ವೈಭವ್ ಸೂರ್ಯವಂಶಿ - ರವೀಂದ್ರ ಜಡೇಜಾ 
ಕ್ರಿಕೆಟ್

IPL 2026: ವರದಿಗಾರರ ಪ್ರಶ್ನೆಗೆ ವೈಭವ್ ಸೂರ್ಯವಂಶಿ ಪ್ರತಿಕ್ರಿಯೆ ಕೇಳಿ ಸ್ಟನ್ ಆದ ರವೀಂದ್ರ ಜಡೇಜಾ!

2025ರ ಆವೃತ್ತಿಗೆ ಮುನ್ನ ನಡೆದ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ (RR) ₹1.1 ಕೋಟಿಗಳ ಬೃಹತ್ ಮೊತ್ತ ನೀಡಿ ಅವರನ್ನು ಖರೀದಿಸಿತು.

2026ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ವೈಭವ್ ಸೂರ್ಯವಂಶಿ ಸಾಕಷ್ಟು ಗಮನ ಸೆಳೆಯಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿದ ಅವರು, ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಈ ಮೈಲಿಗಲ್ಲು ತಲುಪಿದ ಅತ್ಯಂತ ವೇಗದ ಭಾರತೀಯ ಬ್ಯಾಟ್ಸ್‌ಮನ್ ಮತ್ತು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ 2026ರ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ವೈಭವ್ ಪ್ರಮುಖ ಪಾತ್ರ ವಹಿಸಿದರು. ಇಂಗ್ಲೆಂಡ್ ವಿರುದ್ಧದ ಫೈನಲ್‌ನಲ್ಲಿ 80 ಎಸೆತಗಳಲ್ಲಿ 175 ರನ್ ಗಳಿಸಿದ ವೈಭವ್ ಸೂರ್ಯವಂಶಿ ಅವರ ನೆರವಿನಿಂದ ಭಾರತ 100 ರನ್‌ಗಳಿಂದ ಪಂದ್ಯವನ್ನು ಗೆದ್ದಿತು.

14 ವರ್ಷದ ಬಾಲಕ ತನ್ನ ಎರಡನೇ ಐಪಿಎಲ್ ಸೀಸನ್ ಆಡಲು ಸಜ್ಜಾಗುತ್ತಿದ್ದಂತೆ ನಿರೀಕ್ಷೆಗಳು ಹೆಚ್ಚಿವೆ. ಅದೇ ರೀತಿ, 19ನೇ ಆವೃತ್ತಿಯ ಐಪಿಎಲ್‌ನ ಗುರಿಯ ಬಗ್ಗೆ ವರದಿಗಾರರೊಬ್ಬರು ಪ್ರಶ್ನಿಸಿದಾಗ, ವೈಭವ್ ತಮಾಷೆಯ ಉತ್ತರ ನೀಡಿದ್ದಾರೆ.

'ಐಪಿಎಲ್ 2026 ಕ್ಕಾಗಿ ನಿಮ್ಮ ಯೋಜನೆಗಳೇನು? ಆರೆಂಜ್ ಕ್ಯಾಪ್ ಪಡೆಯಲು ನೀವು ನೀವು ನಿಮ್ಮಿಂದ ಎಷ್ಟು ರನ್‌ಗಳನ್ನು ನಿರೀಕ್ಷಿಸುತ್ತಿದ್ದೀರಿ?' ಎಂದು ವರದಿಗಾರರೊಬ್ಬರು ಮಾಧ್ಯಮ ಸಂವಾದದ ಸಂದರ್ಭದಲ್ಲಿ ಕೇಳಿದರು.

ಇದಕ್ಕೆ ಉತ್ತರಿಸಿದ ವೈಭವ್, 'ನೀವು ನನಗೆ ಅಂತಹ ಪ್ರಶ್ನೆಗಳನ್ನು ಕೇಳಿದರೆ, ನಾನು ಎರಡರಿಂದ ಮೂರು ಸಾವಿರ ರನ್‌ಗಳು ಎಂದು ಹೇಳುತ್ತೇನೆ' ಎಂದರು.

ಆರ್‌ಆರ್ ಸ್ಟಾರ್ ನೀಡಿದ ಉತ್ತರ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತು. ಈ ವೇಳೆ ಅವರ ಪಕ್ಕದಲ್ಲೇ ಕುಳಿದಿದ್ದ ಭಾರತದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಕೂಡ ನಕ್ಕರು.

'ನಾನು ನಿರ್ದಿಷ್ಟ ಸಂಖ್ಯೆಯ ರನ್‌ಗಳನ್ನು ಗುರಿಯಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. ನಾನು ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇನೆ ಮತ್ತು ತಂಡಕ್ಕಾಗಿ ಟ್ರೋಫಿಯನ್ನು ಗೆಲ್ಲಲು ಎದುರು ನೋಡುತ್ತಿದ್ದೇನೆ. ನಾವು ವೈಯಕ್ತಿಕ ಗುರಿಗಳ ಮೇಲೆ ಗಮನ ಕೇಂದ್ರೀಕರಿಸುತ್ತಿಲ್ಲ. ಈ ಆವೃತ್ತಿಯಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದ್ದೇವೆ' ಎಂದು ವೈಭವ್ ಹೇಳಿದರು.

ಬಾಲಕನಾಗಿದ್ದರೂ, ವೈಭವ್ ತನ್ನ ನಂಬಲಾಗದ ಬ್ಯಾಟಿಂಗ್ ಸಾಮರ್ಥ್ಯದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ, ಸೂರ್ಯವಂಶಿ ಅತ್ಯಂತ ಸುಲಭವಾಗಿ ಬೃಹತ್ ಸಿಕ್ಸರ್‌ಗಳನ್ನು ಸಿಡಿಸುತ್ತಾರೆ. T20 ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಅಪರೂಪದ ವ್ಯಕ್ತಿಯನ್ನಾಗಿ ಸಾಭೀತುಪಡಿಸಿಕೊಂಡಿದ್ದಾರೆ.

2025ರ ಆವೃತ್ತಿಗೆ ಮುನ್ನ ನಡೆದ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ (RR) ₹1.1 ಕೋಟಿಗಳ ಬೃಹತ್ ಮೊತ್ತ ನೀಡಿ ಅವರನ್ನು ಖರೀದಿಸಿತು. ಅವರು ಏಳು ಪಂದ್ಯಗಳಲ್ಲಿ 36.00 ಸರಾಸರಿ ಮತ್ತು 206.56 ಸ್ಟ್ರೈಕ್ ರೇಟ್‌ನೊಂದಿಗೆ 252 ರನ್‌ ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!