ಮಹಮದ್ ಕೈಫ್ 
ಕ್ರಿಕೆಟ್

'ರನ್-ಔಟ್ ಹೆಸರಿನಲ್ಲಿ ನಂಬಿಕೆ ದ್ರೋಹ': ಭಾರತದ ಮಾಜಿ ಕ್ರಿಕೆಟಿಗ Mohammad Kaif ಕಿಡಿ; ಹೇಳಿದ್ದು ಯಾರಿಗೆ?

ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಸಲ್ಮಾನ್ ಅಲಿ ಅಘಾ ಅತ್ಯಂತ ಅಪರೂಪದ ಮತ್ತು ಅಸಾಂಪ್ರದಾಯಿಕ ರೀತಿಯಲ್ಲಿ ಔಟ್ ಆಗಿದ್ದರು.

ಮುಂಬೈ: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಪಂದ್ಯದಲ್ಲಿ ಪಾಕ್ ಮಾಜಿ ನಾಯಕ ಸಲ್ಮಾನ್ ಅಲಿ ಅಘಾ ರನೌಟ್ ವಿವಾದ ಭಾರತದ ಮಾಜಿ ಕ್ರಿಕೆಟಿಗ ಮಹಮದ್ ಕೈಫ್ ಅವರನ್ನೂ ಕೆಣಕಿದ್ದು, 'ರನ್-ಔಟ್ ಹೆಸರಿನಲ್ಲಿ ನಂಬಿಕೆ ದ್ರೋಹ' ಎಂದು ಕಿಡಿಕಾರಿದ್ದಾರೆ.

ಹೌದು.. ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಸಲ್ಮಾನ್ ಅಲಿ ಅಘಾ ಅತ್ಯಂತ ಅಪರೂಪದ ಮತ್ತು ಅಸಾಂಪ್ರದಾಯಿಕ ರೀತಿಯಲ್ಲಿ ಔಟ್ ಆಗಿದ್ದರು.

ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಆಟದ ನಿಯಮಗಳು ಬೌಲಿಂಗ್ ತಂಡದ ಪರವಾಗಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರೂ, ಇಡೀ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ.

ಇದೇ ವಿಚಾರವಾಗಿ ಕಿಡಿಕಾರಿರುವ ಮಾಜಿ ಕ್ರಿಕೆಟಿಗ ಮಹಮದ್ ಕೈಫ್, 'ಬಾಂಗ್ಲಾದೇಶದ ನಾಯಕ ಮಾಡಿದ ಈ ರನ್​ ಔಟ್​ನ್ನು ಕ್ರಿಕೆಟ್​ನ ನಿಯಮಾವಳಿ ಒಪ್ಪಬಹುದು ಆದರೆ, ಆದರೆ ಒಬ್ಬ ಕ್ರಿಕೆಟಿಗ ಖಂಡಿತ ಒಪ್ಪಲಾರ, ವಿಕೆಟ್ ಪಡೆಯುವ ಯಾವುದೇ ಹತಾಶೆಗಾಗಿ ಕ್ರೀಡಾ ಮನೋಧರ್ಮವನ್ನು ಮರೆಯುವುದು ಸರಿಯಲ್ಲ ಎಂದು ಕೈಫ್​ ಬರೆದುಕೊಂಡಿದ್ದಾರೆ. ಈ ಘಟನೆ ವಿಶ್ವಕಪ್​ ಫೈನಲ್​ನಲ್ಲಿ ಸಂಭವಿಸಿದ್ದರೂ ನಾನು ಇದನ್ನು ಖಂಡಿತವಾಗಿ ಖಂಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆ ಬಗ್ಗೆ ಮಾತನಾಡುತ್ತಾ ಕೈಫ್​, ಬಾಂಗ್ಲಾದೇಶದ ಯಾವುದೋ ಒಬ್ಬ ಹೊಸ ಹುಡಗ ಮಾಡಿದ್ದಾನೆ ಎಂದರೆ, ಪಾಪ ಆಟಕ್ಕೆ ಹೊಸಬ, ಹುಮ್ಮಸ್ಸಿನಲ್ಲಿ ಮಾಡಿದ್ದಾನೆ ಎನ್ನಬಹುದಿತ್ತು, ಆದರೆ ತಂಡದ ನಾಯಕನೇ ಈ ರೀತಿ ಮಾಡಿದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದು ತಂಡದ ಮನೋಬಲವನ್ನು ವಿಚಲಿತಗೊಳಿಸುವ ಸಾಧ್ಯತೆಯಿರುವ ಅಂಶವಾಗಿದ್ದು, ನ್ಯಾಯಯುತ ಆಟವಿಲ್ಲದ ಕ್ರೀಡೆ ಕ್ರೀಡೆಯಲ್ಲ ಎಂದು ಮೊಹಮ್ಮದ್​ ಕೈಫ್​ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೌರಿಂಗ್ ಆಸ್ಪತ್ರೆ ದುರಂತ: ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಣೆ

IPL 2026: ರಿಕಲ್ಟನ್ ಶತಕ ವ್ಯರ್ಥ; ಮುಂಬೈ ನೀಡಿದ ಟಾರ್ಗೆಟ್ ಧೂಳಿಪಟ, ದಾಖಲೆಯ 249 ರನ್ ಬಾರಿಸಿದ ಗೆದ್ದ SRH!

ಬಾಂಗ್ಲಾದೇಶ ಸರ್ಕಾರ ದೊಡ್ಡ ತಪ್ಪು ಮಾಡಿದೆ... ಟಿ20 ವಿಶ್ವಕಪ್ ಬಗ್ಗೆ ಶಕೀಬ್ ಅಲ್ ಹಸನ್ 'ಸ್ಫೋಟಕ ಹೇಳಿಕೆ'!

IPL 2026: 'ಬ್ಯಾಟಲ್ಲಿ AI Chip ಇದೆ' ಎಂದ ಪಾಕಿಸ್ತಾನದ Nouman Niaz ಗೆ ಬಟ್ಟೆ ಸುತ್ತಿ ಹೊಡೆದ ವೈಭವ್ ಸೂರ್ಯವಂಶಿ

Exit polls: ದೀದಿಗೆ ಶಾಕ್; BJP ತೆಕ್ಕೆಗೆ ಬಂಗಾಳ; ಅಸ್ಸಾಂನಲ್ಲೂ ಕಮಲ ಮ್ಯಾಜಿಕ್!

SCROLL FOR NEXT