ಪಾಕಿಸ್ತಾನ vs ಆಫ್ಘಾನಿಸ್ತಾನ ಪಂದ್ಯ 
ಕ್ರಿಕೆಟ್

ಭಾರತ vs ಪಾಕಿಸ್ತಾನ ಅಲ್ಲ, ಇನ್ಮುಂದೆ Afghanistan vs Pakistan: ನೆರೆ ರಾಷ್ಟ್ರದ Rivalry ಬಿಚ್ಚಿಟ್ಟ ಆಫ್ಘನ್ ಆಟಗಾರ!

ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪೈಪೋಟಿಗೆ ದಶಕಗಳ ಇತಿಹಾಸವೇ ಇದೆ. ಯಾವುದೇ ಟೂರ್ನಿಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದರೂ ಅದು ಹೈವೋಲ್ಟೇಜ್ ಪಂದ್ಯವಾಗುತ್ತದೆ.

ಕಾಬೂಲ್: ಆಫ್ಘನ್ ನಾಗರೀಕರಲ್ಲಿ ಪಾಕಿಸ್ತಾನ ವಿರುದ್ಧ ಎಂತಹ ಭಾವನೆಗಳಿವೆ ಎಂಬುದನ್ನು ಆಫ್ಘನ್ ಕ್ರಿಕೆಟಿಗ ಬಿಚ್ಚಿಟ್ಟಿದ್ದು, ಇನ್ನು ಮುಂದೆ ಭಾರತ ಅಲ್ಲ.. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳಾಗಲಿವೆ ಎಂದು ಹೇಳಿದ್ದಾರೆ.

ಹೌದು.. ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪೈಪೋಟಿಗೆ ದಶಕಗಳ ಇತಿಹಾಸವೇ ಇದೆ. ಯಾವುದೇ ಟೂರ್ನಿಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದರೂ ಅದು ಹೈವೋಲ್ಟೇಜ್ ಪಂದ್ಯವಾಗುತ್ತದೆ.

ಅಭಿಮಾನಿಗಳು ಕೂಡ ಮೈದಾನದಲ್ಲಿ ಕಿಕ್ಕಿರಿದು ತುಂಬಿ ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ಸೂಚಿಸುತ್ತಾರೆ. ಕೇವಲ ಮೈದಾನ ಮಾತ್ರವಲ್ಲದೇ ಮೈದಾನದ ಹೊರಗೆ ಟಿವಿ ಪರದೆಗಳ ಮುಂದೆಯೇ ಅಭಿಮಾನಿಗಳು ನೆರೆದು ಪಂದ್ಯ ವೀಕ್ಷಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ಆ ಮಟ್ಟಿಗಿನ ನಿರೀಕ್ಷೆ ಉಳಿಸಿಕೊಂಡಿಲ್ಲ. ಭಾರತ ತಂಡದ ಪಾರಮ್ಯದ ಎದುರು ಪಾಕಿಸ್ತಾನ ಮಂಕಾಗುತ್ತಿದೆ.

ಈ ನಡುವೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಮೈದಾನದಲ್ಲಿನ ಪೈಪೋಟಿ ವರ್ಷಗಳಲ್ಲಿ ಹೆಚ್ಚು ತೀವ್ರವಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಕೆಲವು ಸಂದರ್ಭಗಳಲ್ಲಿ ಆಟಗಾರರ ನಡುವೆ ಉದ್ವಿಗ್ನತೆ ಕೂಡ ಭುಗಿಲೆದ್ದಿದೆ. ಅದಕ್ಕೆ ಇಂಬು ನೀಡುವಂತೆ ಪಾಕಿಸ್ತಾನ ಆಫ್ಘಾನಿಸ್ತಾನದಲ್ಲಿ ನಡೆಸಿದ ವಾಯುದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಆಫ್ಘಾನಿಸ್ತಾನ ನಾಗರೀಕರಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಆಟಗಾರರ ನಡುವೆಯೂ ಉದ್ವಿಗ್ನತೆ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಮೈದಾನದಲ್ಲಿನ ಪೈಪೋಟಿ ವರ್ಷಗಳಲ್ಲಿ ಹೆಚ್ಚು ತೀವ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಸಂದರ್ಭಗಳಲ್ಲಿ ಆಟಗಾರರ ನಡುವೆ ಉಂಟಾದ ಉದ್ವಿಗ್ನತೆ ಉಭಯ ತಂಡಗಳ ನಡುವಿನ ಸ್ನೇಹವನ್ನು ದೂರ ಮಾಡಿದೆ. ಎರಡೂ ತಂಡಗಳ ನಡುವಿನ ಕಳೆದ ಕೆಲವು ಪಂದ್ಯಗಳು ಹಲವಾರು ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿವೆ.

