಂಶಿ - ತನ್ವೀರ್ ಅಹ್ಮದ್ 
ಕ್ರಿಕೆಟ್

ವೈಭವ್ ಸೂರ್ಯವಂಶಿ ಶತಕ ಬಾರಿಸಿದ್ರೆ ರಸ್ತೆಯಲ್ಲೇ ಬೆತ್ತಲಾಗುವೆ: ಪಾಕ್ ಮಾಜಿ ಕ್ರಿಕೆಟಿಗ ಬಹಿರಂಗ ಸವಾಲು!

ವೈಭವ್ ಸೂರ್ಯವಂಶಿ ಅವರಿಗೆ ಖಂಡಿತವಾಗಿಯೂ 15 ವರ್ಷ ವಯಸ್ಸಾಗಿಲ್ಲ ಮತ್ತು ನಾನು ಅದನ್ನು ನಂಬಲು ಸಾಧ್ಯವಿಲ್ಲ ಎಂದು ತನ್ವೀರ್ ಅಹ್ಮದ್ ಅವರು ಹೇಳಿದ್ದಾರೆ.

ಇಸ್ಲಾಮಾಬಾದ್: IPL 2026ರಲ್ಲಿ ಸ್ಫೋಟಕ ಬ್ಯಾಟಿಂಗ್ ನಿಂದ ಭಾರೀ ಸದ್ದು ಮಾಡಿದ ಹದಿನೈದು ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯ ವಯಸ್ಸು ಮತ್ತು ಅವರ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವೈಭವ್ ಸೂರ್ಯವಂಶಿ ಅವರಿಗೆ ಖಂಡಿತವಾಗಿಯೂ 15 ವರ್ಷ ವಯಸ್ಸಾಗಿಲ್ಲ ಮತ್ತು ನಾನು ಅದನ್ನು ನಂಬಲು ಸಾಧ್ಯವಿಲ್ಲ ಎಂದು ತನ್ವೀರ್ ಅಹ್ಮದ್ ಅವರು ಹೇಳಿದ್ದಾರೆ.

ವೈಭವ್ ಸೂರ್ಯವಂಶಿಗೆ ಈಗ ಕನಿಷ್ಠ 20-22 ವರ್ಷ ವಯಸ್ಸಾಗಿದೆ ಎಂದು ನಾನು ಭಾವಿಸುತ್ತೇನೆ; ಇಲ್ಲದಿದ್ದರೆ, ಈ ರೀತಿ ಆಡುವುದು ಅಸಾಧ್ಯ. ಆತನ ಹಿಪ್ ರೊಟೇಷನ್ ಮತ್ತು ಸಿಕ್ಸರ್ ಹೊಡೆಯುವ ಶಕ್ತಿ 15 ವರ್ಷದ ಹುಡುಗನಿಗೆ ಇರಲು ಸಾಧ್ಯವೇ ಇಲ್ಲ ಎಂದು ತನ್ವೀರ್ ಅಹ್ಮದ್ ಹೇಳಿದ್ದಾರೆ.

ಅಷ್ಟೇ ಅಲ್ಲದೆ ವೈಭವ್​ ಸ್ಲಾಗರ್ ಬ್ಯಾಟರ್. ಸಣ್ಣ ಬೌಂಡರಿಗಳಿರುವ ಮೈದಾನಗಳಲ್ಲಿ ಅಡ್ಡಾದಿಡ್ಡಿ ಬ್ಯಾಟ್ ಬೀಸುವ ಒಬ್ಬ ‘ಬ್ಲೈಂಡ್ ಸ್ಲಾಗರ್’ ಅಷ್ಟೇ ಎಂದು ಟೀಕಿಸಿದ್ದಾರೆ.

ಶತಕ ಬಾರಿಸಿದ್ರೆ ರಸ್ತೆಯಲ್ಲೇ ಬೆತ್ತಲಾಗುವೆ

ವೈಭವ್ ಸೂರ್ಯವಂಶಿ ಐರ್ಲೆಂಡ್ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ತನ್ವೀರ್ ಅಹ್ಮದ್, ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶತಕ ಗಳಿಸಿದರೆ ತಾನು ಲಾಹೋರ್‌ನ ಬೀದಿಗಳಲ್ಲಿ ಬೆತ್ತಲೆಯಾಗಿ ನಡೆಯುವುದಾಗಿ ಸವಾಲು ಹಾಕಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಥವಾ ಏಷ್ಯಾ ಉಪಖಂಡದ ಪಿಚ್‌ಗಳಲ್ಲಿ ರನ್ ಬಾರಿಸುವುದು ಸುಲಭ. ಆದರೆ ಇಂಗ್ಲೆಂಡ್‌ನ ಸ್ವಿಂಗ್ ಪಿಚ್​ನಲ್ಲಿ ಆಡುವ ಸವಾಲೇ ಬೇರೆ. ಹೀಗಾಗಿ ಇಂಗ್ಲೆಂಡ್​ನಲ್ಲಿ ವೈಭವ್ ಸೂರ್ಯವಂಶಿ ಒಂದು ಶತಕ ಬಾರಿಸಲಿ ನೋಡೋಣ. ಆತ ಸೆಂಚುರಿ ಸಿಡಿಸಿದರೆ ನಾನು ಲಾಹೋರ್​ ಬೀದಿಯಲ್ಲಿ ಬೆತ್ತಲಾಗಿ ಓಡಾಡುವೆ ಎಂದು ತನ್ವೀರ್ ಅಹ್ಮದ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದರೂ 6ನೇ ಸುತ್ತಿನ ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಕೆ!

"ಹಮಾಸ್ ನಿಶ್ಯಸ್ತ್ರಗೊಳಿಸುವುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಪಾಕಿಸ್ತಾನಿಗಳು ಭಾರತೀಯರ ಸಂಪೂರ್ಣ ಬದ್ಧ ವೈರಿಗಳಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ: ಟಿ.ಬಿ ಜಯಚಂದ್ರ ಹಂಗಾಮಿ ಸಭಾಧ್ಯಕ್ಷ

ರಷ್ಯಾ-ಭಾರತ ನಡುವೆ ನೇರ ರೈಲು ಸಂಪರ್ಕ? ರಷ್ಯಾದಿಂದ ಮಹತ್ವದ ಪ್ರಸ್ತಾವನೆ!