ಬಾಬರ್ ಅಜಮ್ 
ಕ್ರಿಕೆಟ್

T20 ವಿಶ್ವಕಪ್ ತಂಡಕ್ಕೆ ಬಾಬರ್ ಅಜಮ್ ಸೇರ್ಪಡೆಯಿಂದ ಅಸಮಾಧಾನ; ಪಾಕಿಸ್ತಾನ ಆಯ್ಕೆದಾರ ಅಲೀಂ ದಾರ್ ರಾಜೀನಾಮೆ!

ಪಿಸಿಬಿ ಇನ್ನೂ ದಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ. ದಾರ್ ಅವರು ಅಸದ್ ಶಫೀಕ್ ಮತ್ತು ಆಕಿಬ್ ಜಾವೇದ್ ಅವರನ್ನೂ ಒಳಗೊಂಡ ಆಯ್ಕೆ ಸಮಿತಿಯಲ್ಲಿದ್ದರು.

ಪಾಕಿಸ್ತಾನ ತಂಡ 2026ರ ಟಿ20 ವಿಶ್ವಕಪ್‌ನಿಂದ ಸೂಪರ್ 8 ಹಂತದಲ್ಲಿ ಹೊರಬಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಆಯ್ಕೆದಾರ ಮತ್ತು ಮಾಜಿ ಅಂಪೈರ್ ಅಲೀಮ್ ದಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಲ್ಮಾನ್ ಅಲಿ ಆಘಾ ಮತ್ತು ತಂಡವು ಸೂಪರ್ 8 ಹಂತದಲ್ಲಿ ಒಂದು ಪಂದ್ಯ ಸೋತು, ಒಂದು ಪಂದ್ಯ ಮಳೆಯಿಂದ ರದ್ದಾದ ನಂತರ ಟೂರ್ನಿಯಿಂದ ಹೊರಬಿತ್ತು. ಕಳಪೆ ನೆಟ್ ರನ್ ರೇಟ್‌ನಿಂದಾಗಿ ಪಾಕಿಸ್ತಾನಕ್ಕೆ ಬದಲಾಗಿ ನ್ಯೂಜಿಲೆಂಡ್ ಸೆಮಿಫೈನಲ್‌ ಪ್ರವೇಶಿಸಿತು. ಆಯ್ಕೆ ವಿಷಯದಲ್ಲಿ ಮುಖ್ಯ ಕೋಚ್ ಮೈಕ್ ಹೆಸ್ಸನ್ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದಕ್ಕೆ ದಾರ್ ಅಸಮಾಧಾನಗೊಂಡಿದ್ದರು ಮತ್ತು ಆದ್ದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗಿನ ತಮ್ಮ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಸುದ್ದಿಸಂಸ್ಥೆ ಪಿಟಿಐ ಪ್ರಕಾರ, ಪಿಸಿಬಿ ಇನ್ನೂ ದಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ. ದಾರ್ ಅವರು ಅಸದ್ ಶಫೀಕ್ ಮತ್ತು ಆಕಿಬ್ ಜಾವೇದ್ ಅವರನ್ನೂ ಒಳಗೊಂಡ ಆಯ್ಕೆ ಸಮಿತಿಯಲ್ಲಿದ್ದರು. 2026ರ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಿದಾಗ ಮಾಜಿ ಅಂಪೈರ್ ತುಂಬಾ ಅಸಮಾಧಾನಗೊಂಡಿದ್ದರು. ಬಾಬರ್ ಅಜಮ್ ಮತ್ತು ಶಾದಾಬ್ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದನ್ನು ಅವರು ವಿರೋಧಿಸಿದ್ದರು. ಆದರೆ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹೆಸ್ಸನ್ ಬಯಸಿದ್ದರು ಎಂದು ಮೂಲಗಳು ತಿಳಿಸಿವೆ.

'ವಿಶ್ವಕಪ್ ತಂಡವನ್ನು ಆಯ್ಕೆ ಮಾಡುವಾಗ ಯಾವುದೇ ಉತ್ತಮ ಪ್ರದರ್ಶನ ನೀಡದ ಬಾಬರ್ ಅಜಮ್ ಮತ್ತು ಶಾದಾಬ್ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದನ್ನು ವಿರೋಧಿಸಿ ಅಲೀಮ್ ತುಂಬಾ ಅಸಮಾಧಾನಗೊಂಡಿದ್ದರು. ಆದರೆ, ಹೆಸ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲೇಬೇಕೆಂಬ ಹಠ ತೊಟ್ಟಿದ್ದರು' ಎಂದು ಮೂಲಗಳು ತಿಳಿಸಿವೆ.

