ದಕ್ಷಿಣ ಆಫ್ರಿಕಾ ತಂಡ 
ಕ್ರಿಕೆಟ್

T20 ವಿಶ್ವಕಪ್ 2026: ದಕ್ಷಿಣ ಆಫ್ರಿಕಾದ ಗೆಲುವಿನ ನಾಗಾಲೋಟಕ್ಕೆ ಬಿತ್ತು ಬ್ರೇಕ್; ಹೀನಾಯ ಸೋಲಿನೊಂದಿಗೆ ಪಯಣ ಅಂತ್ಯ!

ನಿನ್ನೆ ಕೋಲ್ಕತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 170 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ಕೇವಲ 12.5 ಓವರ್ ನಲ್ಲೇ ಕೇವಲ 1 ವಿಕೆಟ್ ನಷ್ಟಕ್ಕೆ 173ರನ್ ಪೇರಿಸಿ 9 ವಿಕೆಟ್ ಭರ್ಜರಿ ಜಯ ದಾಖಲಿಸಿತು.

ಕೋಲ್ಕತಾ: ಟಿ20 ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿನ ನಾಗಾಲೋಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು ಸೆಮೀಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಾಣುವುದರೊಂದಿಗೆ ತನ್ನ ಪಯಣ ಅಂತ್ಯಗೊಳಿಸಿದೆ.

ಹೌದು.. ನಿನ್ನೆ ಕೋಲ್ಕತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 170 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ಕೇವಲ 12.5 ಓವರ್ ನಲ್ಲೇ ಕೇವಲ 1 ವಿಕೆಟ್ ನಷ್ಟಕ್ಕೆ 173ರನ್ ಪೇರಿಸಿ 9 ವಿಕೆಟ್ ಭರ್ಜರಿ ಜಯ ದಾಖಲಿಸಿದ್ದು ಮಾತ್ರವಲ್ಲದೇ ಫೈನಲ್ ಗೆ ಪ್ರವೇಶ ಪಡೆಯಿತು.

ಈ ಪಂದ್ಯದ ಸೋಲಿನೊಂದಿಗೆ ದಕ್ಷಿಣ ಆಫ್ರಿಕಾದ ಗೆಲುವಿನ ನಾಗಾಲೋಟಕ್ಕೂ ಬ್ರೇಕ್ ಬಿದ್ದಿದೆ. 2024ರಲ್ಲಿ ಆರಂಭವಾಗಿದ್ದ ದಕ್ಷಿಣ ಆಫ್ರಿಕಾದ ಟಿ20 ವಿಶ್ವಕಪ್ ಗೆಲುವಿನ ಪಯಣ ನಿನ್ನೆಗೆ ಅಂತ್ಯವಾಗಿದೆ. ಈ ಸಮಯದಲ್ಲಿ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧದ ಸೂಪರ್ 8 ಹಂತದ ಪಂದ್ಯ ಸೇರಿದಂತೆ ಸತತ 7 ಪಂದ್ಯಗಳಲ್ಲಿ ಜಯಭೇರಿ ಬಾರಿಸಿತ್ತು. ಆದರೆ ಈ ಗೆಲುವಿನ ಓಟವನ್ನು ನ್ಯೂಜಿಲೆಂಡ್ ಅಂತ್ಯಗೊಳಿಸಿದೆ.

ಆ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಸತತ ಜಯ ಗಳಿಸಿದ ತಂಡಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಜಂಟಿ ಮೂರನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು 2024ರಿಂದ 2026ರವರಗೆ ಭಾರತ ಸತತ 12 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಕ್ಕೇರಿದೆ. ಉಳಿದಂತೆ ದಕ್ಷಿಣ ಆಫ್ರಿಕಾ 8 ಪಂದ್ಯಗಳಲ್ಲಿ ಸತತ ಜಯಗಳಿಸಿತ್ತು. ಜಂಟಿ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಕೂಡ 2024ರಲ್ಲಿ 8 ಪಂದ್ಯಗಳಲ್ಲಿ ಸತತ ಜಯ ಕಂಡಿತ್ತು.

Most consecutive wins in Men’s T20 WC

12 - India (2024-2026)

8 - South Africa (2024)

8 - Australia (2022-2024)

7 - South Africa (2024) - streak ended today

7 - England (2010-2012)

7 - India (2012-2014)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ಸಂಪೂರ್ಣ ಕುಸಿಯುತ್ತಿದೆ': ಹಾರ್ಮುಜ್ ತೆರೆಯುವಂತೆ ಟೆಹ್ರಾನ್ ಬೇಡಿಕೊಳ್ಳುತ್ತಿದೆ: ಟ್ರಂಪ್

ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ: ಹಣಕ್ಕಾಗಿ ಹೂತಿಟ್ಟ ಸಹೋದರಿ ಶವವನ್ನೇ ಬ್ಯಾಂಕ್​ಗೆ ಹೊತ್ತು ತಂದ ವ್ಯಕ್ತಿ!

IPL 2026: ಜೈಸ್ವಾಲ್, ಫೆರೀರಾ ಅಬ್ಬರಕ್ಕೆ ಪಂಜಾಬ್ ತತ್ತರ; PBKS ವಿರುದ್ಧ RR ಭರ್ಜರಿ ಗೆಲುವು

CM ಸಿದ್ದರಾಮಯ್ಯ ಪದತ್ಯಾಗಕ್ಕೂ ಸಿದ್ಧರಾಗಿದ್ದಾರೆ: ಮಾಜಿ ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ; Video

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ಮುಂದಿನ ತಿಂಗಳು ಭಾರತಕ್ಕೆ ಬರಲಿದೆ S-400 ಕ್ಷಿಪಣಿ 4ನೇ ಘಟಕ!

SCROLL FOR NEXT