ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ದೂರು 
ಕ್ರಿಕೆಟ್

Cricket: ಬಾಂಗ್ಲಾದೇಶ ವಿರುದ್ಧ ಸೋತ ಬಳಿಕ ದೂರು ದಾಖಲಿಸಿದ ಪಾಕಿಸ್ತಾನ ತಂಡ!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 8 ಹಂತದಿಂದ ಕಿಕ್ ಔಟ್ ಆಗಿದ್ದ ಪಾಕಿಸ್ತಾನ ಇದೀಗ ಬಾಂಗ್ಲಾದೇಶದ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಲ್ಲೂ ಹೀನಾಯ ಸೋಲುಕಂಡು ತೀವ್ರ ಮುಖಭಂಗ ಅನುಭವಿಸಿದೆ.

ಢಾಕಾ: ಅದ್ಯಾಕೋ ಟಿ20 ವಿಶ್ವಕಪ್ ಬಳಿಕವೂ ಪಾಕಿಸ್ತಾನ ತಂಡದ ಗೊಂದಲಗಳು ನಿವಾರಣೆಯಾದಂತಿಲ್ಲ, ಆಗ ಭಾರತದ ವಿರುದ್ಧ ಕಿಡಿಕಾರುತ್ತಿದ್ದ ಪಾಕ್ ಇದೀಗ ದ್ವಿಪಕ್ಷೀಯ ಸರಣಿ ಆಡುತ್ತಿರುವ ತನ್ನ ಆಪ್ತ ಸ್ನೇಹಿತ ಬಾಂಗ್ಲಾದೇಶದ ವಿರುದ್ಧವೇ ದೂರು ದಾಖಲಿಸಿದೆ.

ಹೌದು.. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 8 ಹಂತದಿಂದ ಕಿಕ್ ಔಟ್ ಆಗಿದ್ದ ಪಾಕಿಸ್ತಾನ ಇದೀಗ ಬಾಂಗ್ಲಾದೇಶದ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಲ್ಲೂ ಹೀನಾಯ ಸೋಲುಕಂಡು ತೀವ್ರ ಮುಖಭಂಗ ಅನುಭವಿಸಿದೆ.

ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ತಂಡಕ್ಕೆ ಅಲ್ಲಿಯೂ ತೀವ್ರ ಮುಜುಗರವಾಗಿದ್ದು, 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದ ಹೀನಾಯ ಸೋಲುಕಂಡಿದೆ.

ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿತ್ತ ಪಾಕಿಸ್ತಾನ 2ನೇ ಪಂದ್ಯದಲ್ಲಿ ಜಯಭೇರಿ ಭಾರಿಸಿ ಸರಣಿ ಸಮಬಲ ಮಾಡಿಕೊಂಡಿತ್ತು. ಆದರೆ ನಿನ್ನೆ ನಡೆದ ಮೂರನೇ ಪಂದ್ಯದಲ್ಲಿ ಕೆಲ ಗೊಂದಲಮಯ ತೀರ್ಪುಗಳು ಮತ್ತು ಆಟಗಾರರು ಮಾಡಿದ ಎಡವಟ್ಟಿನಿಂದಾಗಿ ಮೂರನೇ ಪಂದ್ಯವನ್ನೂ ಸೋತ ಪಾಕಿಸ್ತಾನ ಸರಣಿ ಕೈ ಚೆಲ್ಲಿತು.

ದೂರು ದಾಖಲು

ಇನ್ನು ಈ ಹೀನಾಯ ಸೋಲಿನ ಬೆನ್ನಲ್ಲೇ ಪಾಕ್ ತಂಡವು ಮ್ಯಾಚ್ ರೆಫರಿ ನೀಯಮೂರ್ ರಶೀದ್ ಅವರಿಗೆ ಅಧಿಕೃತ ದೂರು ನೀಡಿದ್ದಾರೆ. ಈ ದೂರಿನಲ್ಲಿ ಬಾಂಗ್ಲಾದೇಶ್ ತಂಡವು ರಿವ್ಯೂ ತೆಗೆದುಕೊಳ್ಳಲು ಈ ಮಿತಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಆರೋಪಿಸಲಾಗಿದೆ.

ಆಗಿದ್ದೇನು?

ಮಾರ್ಚ್ 15, 2026 ರಂದು ಢಾಕಾದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಪಂದ್ಯದ ಕೊನೆಯ ಓವರ್‌ನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು 2 ಎಸೆತಗಳಲ್ಲಿ 12 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲರ್ ರಿಶಾದ್ ಹೊಸೈನ್ ಎಸೆದ 5ನೇ ಎಸೆತವನ್ನು ಅಂಪೈರ್ ಕುಮಾರ್ ಧರ್ಮಸೇನ ‘ವೈಡ್’ ಎಂದು ಘೋಷಿಸಿದ್ದರು.

