ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ 
ಕ್ರಿಕೆಟ್

'ಶರ್ಟ್ ಇಸ್ತ್ರೀ ಮಾಡಲಾಗಿದೆ... ಈಗ ಹುಡುಗರಿಗೆ ಬಿಟ್ಟಿದ್ದು': ಟಿ20 ವಿಶ್ವಕಪ್ ಫೈನಲ್‌ಗೆ ಮುನ್ನ ಮಾಜಿ ಆಟಗಾರ ದಿನೇಶ್ ಕಾರ್ತಿಕ್

ಈ ಟ್ರೆಂಡ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಲೀಗ್ ಹಂತದ ಪಂದ್ಯಗಳಲ್ಲಿ ಗೆಲ್ಲಲೇಬೇಕಾದಾಗ ದಿನೇಶ್ ಕಾರ್ತಿಕ್ ಅವರ ಶರ್ಟ್ ಅನ್ನು ಇಸ್ತ್ರಿ ಮಾಡುವಂತೆ ಅಭಿಮಾನಿಗಳು ಪದೇ ಪದೆ ಒತ್ತಾಯಿಸುತ್ತಿದ್ದಾರೆ.

ಅಹಮದಾಬಾದ್: ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತಮ್ಮ ಶರ್ಟ್ ಅನ್ನು ಇಸ್ತ್ರಿ ಮಾಡಿಕೊಂಡಿದ್ದಾರೆ. ಇದು ಟೀಂ ಇಂಡಿಯಾಕ್ಕೆ ಅದೃಷ್ಟ ತರುವ ಆಚರಣೆಯಾಗಿದೆ.

'ಶರ್ಟ್ ಐರನ್ ಮಾಡಲಾಗಿದೆ. ವೈಬ್ಸ್ ಸೆಟ್ ಆಗಿದೆ. ಈಗ ಹುಡುಗರಿಗೆ ಬಿಟ್ಟದ್ದು' ಎಂಬ ಶೀರ್ಷಿಕೆಯೊಂದಿಗೆ X ನಲ್ಲಿ ವಿಡಿಯೋ ಹಂಚಿಕೊಂಡಿರುವ ದಿನೇಶ್ ಕಾರ್ತಿಕ್, 'ಭಾರತೀಯ ತಂಡ ಫೈನಲ್‌ಗೆ ಅರ್ಹತೆ ಪಡೆದಿದೆ. ಈಗ ಆಟಗಾರರು ಅಭ್ಯಾಸ ಮಾಡಲು ಪ್ರಾರಂಭಿಸುತ್ತಾರೆ, ವಿಶ್ಲೇಷಕರು ಚರ್ಚೆ ಮತ್ತು ಯೋಜನೆಯನ್ನು ಪ್ರಾರಂಭಿಸುತ್ತಾರೆ, ಆದರೆ ನನ್ನ ಪಾತ್ರವೇನು? ಸರಳ. ಶರ್ಟ್ ಅನ್ನು ಇಸ್ತ್ರಿ ಮಾಡುವುದು' ಎಂದಿದ್ದಾರೆ.

40 ವರ್ಷ ವಯಸ್ಸಿನ ಅವರು 2024ರ ಆವೃತ್ತಿಯ ಸಮಯದಲ್ಲಿ ತಮ್ಮ ಶರ್ಟ್ ಇಸ್ತ್ರೀ ಮಾಡುವ ಪ್ರವೃತ್ತಿಯನ್ನು ಪ್ರಾರಂಭಿಸಿದ್ದಾರೆ ಮತ್ತು ಭಾರತ ಫೈನಲ್ ಅನ್ನು ಗೆದ್ದಿದೆ. 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2025ರ ಏಷ್ಯಾ ಕಪ್ ಫೈನಲ್, 2025ರ ಮಹಿಳಾ ವಿಶ್ವಕಪ್ ಫೈನಲ್, WPL 2026ರ ಫೈನಲ್‌ನಲ್ಲಿ ಅವರು ಇದೇ ರೀತಿ ಮಾಡಿದ್ದರು ಮತ್ತು ಅವರು ಹಾಗೆ ಮಾಡಿದಾಗಲೆಲ್ಲ ಭಾರತವು ಪ್ರತಿ ಬಾರಿಯೂ ವಿಜಯಶಾಲಿಯಾಗಿ ಹೊರಹೊಮ್ಮಿದೆ ಎನ್ನಲಾಗಿದೆ.

ಈ ಟ್ರೆಂಡ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಲೀಗ್ ಹಂತದ ಪಂದ್ಯಗಳಲ್ಲಿ ಗೆಲ್ಲಲೇಬೇಕಾದಾಗ ದಿನೇಶ್ ಕಾರ್ತಿಕ್ ಅವರ ಶರ್ಟ್ ಅನ್ನು ಇಸ್ತ್ರಿ ಮಾಡುವಂತೆ ಅಭಿಮಾನಿಗಳು ಪದೇ ಪದೆ ಒತ್ತಾಯಿಸುತ್ತಿದ್ದಾರೆ. ಆದಾಗ್ಯೂ, ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಈ ಆಚರಣೆಯನ್ನು ಫೈನಲ್‌ಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

'ನಾನು ಇದನ್ನು ಮೋಜಿನಂತೆ ಮಾಡಲು ಪ್ರಾರಂಭಿಸಿದೆ. ಆದರೆ, ಲೀಗ್ ಹಂತದ ಪಂದ್ಯಗಳಲ್ಲಿ ಜನರು ನನ್ನ ಶರ್ಟ್ ಅನ್ನು ಇಸ್ತ್ರಿ ಮಾಡುವಂತೆ ಕೇಳಲು ಪ್ರಾರಂಭಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕಾಗಿ ಮತ್ತು ನಂತರ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೂ ಮೊದಲು ಜನರು ನನ್ನ ಶರ್ಟ್ ಅನ್ನು ಇಸ್ತ್ರಿ ಮಾಡಲು ಕೇಳುತ್ತಿದ್ದರು' ಎಂದು ಕಾರ್ತಿಕ್ ಹೇಳಿದರು.

