ಮಹಿಳಾ ಪತ್ರಕರ್ತೆಗೆ ಲೈಂಗಿಕ ಕಿರುಕುಳ 
ಕ್ರಿಕೆಟ್

Video: T20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಮಹಿಳಾ ವರದಿಗಾರ್ತಿಗೆ ಲೈಂಗಿಕ ಕಿರುಕುಳ; ಕ್ರೀಡಾ ಪತ್ರಕರ್ತೆ ಪೋಸ್ಟ್!

ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ವರದಿ ಮಾಡುತ್ತಿದ್ದಾಗ ಓರ್ವ ವ್ಯಕ್ತಿ ತನ್ನನ್ನು ಅನುಚಿತವಾಗಿ ಮುಟ್ಟಿದ್ದಾರೆ ಎಂದು ಖಾಸಗಿ ವಾಹಿನಿಯ ಕ್ರೀಡಾ ವರದಿಗಾರ್ತಿ ಗಾರ್ಗಿ ರಾವತ್ (Gargi Raut) ಆರೋಪಿಸಿದ್ದಾರೆ.

ಅಹ್ಮದಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಮಹಿಳಾ ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.

ಭಾರತದ ಟಿ20 ವಿಶ್ವಕಪ್ 2026 ಗೆಲುವಿನ ನಂತರ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ವರದಿ ಮಾಡುತ್ತಿದ್ದಾಗ ಓರ್ವ ವ್ಯಕ್ತಿ ತನ್ನನ್ನು ಅನುಚಿತವಾಗಿ ಮುಟ್ಟಿದ್ದಾರೆ ಎಂದು ಖಾಸಗಿ ವಾಹಿನಿಯ ಕ್ರೀಡಾ ವರದಿಗಾರ್ತಿ ಗಾರ್ಗಿ ರಾವತ್ (Gargi Raut) ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ವಿಡಿಯೋ ಸಹಿತ ಪೋಸ್ಟ್ ಮಾಡಿರುವ ಗಾರ್ಗಿ ರಾವತ್, "ನೀವು ನನ್ನನ್ನು ಅನುಚಿತವಾಗಿ ಮುಟ್ಟಿದರೆ, ನಾನು ನಿಮ್ಮ ಮುಖವನ್ನು ಇಂಟರ್ನೆಟ್‌ನಲ್ಲಿ ಹಾಕುತ್ತೇನೆ" ಎಂದು ಬರೆದಿದ್ದಾರೆ.

ಈ ವೀಡಿಯೊ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸ್ ಕ್ರಮ ಜರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಆಗಿದ್ದೇನು?

ಭಾನುವಾರ ರಾತ್ರಿ ಟಿ20 ವಿಶ್ವಕಪ್ 2026 ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಜಯಗಳಿಸಿದ ನಂತರ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಗಾರ್ಗಿ ರಾವತ್ ವರದಿ ಮಾಡುತ್ತಿದ್ದಾಗ ಆಕೆಯ ಹಿಂಬದಿಯಿಂದ ಬಂದ ವ್ಯಕ್ತಿ ಆಕೆಯನ್ನು ಅನುಚಿತವಾಗಿ ಮುಟ್ಟಿದ್ದಾನೆ. ಕೂಡಲೇ ಇದನ್ನು ಗಮನಿಸಿದ ಆಕೆ ವರದಿ ಮಾಡುತ್ತಲೇ ಆ ದುಷ್ಕರ್ಮಿಯನ್ನು ಕೋಪದಿಂದ ನೋಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಸೋಮವಾರ ಎಕ್ಸ್‌ನಲ್ಲಿ ಗಾರ್ಗಿ ರಾವತ್ ತಮ್ಮ ವರದಿಯಿಂದ ಆರು ಸೆಕೆಂಡುಗಳ ಕ್ಲಿಪ್ ಅನ್ನುಪೋಸ್ಟ್ ಮಾಡಿದ್ದು, "ನೀವು ಅನುಚಿತವಾಗಿ ನನ್ನ ಮೇಲೆ ಕೈ ಹಾಕಿದರೆ, ನಾನು ನಿಮ್ಮ ಮುಖವನ್ನು ಇಂಟರ್ನೆಟ್‌ನಲ್ಲಿ ಇಡುತ್ತೇನೆ. ವರದಿಗಾರ್ತಿಯೊಬ್ಬರು ಅನುಚಿತವಾಗಿ ಮುಟ್ಟಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡಲು ಸಾಧ್ಯವಾಗಬೇಕು" ಎಂದು ಬರೆದಿದ್ದಾರೆ. ಅಂತೆಯೇ ಗಾರ್ಗಿ ರಾವತ್ ತಮ್ಮ ಈ ಪೋಸ್ಟ್ ಅನ್ನು ಅಹ್ಮದಾಬಾದ್ ಪೊಲೀಸರನ್ನು ಸಹ ಟ್ಯಾಗ್ ಮಾಡಿದ್ದಾರೆ.