ಇತ್ತ ಅಂಪೈರ್ ವೈಡ್ ಎಂದು ಘೋಷಿಸಿದರೂ ಬಾಂಗ್ಲಾದೇಶ ತಂಡವು ಎಲ್‌ಬಿಡಬ್ಲ್ಯೂ (LBW) ಗಾಗಿ ರಿವ್ಯೂ (DRS) ತೆಗೆದುಕೊಂಡಿತು. ಈ ವೇಳೆ ಚೆಂಡು ಪ್ಯಾಡ್​ಗೆ ತಗುಲಿರುವುದು ಕಂಡು ಬಂದಿದೆ. ಇದಾಗ್ಯೂ ಶಾಹೀನ್ ಶಾ ಅಫ್ರಿದಿ ಎಲ್​ಬಿಡಬ್ಲ್ಯೂ ಆಗಿರಲಿಲ್ಲ. ಹೀಗಾಗಿ ವೈಡ್ ಅನ್ನು ಹಿಂಪಡೆದು ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು.

ರಿವ್ಯೂಗಾಗಿ ಹೆಚ್ಚಿನ ಸಮಯ ತೆಗೆದುಕೊಂಡ ಬಾಂಗ್ಲಾದೇಶ

ಇನ್ನು ಈ ರಿವ್ಯೂ ತೆಗೆದುಕೊಳ್ಳಲು ಬಾಂಗ್ಲಾದೇಶ್ ತಂಡದ ನಾಯಕ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ ಎಂದು ಪಾಕಿಸ್ತಾನ್ ಆರೋಪಿಸಿದೆ. ಐಸಿಸಿ ನಿಯಮದ ಪ್ರಕಾರ ರಿವ್ಯೂ ಕೇಳಲು ಕೇವಲ 15 ಸೆಕೆಂಡುಗಳ ಕಾಲಾವಕಾಶವಿರುತ್ತದೆ.

ಆದರೆ ಬಾಂಗ್ಲಾದೇಶ ಈ ಮಿತಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಕ್ರೀಡಾಂಗಣದ ಬಿಗ್​ ಸ್ಕ್ರೀನ್ ಮೇಲೆ ರಿಪ್ಲೇ ನೋಡಿದ ನಂತರವೇ ಬಾಂಗ್ಲಾದೇಶ್ ತಂಡದ ನಾಯಕ ಮೆಹದಿ ಹಸನ್ ಮಿರಾಝ್ ರಿವ್ಯೂ ನಿರ್ಧಾರ ಮಾಡಿದ್ದಾರೆ. ಇದು ನಿಯಮಬಾಹಿರ ಎಂದು ಪಾಕಿಸ್ತಾನ ಆರೋಪಿಸಿದೆ.

ಅಲ್ಲದೆ ಈ ಬಗ್ಗೆ ಮ್ಯಾಚ್ ರೆಫರಿ ನೀಯಮೂರ್ ರಶೀದ್ ಅವರಿಗೆ ಅಧಿಕೃತ ದೂರು ನೀಡಿ ಬಾಂಗ್ಲಾದೇಶ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ್ ತಂಡ ಆಗ್ರಹಿಸಿದೆ.

ಪಾಕಿಸ್ತಾನಕ್ಕೆ ಹೀನಾಯ ಸೋಲು

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಾಂಜಿನ್ ಹಸನ್ ತಮೀಮ್ (107) ಅವರ ಶತಕ, ತೌಹಿದ್ ಹೃದೋಯ್ (ಅಜೇಯ 48) ಅವರ ಬ್ಯಾಟಿಂಗ್ ನೆರವಿನಿಂದ ನಿಗಧಿತ 50 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 290 ರನ್ ಪೇರಸಿ ಪಾಕಿಸ್ತಾನಕ್ಕೆ ಗೆಲ್ಲಲು 291 ರನ್ ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ 50 ಓವರ್ ನಲ್ಲಿ 279 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 11 ರನ್ ಅಂತರದಲ್ಲಿ ಸೋಲು ಕಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: ಭಾರತಕ್ಕೆ ಬಿಗ್‌ ರಿಲೀಫ್‌; ಹಾರ್ಮುಜ್ ಜಲಸಂಧಿ ಮೂಲಕ ಗುಜರಾತ್ ತಲುಪಿದ LPG ಹೊತ್ತ ಶಿವಾಲಿಕ್ ನೌಕೆ!

ಹಾರ್ಮುಜ್ ಜಲಸಂಧಿಗೆ ಇರಾನ್ ನಿರ್ಬಂಧ; ಜಗತ್ತಿಗೆ ಸುಗಮ ತೈಲ ಸಾಗಣೆಗೆ ಇರುವ ಪರ್ಯಾಯ ಆಯ್ಕೆಗಳ್ಯಾವುವು? ಇಲ್ಲಿದೆ ಮಾಹಿತಿ

ಇರಾನ್‌ನಿಂದ 550ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ; ಗಲ್ಫ್‌ನಿಂದ 20,000 ಜನ ಭಾರತಕ್ಕೆ ವಾಪಸ್!

ಇತರ ಸಮುದಾಯದಿಂದ ಅಲ್ಲ, ಮುಸ್ಲಿಮರಿಂದಲೇ ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿ ಅತಿಕ್ರಮಣ: ಸಚಿವ ಜಮೀರ್ ಅಹ್ಮದ್ ಖಾನ್

ಇದೆಂತಾ ವಿಕೃತಿ..? : ವೇದಿಕೆ ಮೇಲಿಂದ ಮಹಿಳಾ ಡ್ಯಾನ್ಸರ್ ಳನ್ನು ಹೊತ್ತು ಪ್ರೇಕ್ಷಕರತ್ತ ಎಸೆದ ಗಾಯಕ! Video

SCROLL FOR NEXT