ಫೈನಲ್‌ ಪಂದ್ಯವನ್ನು ಗೆದ್ದರೆ ಭಾರತವು ಅನೇಕ ದಾಖಲೆಗಳನ್ನು ಮಾಡಲಿದೆ. ಮೊದಲ ಬಾರಿಗಿ ಹಾಲಿ ಚಾಂಪಿಯನ್ ತಂಡ ಟಿ20 ವಿಶ್ವಕಪ್ ಪ್ರಶಸ್ತಿ ಉಳಿಸಿಕೊಂಡಂತಾಗುತ್ತದೆ, ಟಿ20 ವಿಶ್ವಕಪ್ ಗೆದ್ದ ಮೊದಲ ಆತಿಥೇಯ ತಂಡವಾಗಲಿದೆ ಮತ್ತು ಮೊದಲ ಬಾರಿಗೆ ಮೂರು ಟಿ20 ವಿಶ್ವಕಪ್ ಚಾಂಪಿಯನ್‌ಶಿಪ್‌ ಗೆದ್ದ ತಂಡವಾಗಲಿದೆ. ನ್ಯೂಜಿಲೆಂಡ್‌ಗೆ, ಸ್ಟಾರ್ ಆಟಗಾರರೇ ತುಂಬಿರುವ ಭಾರತದ ಬ್ಯಾಟಿಂಗ್ ಲೈನ್‌ಅಪ್ ಅನ್ನು ಶಾಂತವಾಗಿರಿಸುವುದು ಹೇಗೆ ಮತ್ತು ಜಸ್ಪ್ರೀತ್ ಬುಮ್ರಾ ಅವರ ತಪ್ಪದ ಲೈನ್ ಮತ್ತು ಲೆಂತ್ ಅನ್ನು ಹೇಗೆ ಎದುರಿಸುವುದು ಎಂಬುದು ದೊಡ್ಡ ಸವಾಲುಗಳಾಗಿವೆ.

ಮುಖಾಮುಖಿ ಪಂದ್ಯಗಳಲ್ಲಿ, ಇತಿಹಾಸ ನ್ಯೂಜಿಲೆಂಡ್‌ಗೆ ಅನುಕೂಲಕರವಾಗಿದ್ದರೂ, ಫಾರ್ಮ್ ಭಾರತದ ಪರವಾಗಿದೆ. 2007, 2016 ಮತ್ತು 2021ರಲ್ಲಿ ಜಯಗಳಿಸಿರುವ ಬ್ಲಾಕ್ ಕ್ಯಾಪ್ಸ್ ತಂಡವು ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಆದಾಗ್ಯೂ, ಆತಿಥೇಯ ರಾಷ್ಟ್ರವು ಇತ್ತೀಚೆಗೆ ಭಾರತದಲ್ಲಿ ನಡೆದ ಟಿ20ಐ ಸರಣಿಯಲ್ಲಿ 4-1 ಅಂತರದ ಗೆಲುವಿನೊಂದಿಗೆ ಪ್ರಾಬಲ್ಯ ಸಾಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾನ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕ ಮೇಲೆ ಇಸ್ರೇಲ್ ದಾಳಿ, ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಯುದ್ಧ-Video

ಭಾರತೀಯ ಅಭಿಮಾನಿಗಳ ಹೃದಯ ಒಡೆಯಬೇಕು: ಮಿಚೆಲ್ ಸ್ಯಾಂಟ್ನರ್'ಗೆ ಸೂರ್ಯಕುಮಾರ್ ತಿರುಗೇಟು!

T20 World Cup 2026 Final: ಭಾರತದ ಸಂಭಾವ್ಯ ಪ್ಲೇಯಿಂಗ್ XI vs ನ್ಯೂಜಿಲೆಂಡ್; ವಿಶ್ವದ ನಂ.1 ಆಟಗಾರ ಔಟ್?

T20 World Cup 2026 Final: 'ಕಿವೀಸ್ ಶಾಪ'ದಿಂದ ಪಾರಾಗಲು ಭಾರತ ಈ ಮೂರು ತಪ್ಪುಗಳನ್ನು ಮಾಡಲೇಬಾರದು...

ಬೆಂಗಳೂರಿನಲ್ಲಿ ತಾಪಮಾನ ಏರಿಕೆ: ಬಿಸಿಲ ಝಳಕ್ಕೆ ಜನತೆ ತತ್ತರ, ‘AC City’ ಹೆಗ್ಗಳಿಕೆಗೆ ದಕ್ಕೆ..!

SCROLL FOR NEXT