ವ್ಯಾಪಕ ಆಕ್ರೋಶ

ಇನ್ನು ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವಾರು ಬಳಕೆದಾರರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಂತೆಯೇ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಗುರುತಿಸುವ ಅನೇಕ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಆದಾಗ್ಯೂ, ಒಬ್ಬ ಬಳಕೆದಾರ ಇದು ಆಕಸ್ಮಿಕವಾಗಿರಬಹುದು.. ಆ ವ್ಯಕ್ತಿ ತನ್ನ ಜೇಬಿನಿಂದ ತನ್ನ ಫೋನ್ ಅನ್ನು ತೆಗೆದುಕೊಳ್ಳುತ್ತಿರಬಹುದು ಎಂದು ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಪತ್ರಕರ್ತೆ ಗಾರ್ಗಿ ರಾವತ್, 'ನನ್ನ ಸುತ್ತಲೂ ಸಾಕಷ್ಟು ಸ್ಥಳವಿತ್ತು ಮತ್ತು ಅವರು ವರದಿ ಮಾಡುವಾಗ ಬೇರೆ ಯಾರೂ ಅವರನ್ನು ಮುಟ್ಟಿರಲಿಲ್ಲ.. ಅವರು ನಡೆದುಕೊಂಡು ಹೋಗುವುದನ್ನು ನಾನು ನೋಡುತ್ತಿದ್ದೇನೆ ಎಂದು ನಿಮಗೆ ಕಾಣುತ್ತಿಲ್ಲವೇ? ಅವರು ನನ್ನ ಸುತ್ತಲೂ ನಡೆಯುತ್ತಿರುವ ಏಕೈಕ ವ್ಯಕ್ತಿ ಅಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಪ್ರಧಾನಿ ಮೋದಿ ಇಸ್ರೇಲ್ ಮತ್ತು ಇರಾನ್‌ಗೆ ಒಂದು ಫೋನ್ ಕರೆ ಮಾಡಿದ್ರೆ ಯುದ್ಧ ನಿಲ್ಲುತ್ತದೆ' : UAE ರಾಯಭಾರಿ ಹುಸೇನ್ ಹಸನ್ ಮಿರ್ಜಾ

ಇರಾನ್ ಯುದ್ಧ: ಷೇರುಮಾರುಕಟ್ಟೆ ಮಹಾಕುಸಿತ, 30 ಲಕ್ಷ ಕೋಟಿ ರೂ ನಷ್ಟ; ಇಂದು ಒಂದೇ ದಿನ 12 ಲಕ್ಷ ಕೋಟಿ ರೂ ಕಳೆದುಕೊಂಡ ಹೂಡಿಕೆದಾರರು!

ಇರಾನ್ ತೈಲ ಘಟಕಗಳ ಮೇಲೆ ದಾಳಿ: ಮಿತ್ರಪಡೆಗಳಲ್ಲಿ ಬಿರುಕು, ಇಸ್ರೇಲ್ ಗೆ 'WTF'ಸಂದೇಶ ಕಳುಹಿಸಿದ ಶ್ವೇತಭವನ!

ಆಮೆಗತಿಯಲ್ಲಿ ಎತ್ತಿನಹೊಳೆ ಯೋಜನೆ: ರಾಜ್ಯಸಭೆಯಲ್ಲಿ ಹೆಚ್. ಡಿ. ದೇವೇಗೌಡ ಪ್ರಸ್ತಾಪ, ರಾಜ್ಯ ಸರ್ಕಾರದ ವಿರುದ್ಧ ಕಿಡಿ! Video

GBA ಚುನಾವಣೆ: ಐದು ನಗರ ಪಾಲಿಕೆಗಳ ವಾರ್ಡ್ ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಬಿಡುಗಡೆ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

SCROLL FOR NEXT