ಕೋಲ್ಕತಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಬ್ಯಾಟರ್ ಫಿನ್ ಅಲೆನ್ ದಾಖಲೆಗಳ ಸುರಿಮಳೆ ಗೈದಿದ್ದಾರೆ.
ನಿನ್ನೆ ಕೋಲ್ಕತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 170 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ಕೇವಲ 12.5 ಓವರ್ ನಲ್ಲೇ ಕೇವಲ 1 ವಿಕೆಟ್ ನಷ್ಟಕ್ಕೆ 173ರನ್ ಪೇರಿಸಿ 9 ವಿಕೆಟ್ ಭರ್ಜರಿ ಜಯ ದಾಖಲಿಸಿದ್ದು ಮಾತ್ರವಲ್ಲದೇ ಫೈನಲ್ ಗೆ ಪ್ರವೇಶ ಪಡೆಯಿತು.
ನಿನ್ನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ಫಿನ್ ಅಲೆನ್ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಅವರ ಈ ಅದ್ಭುತ ಇನ್ನಿಂಗ್ಸ್ ನಲ್ಲಿ 8 ಸಿಕ್ಸರ್ ಮತ್ತು 10 ಬೌಂಡರಿಗಳು ಇದ್ದವು.
ಅಂತಾರಾಷ್ಟ್ರೀಯ ಟಿ20 ಇತಿಹಾಸದ ವೇಗದ ಶತಕ
ಇನ್ನು ನಿನ್ನೆಯ ಶತಕದ ಮೂಲಕ ಫಿನ್ ಅಲೆನ್ ಅಂತಾರಾಷ್ಟ್ರೀಯ ಟಿ20 ಇತಿಹಾಸದ ವೇಗದ ಶತಕ ಸಿಡಿಸಿದ ಜಂಟಿ ಮೂರನೇ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.
ಇದಕ್ಕೂ ಮೊದಲು 2024ರಲ್ಲಿ ಎಸ್ಟೋನಿಯಾದ ಸಾಹಿಲ್ ಚೌಹಾಣ್ ಸೈಪ್ರಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಟಿ20 ಇತಿಹಾಸದಲ್ಲಿ ಎಸೆತಗಳ ಲೆಕ್ಕಾಚಾರದಲ್ಲಿ ದಾಖಲಾದ ವೇಗದ ಶತಕವಾಗಿದೆ. ಬಳಿಕ ಟರ್ಕಿ ತಂಡ ಮುಹಮದ್ ಫಹಾದ್ ಬಲ್ಗೇರಿಯಾ ವಿರುದ್ಧ 2025ರಲ್ಲಿ 29 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
Fastest T20I hundreds (by balls taken)
27 - Sahil Chauhan (Estonia) v Cyprus, Episkopi, 2024
29 - Muhammad Fahad (Turkey) v Bulgaria, Sofia, 2025
33 - Finn Allen (NZ) vs SA, Kolkata, 2026
33 - Jan Nicol Loftie-Eaton (NAM) vs NEP, Kirtipur, 2024
33 - Sikandar Raza (ZIM) v Gambia, Nairobi, 2024
ಟಿ20 ವಿಶ್ವಕಪ್ ನಾಕೌಟ್ ನಲ್ಲಿ ಗರಿಷ್ಠ ರನ್
ನಿನ್ನೆ ಫಿನ್ ಅಲೆನ್ ಸಿಡಿಸಿದ ಶತಕವು ಟಿ20 ವಿಶ್ವಕಪ್ ನಾಕೌಟ್ ನಲ್ಲಿ ಬಂದ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿದೆ. ಇದಕ್ಕೂ ಮೊದಲು 2009ರ ಟಿ20 ವಿಶ್ವಕಪ್ ಟೂರ್ನಿಯ ಸೆಮೀಸ್ ನಲ್ಲಿ ವಿಂಡೀಸ್ ವಿರುದ್ಧ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಅಜೇಯ 96 ರನ್ ಗಳಿಸಿದ್ದರು. ಬಳಿಕ 2016ರ ಟಿ20 ವಿಶ್ವಕಪ್ ಸೆಮೀಸ್ ನಲ್ಲಿ ವಿಂಡೀಸ್ ವಿರುದ್ಧ ಭಾರತದ ವಿರಾಟ್ ಕೊಹ್ಲಿ ಅಜೇಯ 89 ರನ್ ಪೇರಿಸಿದ್ದರು.