ಏಷ್ಯಾ ಕಪ್ ಟೂರ್ನಿ ಸೋಲು ಅರಗಿಸಿಕೊಳ್ಳಲಾಗುತ್ತಿಲ್ಲ

ಇನ್ನು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ ಉಭಯ ತಂಡಗಳ ನಡುವಿನ ಪೈಪೋಟಿ ಕುರಿತು ಶುಭಂಕರ್ ಮಿಶ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, ಪಾಕಿಸ್ತಾನ ತಂಡದ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

ಅಂತೆಯೇ ಏಷ್ಯಾ ಕಪ್ 2022 ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿನ ಬಗ್ಗೆ ಮಾತನಾಡಿರುವ ಅವರು, 'ಪಾಕಿಸ್ತಾನವು ಅಫ್ಘಾನಿಸ್ತಾನವನ್ನು ಒಂದು ವಿಕೆಟ್‌ನಿಂದ ಸೋಲಿಸಿ ಅದ್ಭುತ ಕಮ್ ಬ್ಯಾಕ್ ಮಾಡಿತ್ತು. ನಂತರ ಫೈನಲ್‌ಗೂ ಪ್ರವೇಶಿಸಿತು. ಪಂದ್ಯದ ಬಹುಪಾಲು ಸಮಯವನ್ನು ಅಫ್ಘಾನಿಸ್ತಾನ ನಿಯಂತ್ರಣದಲ್ಲಿಟ್ಟುಕೊಂಡಿತ್ತು. ಆದರೆ ನಸೀಮ್ ಶಾ ಪಂದ್ಯದ ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಸತತ ಸಿಕ್ಸರ್‌ ಸಿಡಿಸಿ ನಮ್ಮ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಮಾಡಿದರು ಎಂದು ಹೇಳಿದರು.

ಆಫ್ಘನ್ ತಂಡ ಸೋತಾಗ ಅಭಿಮಾನಿಗಳ ಆತ್ಮಹತ್ಯೆ

ಈ ಸೋಲಿನ ನಂತರದ ಭಾವನೆಗಳನ್ನು ವಿವರಿಸಿದ ಗುರ್ಬಾಜ್, "ನನಗೆ, ಅತ್ಯಂತ ಹೃದಯವಿದ್ರಾವಕ ಪಂದ್ಯವೆಂದರೆ 2022 ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲು. ತವರು ಮನೆಯ ಜನರು ತುಂಬಾ ನೋವು ಅನುಭವಿಸಿದ್ದರು. ಅನೇಕ ಜನರು ಅಳುತ್ತಿದ್ದರು. ಇಲ್ಲಿ ಜನರು ಆತ್ಮಹತ್ಯೆ ಮಾಡಿಕೊಂಡರು. ನಮ್ಮಲ್ಲಿ ಅನೇಕ ಭಾವನಾತ್ಮಕ ಜನರಿದ್ದಾರೆ. ನಾವು ಇಲ್ಲಿ ಜನರಿಗಾಗಿ ಆಡುವಾಗ ನಮಗೆ ನೋವುಂಟಾಗುತ್ತದೆ" ಎಂದು ಹೇಳಿದ್ದಾರೆ.

"ಆ ಪಂದ್ಯದ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡುತ್ತಿರುವಾಗ, ನನಗೆ ಇನ್ನೂ ದುಃಖದ ನೆನಪುಗಳು ನೆನಪಾಗುತ್ತವೆ. ನಾನು ಶಾರ್ಜಾ ಕ್ರೀಡಾಂಗಣಕ್ಕೆ ಕಾಲಿಟ್ಟಾಗಲೆಲ್ಲಾ, ಆ ಹೃದಯವಿದ್ರಾವಕ ಸೋಲು ನೆನಪಾಗುತ್ತದೆ. ನಾವು ಗೆಲ್ಲಬೇಕಾಗಿದ್ದ ಆ ಪಂದ್ಯವನ್ನು ನಾವು ಹೇಗೆ ಸೋತೆವು ಎಂದು ನಾನು ಇನ್ನೂ ಯೋಚಿಸುತ್ತೇನೆ. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ, ಆದರೆ ನಾವು ಚೆನ್ನಾಗಿ ಬೌಲಿಂಗ್ ಮಾಡಿದೆವು. ಆದರೆ ಕೊನೆಯಲ್ಲಿ, ನಾವು ಸೋತೆವು" ಎಂದು ಅವರು ಹೇಳಿದರು.