ಬಾಬರ್ T20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದರು ಮತ್ತು ಸಂಪೂರ್ಣವಾಗಿ ವಿಫಲರಾದರು. ಅವರು 5 ಪಂದ್ಯಗಳಲ್ಲಿ ಕೇವಲ 90 ರನ್ ಗಳಿಸುವಲ್ಲಿ ಯಶಸ್ವಿಯಾದರು. ಅವರ ಗರಿಷ್ಠ ಸ್ಕೋರ್ 46 ರನ್‌ ಆಗಿತ್ತು. ಅಜಮ್ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲಿಲ್ಲ ಮತ್ತು ಅವರನ್ನು ಕೆಳ ಕ್ರಮಾಂಕಕ್ಕೆ ತಳ್ಳಲಾಯಿತು. ವಿಶ್ವಕಪ್‌ಗಳಲ್ಲಿ ಬಾಬರ್ ಉತ್ತಮ ಸ್ಟ್ರೈಕ್ ರೇಟ್ ಹೊಂದಿಲ್ಲ ಎಂಬುದನ್ನು ಹೆಸ್ಸನ್ ಸ್ವತಃ ಒಪ್ಪಿಕೊಂಡರು.

ಬಾಬರ್ ಮತ್ತು ಶಾದಾಬ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದನ್ನು ದಾರ್ ಪ್ರಶ್ನಿಸಿದ್ದರು ಮತ್ತು ಯಾವುದೇ ಪ್ರದರ್ಶನ ನೀಡದಿದ್ದರೂ ಆಟಗಾರರನ್ನು ಆಯ್ಕೆ ಮಾಡುವುದೇ ಆದರೆ ರಿಜ್ವಾನ್ ಅವರನ್ನು ಏಕೆ ಆಯ್ಕೆ ಮಾಡಬಾರದು ಎಂದು ಕೇಳಿದ್ದರು ಎಂದು ವರದಿ ಹೇಳುತ್ತದೆ.

'ಬಾಬರ್ ಮತ್ತು ಶಾದಾಬ್ ಅವರಿಗೆ ತಂಡದಲ್ಲಿ ಅವಕಾಶ ನೀಡಬಹುದು ಎಂದಾದಾಗ, ಉಸ್ಮಾನ್ ಖಾನ್ ಅವರ ಅನುಭವದ ಕಾರಣ ಅವರ ಸ್ಥಾನದಲ್ಲಿ ಮೊಹಮ್ಮದ್ ರಿಜ್ವಾನ್ ಅವರನ್ನು ಸೇರಿಸಬೇಕೆಂದು ಅಲೀಮ್ ಒತ್ತಾಯಿಸಿದ್ದರು. ಆದರೆ, ಯಾರೂ ಅವರನ್ನು ಬೆಂಬಲಿಸಲಿಲ್ಲ' ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಬದಲಾವಣೆ ಚರ್ಚೆ ನಡುವೆ ಕೌತುಕ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ-ಬಿ.ಕೆ ಹರಿಪ್ರಸಾದ್ ಮಾತುಕತೆ! Video

ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ನಾಳೆ ಮರು ಮತದಾನ: ಚುನಾವಣಾ ಆಯೋಗ ಆದೇಶ!

ಕದನ ವಿರಾಮ ಇದ್ದರೂ, ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ನಾಲ್ವರು ಸಾವು!

ಡಿಸಿಎಂ DKS ಪುತ್ರಿಗೆ ಹೆಣ್ಣು ಮಗು ಜನನ: ತಾತನಾದ ಖುಷಿ; ಆಸ್ಪತ್ರೆಗೆ ದೌಡಾಯಿಸಿದ ಡಿ.ಕೆ ಶಿವಕುಮಾರ್

ತುಮಕೂರಿನಲ್ಲಿ 44 ನವಿಲುಗಳ ಸಾವಿಗೆ ಹಕ್ಕಿಜ್ವರ ಕಾರಣ: ICAR ಪರೀಕ್ಷೆಯಿಂದ ದೃಢ!

SCROLL FOR NEXT