ರಾಜೀವ್ ಶುಕ್ಲಾ  
ಕ್ರಿಕೆಟ್

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಸಿದ SRH ಮಾಲೀಕತ್ವದ ತಂಡ; ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯೆ

ಲಂಡನ್‌ನಲ್ಲಿ ನಡೆದ ಪುರುಷರ ದಿ ಹಂಡ್ರೆಡ್ ಹರಾಜು ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್ ಲೀಡ್ಸ್ ಲೆಗ್-ಸ್ಪಿನ್ನರ್ ಅನ್ನು 190,000 ಪೌಂಡ್‌ಗಳಿಗೆ ($255,000) ಖರೀದಿಸಿತು.

ದಿ ಹಂಡ್ರೆಡ್ ಹರಾಜಿನಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಅಬ್ರಾರ್ ಅಹ್ಮದ್‌ರನ್ನು ಖರೀದಿಸಿದ್ದಕ್ಕೆ ಭಾರತ ಮೂಲದ ಸನ್‌ರೈಸರ್ಸ್ ಲೀಡ್ಸ್ ವಿರುದ್ಧ ಇದೀಗ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, 'ಇದು ವಿದೇಶಿ ಲೀಗ್‌ಗೆ ಸಂಬಂಧಿಸಿರುವುದರಿಂದ ಮಂಡಳಿಯು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಫ್ರಾಂಚೈಸಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಶುಕ್ರವಾರ ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಶುಕ್ಲಾ, 'ಇದು ನಮ್ಮ ಡೊಮೇನ್‌ನಲ್ಲಿ (ಐಪಿಎಲ್) ಇಲ್ಲ. ಅವರು ವಿದೇಶಿ ಲೀಗ್‌ಗಾಗಿ ಆಟಗಾರನನ್ನು ಖರೀದಿ ಮಾಡಿದ್ದಾರೆ. ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ; ನಾವು ಏನನ್ನೂ ಮಾಡಲು ಸಾಧ್ಯವಿಲ್ಲ' ಎಂದರು.

ಲಂಡನ್‌ನಲ್ಲಿ ನಡೆದ ಪುರುಷರ ದಿ ಹಂಡ್ರೆಡ್ ಹರಾಜು ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್ ಲೀಡ್ಸ್ ಲೆಗ್-ಸ್ಪಿನ್ನರ್ ಅನ್ನು 190,000 ಪೌಂಡ್‌ಗಳಿಗೆ ($255,000) ಖರೀದಿಸಿತು. ಪಂದ್ಯಾವಳಿಯಲ್ಲಿ ಭಾರತ-ಮಾಲೀಕತ್ವದ ತಂಡ ಖರೀದಿಸಿದ ಮೊದಲ ಪಾಕಿಸ್ತಾನದ ಆಟಗಾರನಾದರು.

ಬಳಿಕ ಸನ್‌ರೈಸರ್ಸ್ ಲೀಡ್ಸ್ ಸಹ-ಮಾಲೀಕರಾದ ಕಾವ್ಯಾ ಮಾರನ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷ ಮೇನಲ್ಲಿ ನಡೆದ ಆಪರೇಷನ್ ಸಿಂಧೂರದ ನಂತರ 27 ವರ್ಷದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರು ಭಾರತೀಯ ವಾಯುಪಡೆ ಮತ್ತು ಸೇನೆಯನ್ನು ಗೇಲಿ ಮಾಡಿದ್ದರು.

ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಪ್ರಕಾರ, ಭಾರತೀಯ ಮಾಧ್ಯಮ ಸಂಘಟಿತ ಸಂಸ್ಥೆಯಾದ ಸನ್ ಟಿವಿ ಕಳೆದ ವರ್ಷ ನಾರ್ದರ್ನ್ ಸೂಪರ್‌ಚಾರ್ಜರ್ಸ್ ಎಂದು ಕರೆಯಲ್ಪಡುವ ಫ್ರ್ಯಾಂಚೈಸಿಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿತು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯಿಂದ (ECB) ಶೇ 49 ರಷ್ಟು ಪಾಲನ್ನು ಮತ್ತು ಉಳಿದ ಶೇ 51 ರಷ್ಟು ಪಾಲನ್ನು ಯಾರ್ಕ್‌ಷೈರ್‌ನಿಂದ ಸುಮಾರು 100 ಮಿಲಿಯನ್ ಪೌಂಡ್‌ಗಳಿಗೆ ಖರೀದಿಸಿತು. ಅದೇ ರೀತಿ, ದಿ ಹಂಡ್ರೆಡ್‌ನಲ್ಲಿನ ಇತರ ಮೂರು ತಂಡಗಳಲ್ಲಿನ ಷೇರುಗಳನ್ನು ಭಾರತದಲ್ಲಿ ಐಪಿಎಲ್ ಫ್ರಾಂಚೈಸಿಗಳನ್ನು ಹೊಂದಿರುವ ಹೂಡಿಕೆದಾರರಿಗೆ ಮಾರಾಟ ಮಾಡಲಾಯಿತು.

