ದೇವಿಶಾ ಶೆಟ್ಟಿ-ಸೂರ್ಯಕುಮಾರ್ ಯಾದವ್ 
ಕ್ರಿಕೆಟ್

ಮೊದಲ ಮಗುವಿನ ನಿರೀಕ್ಷೆಯಲ್ಲಿ T20 ನಾಯಕ ಸೂರ್ಯಕುಮಾರ್ ಯಾದವ್ ದಂಪತಿ: ಬೇಬಿ ಶವರ್ ವಿಡಿಯೊ ವೈರಲ್

ಈ ಜೋಡಿ 2016ರ ಜುಲೈ 7ರಂದು ವಿವಾಹವಾಗಿದ್ದರು. 2010ರಲ್ಲಿ ಮುಂಬೈನ ಆರ್ ಎ ಪೋದರ್ ಕಲೆ ಮತ್ತು ಅರ್ಥಶಾಸ್ತ್ರ ಕಾಲೇಜಿನಲ್ಲಿ ಭೇಟಿಯಾಗಿದ್ದರು.

ದುಬೈ: ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ತಮ್ಮ ಮೊದಲ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ ಈ ದಂಪತಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸೀಮಂತ ಕಾರ್ಯಕ್ರಮವನ್ನು ಆಚರಿಸಿದರು. ಈ ವಿಶೇಷ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶುಭಾಶಯಗಳ ಮಳೆಗರೆದು ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಜೋಡಿ 2016ರ ಜುಲೈ 7ರಂದು ವಿವಾಹವಾಗಿದ್ದರು. 2010ರಲ್ಲಿ ಮುಂಬೈನ ಆರ್ ಎ ಪೋದರ್ ಕಲೆ ಮತ್ತು ಅರ್ಥಶಾಸ್ತ್ರ ಕಾಲೇಜಿನಲ್ಲಿ ಭೇಟಿಯಾಗಿದ್ದರು. ವೃತ್ತಿಪರವಾಗಿ ತರಬೇತಿ ಪಡೆದ ಭರತನಾಟ್ಯ ನೃತ್ಯಗಾರ್ತಿ ಹಾಗೂ ನೃತ್ಯ ತರಬೇತುದಾರಿಯಾಗಿರುವ ದೇವಿಶಾ ಶೆಟ್ಟಿ ಹಾಗೂ ಸೂರ್ಯಕುಮಾರ್ ಯಾದವ್ ಆರು ವರ್ಷಗಳ ಕಾಲ ಪ್ರೀತಿಸಿ ನಂತರ ವಿವಾಹವಾದರು.

ಕಳೆದ ವಾರವಷ್ಟೇ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಭಾರತ ಈ ಟೂರ್ನಿಯನ್ನು ಮೂರು ಬಾರಿ ಗೆದ್ದ ಮೊದಲ ತಂಡವಾಗಿದೆ. ಬ್ಯಾಟಿಂಗ್‌ನಲ್ಲಿ ಅವರಿಗೆ ಅತ್ಯುತ್ತಮ ಪ್ರದರ್ಶನ ಸಿಗದಿದ್ದರೂ, ಅವರ ನಾಯಕತ್ವ ಭಾರತಕ್ಕೆ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿತು.

ಟೂರ್ನಿಯ ವೇಳೆ ಸೂರ್ಯಕುಮಾರ್ ಯಾದವ್ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 242 ರನ್ ಗಳಿಸಿದ್ದು, ಅವರ ಸರಾಸರಿ 30.25 ಆಗಿತ್ತು. ಅಮೆರಿಕ ತಂಡ ವಿರುದ್ಧ ನಡೆದ ಭಾರತದ ಮೊದಲ ಪಂದ್ಯದಲ್ಲಿ ಅವರು ಪ್ರಮುಖ ಅರ್ಧಶತಕ ಗಳಿಸಿದ್ದು ಗಮನಾರ್ಹ ಪ್ರದರ್ಶನವಾಗಿತ್ತು. ನಂತರದ ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತಕ್ಕೆ ಪರಿವರ್ತಿಸಲು ಸಾಧ್ಯವಾಗಲಿಲ್ಲ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್‌ಗೆ ಔಟಾದರು. ಅವರನ್ನು ಜೇಮ್ಸ್ ನೀಶಂ ಔಟ್ ಮಾಡಿದರು.

35 ವರ್ಷದ ಸೂರ್ಯಕುಮಾರ್ ಯಾದವ್ ತಮ್ಮ ಗಮನವನ್ನು ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ನತ್ತ ಹರಿಸಲಿದ್ದಾರೆ. ಮುಂಬೈ ಇಂಡಿಯನ್ಸ್ ಪರವಾಗಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲಿದ್ದಾರೆ. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವು ಮಾರ್ಚ್ 29ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವಾಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೌದು ನಾವು ಒಂದ್ ರೀತಿ ಕಡಲ್ಗಳ್ಳರೇ...; ಹೆಮ್ಮೆ ಇದೆ: ಜಲಸಂಧಿಗೆ ದಿಗ್ಬಂಧನದ ವಿಷಯವಾಗಿ ಟ್ರಂಪ್ ಹೊಸ ವರಸೆ!

2029ರ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಏಕಾಂಗಿ ಸ್ಪರ್ಧೆ?: 'ಮಹಾ' ಸಚಿವನ ಹೇಳಿಕೆ ಕೋಲಾಹಲ!

ಬೆಂಗಳೂರು: ಅನಾರೋಗ್ಯದಿಂದ ದಕ್ಷ ಅಧಿಕಾರಿ 39 ವರ್ಷದ SP ಲಾವಣ್ಯ ಹಠಾತ್‌ ನಿಧನ!

ಟಿಎಂಸಿ ಕಾರ್ಯಕರ್ತರಿಂದ ಜೀವ ಬೆದರಿಕೆ ಇದೆ; ಮತ ಎಣಿಕೆ ವೇಳೆ ನಮಗೆ ಭದ್ರತೆ ಕೊಡಿ: ಬಂಗಾಳದಲ್ಲಿ ನೂರಾರು ಗ್ರಾಮಸ್ಥರಿಂದ ಪ್ರತಿಭಟನೆ

ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು; ಅಧಿಕೃತ ಆದೇಶ!

SCROLL FOR NEXT