ಕ್ರಿಕೆಟ್

T20 World Cup 2026: Allen ದಾಖಲೆ ಶತಕ; ಅಜೇಯ ಆಫ್ರಿಕಾ ಮಣಿಸಿ ನ್ಯೂಜಿಲ್ಯಾಂಡ್ ಫೈನಲ್‌ಗೆ ಲಗ್ಗೆ!

ಟಿ20 ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು 9 ವಿಕೆಟ್ ಗಳಿಂದ ಮಣಿಸುವ ಮೂಲಕ ನ್ಯೂಜಿಲ್ಯಾಂಡ್ ಫೈನಲ್‌ಗೆ ಪ್ರವೇಶಿಸಿದೆ.

ಟಿ20 ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು 9 ವಿಕೆಟ್ ಗಳಿಂದ ಮಣಿಸುವ ಮೂಲಕ ನ್ಯೂಜಿಲ್ಯಾಂಡ್ ಫೈನಲ್‌ಗೆ ಪ್ರವೇಶಿಸಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ 170 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ 12.5 ಓವರ್ ನಲ್ಲೇ ಯಶಸ್ವಿಯಾಗಿ ಬೆನ್ನಟ್ಟಿದೆ. ಆರಂಭಿಕ ಜೋಡಿ ಟಿಮ್ ಸೀಫರ್ಟ್ ಮತ್ತು ಫಿನ್ ಅಲೆನ್ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಕೇವಲ ಎಂಟು ಓವರ್‌ಗಳಲ್ಲಿ 100 ರನ್‌ ಬಾರಿಸಿದರು. ಟಿಮ್ ಸೀಫರ್ಟ್ 58 ರನ್ ಗಳಿಸಿ ಔಟಾದರೆ ಫಿನ್ ಅಲೆನ್ ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದಲ್ಲದೆ ದಾಖಲೆಯ ಶತಕ ಪೂರೈಸಿದರು.

ಆರಂಭಿಕ ಆಘಾತ ಎದುರಿಸಿದ್ದ ದಕ್ಷಿಣ ಆಫ್ರಿಕಾಕ್ಕೆ ಮಾರ್ಕೊ ಜಾನ್ಸೆನ್ ಆಪದ್ಬಾಂಧವರು. ಬಿರುಸಿನ ಅರ್ಧಶತಕದಿಂದಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 169 ರನ್ ಗಳಿಸಿತು. ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಆಫ್ರಿಕನ್ ತಂಡವು ಕಳಪೆ ಆರಂಭ ಪಡೆಯಿತು. ಡಿ ಕಾಕ್ ಮತ್ತು ರಿಕಲ್ಟನ್ ಅವರ ವಿಕೆಟ್‌ಗಳನ್ನು 12 ರನ್‌ಗಳಿಗೆ ಕಳೆದುಕೊಂಡಿತು.

ನಂತರ ಡೆವಾಲ್ಡ್ ಬ್ರೆವಿಸ್ ಮತ್ತು ನಾಯಕ ಐಡೆನ್ ಮಾರ್ಕ್ರಾಮ್ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಅನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು. ಆದಾಗ್ಯೂ ರಾಚಿನ್ ಈ ಜೊತೆಯಾಟವನ್ನು ಮುರಿದರು. ಪರಿಣಾಮ ದಕ್ಷಿ ಆಫ್ರಿಕಾ 77 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡಿತು. ಆದರೆ ನಂತರ ಜಾನ್ಸೆನ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಜೊತೆಯಾಟವು ತಂಡವನ್ನು ಸ್ಪರ್ಥಾತ್ಮಕ ಸ್ಕೋರ್‌ಗೆ ಏರಿಸಿತು. ಅದು ಅವರ ಬೌಲರ್‌ಗಳಿಗೆ ಹೋರಾಟ ನೀಡಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಈ ಗುರಿಯನ್ನು ನ್ಯೂಜಿಲ್ಯಾಂಡ್ ವೇಗವಾಗಿ ಬೆನ್ನಟ್ಟಿ ಫೈನಲ್ ಸ್ಥಾನ ಭದ್ರಪಡಿಸಿಕೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