ಭಾರತ ಮೂಲದ ಒಡೆತನದ ಸನ್‌ರೈಸರ್ಸ್ ಲೀಡ್ಸ್ ಮತ್ತು SA20 ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ ಈ ಹಿಂದೆಂದೂ ಸಕ್ರಿಯ ಪಾಕಿಸ್ತಾನದ ಆಟಗಾರನನ್ನು ಖರೀದಿಸಿರಲಿಲ್ಲ. ಲೀಡ್ಸ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಲು ಟ್ರೆಂಟ್ ರಾಕೆಟ್ಸ್‌ನೊಂದಿಗೆ ಬಿಡ್ಡಿಂಗ್ ಯುದ್ಧದಲ್ಲಿ ತೊಡಗಿತು.

'ಪ್ರದರ್ಶನ, ಲಭ್ಯತೆ ಮತ್ತು ಪ್ರತಿ ತಂಡದ ಅಗತ್ಯತೆಗಳ' ಆಧಾರದ ಮೇಲೆ ಎಂಟು ತಂಡಗಳು ಆಯ್ಕೆಗೆ ಬದ್ಧರಾಗಿದ್ದರೂ, ಐಪಿಎಲ್ ಸಂಬಂಧ ಹೊಂದಿರುವ ನಾಲ್ಕು ಫ್ರಾಂಚೈಸಿಗಳು ಪಾಕಿಸ್ತಾನದ ಆಟಗಾರರನ್ನು ಖರೀದಿಸುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದರ ಬೆನ್ನಲ್ಲೇ ಇದೀಗ ಹರಾಜು ಪ್ರಕ್ರಿಯೆಯಲ್ಲಿ ಪಾಕ್ ಆಟಗಾರನನ್ನು ಖರೀದಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತ: ಟೆಹ್ರಾನ್ ಷರತ್ತುಗಳಿಗೆ ‘NO’ ಎಂದ ಅಮೆರಿಕಾ; ಸಂದಿಗ್ಧ ಸ್ಥಿತಿಯಲ್ಲಿ ಶಾಂತಿ ಮಾತುಕತೆ

ಟ್ರಂಪ್ ಕೈಗೆ ಗಾಯ, ಬಣ್ಣ ಬದಲಾವಣೆ: ಫೋಟೋ ವೈರಲ್, ಅಮೆರಿಕಾ ಅಧ್ಯಕ್ಷರ ಆರೋಗ್ಯ ಕುರಿತು ಊಹಾಪೋಹ ಶುರು..!

ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಕು: ಸರ್ಕಾರಿ ಶಾಲೆಗಳ ಬಲವರ್ಧನೆಗೆ 8 ಗ್ಯಾರಂಟಿಗಳ ಘೋಷಣೆ..!

ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ತೆರೆ ಎಳೆಯಿರಿ: ಹೈಕಮಾಂಡ್'ಗೆ ಸತೀಶ್ ಜಾರಕಿಹೊಳಿ ಆಗ್ರಹ

SSLC ಪರೀಕ್ಷೆಯಲ್ಲಿ “ಮಾಸ್ ಕಾಪಿ” ಆರೋಪ: ವಯಸ್ಸಾಗಿದೆ-ಏನೇನೋ ಬಡಬಡಿಸುತ್ತಾರೆ, ಕ್ಷಮಿಸಿಬಿಡೋಣ; ಹೆಚ್.ವಿಶ್ವನಾಥ್ ವಿರುದ್ಧ ಮಧು ಬಂಗಾರಪ್ಪ ಆಕ್ರೋಶ

SCROLL FOR NEXT