ಮೈಕಲ್ ವಾನ್  
ಕ್ರಿಕೆಟ್

ICC ವಿರುದ್ಧ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಆಕ್ರೋಶ! ಸ್ಫೋಟಕ ಪೋಸ್ಟ್, ಯಾಕೆ?

ಮಾರ್ಚ್ 01 ರಂದು ಭಾರತ ವಿರುದ್ಧದ ಸೂಪರ್ 8 ಸೋಲಿನ ನಂತರ ವೆಸ್ಟ್ ಇಂಡೀಸ್ ಟೂರ್ನಿಯಿಂದ ಹೊರಬಿದ್ದಿತ್ತು.

ನವದೆಹಲಿ: ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಕೇವಲ 36 ಗಂಟೆಗಳ ಇಂಗ್ಲೆಂಡ್ ಕ್ರಿಕೆಟ್ ತಂಡ ಸ್ವದೇಶಕ್ಕೆ ಮರಳಿದರೆ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳು ಇನ್ನೂ ಭಾರತದಲ್ಲಿಯೇ ಇವೆ ಎಂದು ವರದಿಯಾಗಿದೆ.

ಮಾರ್ಚ್ 01 ರಂದು ಭಾರತ ವಿರುದ್ಧದ ಸೂಪರ್ 8 ಸೋಲಿನ ನಂತರ ವೆಸ್ಟ್ ಇಂಡೀಸ್ ಟೂರ್ನಿಯಿಂದ ಹೊರಬಿದ್ದಿತ್ತು.

ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ಮಾ. 04 ರಂದು ಸೆಮಿ-ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿತ್ತು. ಆದರೂ, ಇರಾನ್‌ನೊಂದಿಗಿನ ಯುಎಸ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ವಾಯುಪ್ರದೇಶದ ನಿರ್ಬಂಧಗಳ ಕಾರಣದಿಂದಾಗಿ ಈ ಎರಡು ರಾಷ್ಟ್ರಗಳ ಆಟಗಾರರು ಭಾರತದಲ್ಲಿಯೇ ಉಳಿದಿದ್ದಾರೆ.

ಈ ಸುಧೀರ್ಘ ವಿಳಂಬದ ಬಗ್ಗೆ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯನ್ನು ಪ್ರಶ್ನಿಸಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಾಯುತ್ತಿರುವಾಗ ಇಂಗ್ಲೆಂಡ್ ಹೇಗೆ ಬೇಗ ಹೊರಡಲು ಸಾಧ್ಯವಾಯಿತು ಎಂದು ಕೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಮಾರ್ಚ್ 1 ರಂದು ವೆಸ್ಟ್ ಇಂಡೀಸ್ ವಿಶ್ವಕಪ್‌ನಿಂದ ಹೊರಬಿದ್ದಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಈಗ ಮಾರ್ಚ್ 9. ಅವರು ಇನ್ನೂ ಕೋಲ್ಕತ್ತಾದಲ್ಲಿಯೇ ಇದ್ದಾರೆ.

ದಕ್ಷಿಣ ಆಫ್ರಿಕಾ ಪರಿಸ್ಥಿತಿ ಕೂಡಾ ಅದೇ ಆಗಿದೆ. ಇದು ಸರಿಯಲ್ಲ. ಇಂಗ್ಲೆಂಡ್ 36 ಗಂಟೆಗಳಲ್ಲಿ ಸ್ವದೇಶಕ್ಕೆ ಮರಳಲು ಸಾಧ್ಯವಾದರೆ ಇದೇ ಪರಿಸ್ಥಿತಿ ಎಲ್ಲಾ ತಂಡಗಳಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತೀಯ ನಾವಿಕರ ಹತ್ಯೆ: ಅಮೆರಿಕಾ ಆದೇಶಗಳ ಪಾಲಿಸುವ 'obedient servant': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಭಾರತೀಯ ನಾವಿಕರ ಸಾವು: ‘ವಾಣಿಜ್ಯ ಹಡಗುಗಳ ಮೇಲಿನ ದಾಳಿ ನ್ಯಾಯಸಮ್ಮತವಲ್ಲ’; ಅಮೆರಿಕಾಗೆ ಭಾರತ ಖಡಕ್‌ ಸಂದೇಶ, ರಾಜತಾಂತ್ರಿಕ ಸಂಘರ್ಷ ಉಲ್ಬಣ

ಬೆಂಗಳೂರು ಅಭಿವೃದ್ಧಿ ಖಾತೆ ಹಗ್ಗಜಗ್ಗಾಟ: ಅಧಿಕಾರಗಳ ಬಗ್ಗೆ ಸ್ಪಷ್ಟತೆ ಸಿಕ್ಕ ಬಳಿಕವಷ್ಟೇ ಅಧಿಕಾರ ಸ್ವೀಕಾರ: ಕೃಷ್ಣ ಬೈರೇಗೌಡ

ಯಾವುದೇ ನಾಗರಿಕರು ಮತದಾನದ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಸಚಿವರು, DCಗಳಿಗೆ CM ಡಿಕೆಶಿ ಖಡಕ್ ಸೂಚನೆ

ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಯೋಜನೆಗೆ ಭರ್ಜರಿ ಸ್ಪಂದನೆ; 2 ದಿನದಲ್ಲಿ 2,764 ಪಾಸ್ ವಿತರಣೆ

SCROLL FOR NEXT