ಸಲ್ಮಾನ್ ಅಲಿ ಅಘಾ ರನೌಟ್ 
ಕ್ರಿಕೆಟ್

ವಿಚಿತ್ರ ರನೌಟ್: ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ರಾವಲ್ಪಿಂಡಿ ಟ್ರಾಫಿಕ್ ಪೊಲೀಸರಿಂದಲೇ ಟ್ರೋಲ್‌ಗೆ ಗುರಿ!

ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನದ ಇನಿಂಗ್ಸ್‌ನ 39ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಅವರ ವಿಚಿತ್ರ ರನೌಟ್ ಇನ್ನೂ ಸುದ್ದಿಯಾಗುತ್ತಲೇ ಇದೆ. ಢಾಕಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರನೌಟ್ ಆದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಇದೀಗ ಪಾಕಿಸ್ತಾನದ ರಾವಲ್ಪಿಂಡಿ ಸಂಚಾರ ಪೊಲೀಸರು ಕೂಡ ನಾಯಕ ಸಲ್ಮಾನ್ ಅಲಿ ಅಘಾ ಅವರನ್ನು ಟ್ರೋಲ್ ಮಾಡುವ ಮೂಲಕ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನದ ಇನಿಂಗ್ಸ್‌ನ 39ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಬಾಂಗ್ಲಾದೇಶದ ಬೌಲರ್ ಮೆಹದಿ ಹಸನ್ ಎಸೆದ ನಾಲ್ಕನೇ ಚೆಂಡನ್ನು ಮೊಹಮ್ಮದ್ ರಿಜ್ವಾನ್ ಹೊಡೆದರು. ಅದು ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಸಲ್ಮಾನ್ ಅಲಿ ಅಘಾ ಕಡೆಗೆ ಬಂತು. ರನ್​ಗಾಗಿ ಕ್ರೀಸ್‌ನಿಂದ ಹೊರಬಂದ ಅಘಾ, ರನ್ ಇಲ್ಲದಿರುವುದನ್ನು ಗಮನಿಸಿ ಅಲ್ಲಿಯೇ ನಿಂತರು. ತಮ್ಮ ಕಾಲಿನತ್ತ ಬಂದ ಚೆಂಡನ್ನು ಎತ್ತಿ ಬೌಲರ್​ ಮೆಹದಿ ಹಸನ್​ಗೆ ನೀಡಲು ಬಗ್ಗಿದರು.

ಅಷ್ಟರಲ್ಲಿ ತಾವೇ ಚೆಂಡನ್ನು ಎತ್ತಿಕೊಂಡ ಮೆಹದಿ ಹಸನ್ ನೇರವಾಗಿ ಸ್ಟಂಪ್​ಗೆ ಎಸೆದರು. ಕೂಡಲೇ ಮೆಹದಿ ಹಸನ್​ ಔಟ್​ಗಾಗಿ ಅಂಪೈರ್ ಬಳಿ ಮನವಿ ಮಾಡಲಾರಂಬಿಸಿದರು. ಇತ್ತ ಫೀಲ್ಡ್ ಅಂಪೈರ್ ಮೂರನೇ ಅಂಪೈರ್​ ಬಳಿ ಮರುಪರಿಶೀಲನೆಗೆ ಮನವಿ ಮಾಡಿದರು. ಬಳಿಕ ಸಲ್ಮಾನ್ ಅಘಾ ಔಟ್ ಎಂದು ತೀರ್ಪು ನೀಡಲಾಯಿತು.

ಆ ಸಮಯದಲ್ಲಿ 64 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದ ಪಾಕಿಸ್ತಾನ ನಾಯಕ ಕೋಪಗೊಂಡು, ನಿರಾಶೆಯಿಂದ ಮೈದಾನವನ್ನು ತೊರೆದರು.