Highest scores in T20 WC knockouts
100* - Finn Allen vs SA, Kolkata, 2026 SF
96* - Tillakaratne Dilshan vs WI, The Oval, 2009 SF
89* - Virat Kohli vs WI, Mumbai WS, 2016 SF
86* - Alex Hales vs IND, Adelaide, 2022 SF
85* - Marlon Samuels vs ENG, Kolkata, 2016 Final
85 - Kane Williamson vs AUS, Dubai, 2021, Final
ಗರಿಷ್ಠ ಸಿಕ್ಸರ್ ಫಿನ್ ಅಲೆನ್ ಮತ್ತೊಂದು ದಾಖಲೆ
ಅಂತೆಯೇ ನಿನ್ನೆಯ ಪಂದ್ಯದಲ್ಲಿ ಫಿನ್ ಅಲೆನ್ ಒಟ್ಟು 8 ಸಿಕ್ಸರ್ ಗಳನ್ನು ಸಿಡಿಸಿದ್ದು ಆ ಮೂಲಕ ಹಾಲಿ ಟೂರ್ನಿಯಲ್ಲಿ ತಮ್ಮ ಸಿಕ್ಸರ್ ಗಳ ಗಳಿಕೆಯನ್ನು 20ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಒಂದೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಛ ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಇದೇ ಪಂದ್ಯಾವಳಿಯಲ್ಲಿ ವಿಂಡೀಸ್ ನ ಶಿಮ್ರಾನ್ ಹೆಟ್ಮೆಯರ್ 19 ಸಿಕ್ಸರ್ ಗಳನ್ನು ಕಲೆಹಾಕಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಪಾಕಿಸ್ತಾನ ಸಾಹಿಬ್ಜಾದಾ ಫರ್ಹಾನ್ 18 ಸಿಕ್ಸರ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.
Most sixes in a T20 World Cup edition
20 - Finn Allen (2026)
19 - Shimron Hetmyer (2026)
18 - Sahibzada Farhan (2026)
17 - Nicholas Pooran (2024)
16 - Chris Gayle (2012)
16 - Rahmanullah Gurbaz (2024)
ಟಿ20 ವಿಶ್ವಕಪ್ ನಲ್ಲಿ ಶತಕ ಸಿಡಿಸಿದ ಮೂರನೇ ಕಿವೀಸ್ ಆಟಗಾರ
ಅಂತೆಯೇ ಫಿನ್ ಅಲೆನ್ ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ಪರ ಶತಕ ಸಿಡಿಸಿದ ಮೂರನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಇದಕ್ಕೂ ಮೊದಲು 2012ರಲ್ಲಿ ಬಾಂಗ್ಲಾದೇಶ ವಿರುದ್ಧ ಬ್ರೆಂಡನ್ ಮೆಕ್ಕಲಮ್ (123), 2022ರಲ್ಲಿ ಶ್ರೀಲಂಕಾ ವಿರುದ್ಧ ಗ್ಲೇನ್ ಫಿಲಿಪ್ಸ್ (104) ಈ ದಾಖಲೆ ನಿರ್ಮಿಸಿದ್ದರು. ಅಂತೆಯೇ ನ್ಯೂಜಿಲೆಂಡ್ ಪರ ವೇಗದ ಟಿ20 ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೂ ಫಿನ್ ಅಲೆನ್ ಪಾತ್ರರಾಗಿದ್ದಾರೆ. ಈ ಹಿಂದೆ ಗ್ಲೆನ್ ಫಿಲಿಪ್ಸ್ 46 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
Hundreds for NZ in T20 WCs
123 - Brendon McCullum vs BAN, Pallekele, 2012
104 - Glenn Phillips vs SL, Sydney, 2022
100* - Finn Allen vs SA, Kolkata, 2026
ಕ್ರಿಸ್ ಗೇಯ್ಲ್ ದಾಖಲೆ ದಾಖಲೆ ಪತನ
ಇನ್ನು ಫಿನ್ ಅಲೆನ್ 33 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ವಿಂಡೀಸ್ ದೈತ್ಯ ಬ್ಯಾಟರ್ ಕ್ರಿಸ್ ಗೇಯ್ಲ್ ಸೇರಿದಂತೆ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಪ್ರಥಮವಾಗಿ ಈ ಹಿಂದೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ವಿಂಡೀಸ್ ನ ಕ್ರಿಸ್ ಗೇಯ್ಲ್ ಹೆಸರಲ್ಲಿತ್ತು. ಅವರು 2016ರಲ್ಲಿ ಇಂಗ್ಲೆಂಡ್ ವಿರುದ್ಧ 47 ಎಸೆತಗಳಲ್ಲೇ ಶತಕ ಸಿಡಿಸಿದ್ದರು. ಆದರೆ ಫಿನ್ ಅಲೆನ್ 33 ಎಸೆತಗಳಲ್ಲಿ ಶತಕ ಸಿಡಿಸಿ ಈ ದಾಖಲೆ ಹಿಂದಿಕ್ಕಿದ್ದಾರೆ.
ಕೋಲ್ಕತಾದಲ್ಲಿ ಮೊದಲ ಶತಕ
ಅಂತೆಯೇ ಫಿನ್ ಅಲೆನ್ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಕೋಲ್ಕತಾದ ಈಡೆನ್ ಗಾರ್ಡನ್ ನಲ್ಲಿ ಶತಕ ಸಿಡಿಸಿದ ಮತ್ತು ಗರಿಷ್ಠ ಮೊತ್ತ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ಕೀರ್ತೀಗೂ ಭಾಜನರಾಗಿದ್ದಾರೆ. ಈ ಹಿಂದೆ ಭಾರತದ ಸಂಜು ಸ್ಯಾಮ್ಸನ್ ಸಿಡಿಸಿದ್ದ 97 ರನ್ ಗಳೇ ಇಲ್ಲಿ ಬ್ಯಾಟರ್ ಕಲೆಹಾಕಿದ್ದ ಗರಿಷ್ಠ ವೈಯುಕ್ತಿಕ ಮೊತ್ತವಾಗಿತ್ತು.