ಪಾಕ್ ಜೊತೆ ವೈಯುಕ್ತಿಕ ದ್ವೇಷವಿಲ್ಲ, ಆದರೆ..

ಪಾಕಿಸ್ತಾನ ಕ್ರಿಕೆಟಿಗರ ವಿರುದ್ಧ ತನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಗುರ್ಬಾಜ್ ಸ್ಪಷ್ಟಪಡಿಸಿದ್ದು, ಆದರೆ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾದಾಗಲೆಲ್ಲಾ ಅಭಿಮಾನಿಗಳು ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಬೇಕೆಂದು ಬಯಸುತ್ತಾರೆ ಎಂದು ಹೇಳಿದರು.

ಇನ್ಮುಂದೆ Afghanistan vs Pakistan

"ನಾವು ಕ್ರಿಕೆಟಿಗರು. ನಾವು ಅಫ್ಘಾನಿಸ್ತಾನದಲ್ಲಿ ಜನರಿಗಾಗಿ ಆಡುತ್ತೇವೆ. ನಮ್ಮ ಸಂತೋಷ ನಮ್ಮ ಜನರ ಸಂತೋಷದಲ್ಲಿದೆ. ನೀವು ಇಲ್ಲಿನ ಜನರನ್ನು ಅತ್ಯಂತ ಸ್ಮರಣೀಯ ಪಂದ್ಯದ ಬಗ್ಗೆ ಕೇಳಿದರೆ, ಅವರು ಪಾಕಿಸ್ತಾನ ವಿರುದ್ಧ 2023 ರ ಏಕದಿನ ವಿಶ್ವಕಪ್ ಗೆಲುವಿನ ಬಗ್ಗೆ ಹೇಳುತ್ತಾರೆ. ಒಬ್ಬ ಕ್ರಿಕೆಟಿಗನಾಗಿ, ನನಗೆ ಬೇರೆ ಯಾವುದೇ ಕ್ರಿಕೆಟಿಗರ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ಇಲ್ಲಿನ ನಮ್ಮ ಅಭಿಮಾನಿಗಳು ನಾವು ಯಾವಾಗಲೂ ಪಾಕಿಸ್ತಾನವನ್ನು ಸೋಲಿಸಬೇಕೆಂದು ಬಯಸುತ್ತಾರೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಐದು ದಿನ ಇರಾನ್ Power Plant ಗಳ ಮೇಲೆ ದಾಳಿ ಮಾಡಲ್ಲ..': Trump ತಾತ್ಕಾಲಿಕ ಕದನ ವಿರಾಮ ಘೋಷಣೆ! ಮಾತುಕತೆ ನಿರಾಕರಿಸಿದ ಇರಾನ್

West Asia Crisis: ಮುಳುಗಿದ D-Street; 13.5 ಲಕ್ಷ ಕೋಟಿ ನಿರ್ನಾಮ!

ಇರಾನ್ ಮೇಲಿನ ದಾಳಿ ಐದು ದಿನ ತಾತ್ಕಾಲಿಕ ಸ್ಥಗಿತ: ಶಾಂತಿ ಸ್ಥಾಪನೆಗಾಗಿ ಪಾಕಿಸ್ತಾನ, ಟರ್ಕಿ, ಈಜಿಪ್ಟ್ ಮಧ್ಯಸ್ಥಿಕೆ!

Gold Rate: ಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ; 40 ವರ್ಷಗಳಲ್ಲಿ ಇದೇ ಮೊದಲು!

ಇರಾನ್ ಯುದ್ಧ: ಅಮೆರಿಕ ಅಧ್ಯಕ್ಷ Donald Trump ಕದನ ವಿರಾಮ ಘೋಷಣೆ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಭಾರಿ ಇಳಿಕೆ..!

SCROLL FOR NEXT