ಈ ದೃಶ್ಯಗಳು ಆನ್‌ಲೈನ್‌ನಲ್ಲಿ ಹರಡುತ್ತಿದ್ದಂತೆ, ರಾವಲ್ಪಿಂಡಿ ಸಂಚಾರ ಪೊಲೀಸರು X ನಲ್ಲಿ ಪೋಸ್ಟ್‌ನೊಂದಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ರಸ್ತೆಯಲ್ಲಿರಲಿ ಅಥವಾ ಮೈದಾನದಲ್ಲಿರಲಿ, ಎಚ್ಚರವಾಗಿರುವುದು ಮುಖ್ಯ. ನಿಮ್ಮನ್ನು ಮತ್ತು ಇತರರನ್ನು ಸುರಕ್ಷಿತವಾಗಿರಿಸಲು ನಿಮ್ಮ ಮೇಲೆ ನಂಬಿಕೆ ಇಡಿ, ಜಾಗರೂಕರಾಗಿರಿ ಮತ್ತು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಿ ಎಂದು ಪೊಲೀಸರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಸಲಕರಣೆಗಳ ದುರುಪಯೋಗಕ್ಕೆ ಸಂಬಂಧಿಸಿದ ಆರ್ಟಿಕಲ್ 2.2 ರ ಅಡಿಯಲ್ಲಿ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಸಲ್ಮಾನ್‌ ಅಲಿ ಅಘಾ ಅವರಿಗೆ ಐಸಿಸಿ ಅಧಿಕೃತವಾಗಿ ವಾಗ್ದಂಡನೆ ವಿಧಿಸಿತು. ಅವರು ನಡೆದುಕೊಂಡು ಹೋಗುವಾಗ ಹೆಲ್ಮೆಟ್ ಮತ್ತು ಕೈಗವಸುಗಳನ್ನು ಎಸೆದ ನಂತರ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ಪಡೆದರು.

ಸಲ್ಮಾನ್ ಅಲಿ ಅಘಾ ಔಟಾದ ನಂತರ ಆತುರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡ ಪಾಕಿಸ್ತಾನ ಅಂತಿಮವಾಗಿ DLS ಮೂಲಕ ಬಾಂಗ್ಲಾದೇಶವನ್ನು 128 ರನ್‌ಗಳಿಂದ ಸೋಲಿಸಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯ ಸಂಘರ್ಷ ಕೊನೆಗೂ ಅಂತ್ಯ: Pak ಮಧ್ಯಸ್ಥಿಕೆಯಲ್ಲಿ US-Iran ನಡುವೆ ಶಾಂತಿ ಒಪ್ಪಂದ; ನೌಕಾ ದಿಗ್ಬಂಧನ ತೆರವು, ತಕ್ಷಣದಿಂದಲೇ Hormuz ಜಲಸಂಧಿ ಓಪನ್‌..!

ಇದು ಅಂತಿಮ ಒಪ್ಪಂದವಲ್ಲ, ದುರ್ವರ್ತನೆ ತೋರಿದರೆ ಯುದ್ಧ ಪುನರಾರಂಭ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್- ಜೆಡಿಎಸ್ ಪೈಪೋಟಿ -ಅಡ್ಡ ಮತದಾನದ ಭೀತಿ! 7ನೇ ಸ್ಥಾನ ಗೆಲ್ಲೋರು ಯಾರು?

ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ Power game: ವೈಯಕ್ತಿಕ ಪ್ರತಿನಿಧಿಯಾಗಿ ಜೋಬಿನ್ ಜೋಸೆಫ್ ನೇಮಕ, ಹಿಂದಿನ ರಾಜಕೀಯ ಲೆಕ್ಕಾಚಾರವೇನು..?

Video: 'ಯಾರಾದ್ರೂ ಭಾರತದ ಮೇಲೆ ದಾಳಿ ಮಾಡಿದ್ರೆ..': ಸುದ್ದಿಗಾರನ ಪ್ರಶ್ನೆಗೆ ಅಚ್ಚರಿ ಉತ್ತರ ನೀಡಿದ Donald Trump

SCROLL FOR NEXT