ಆರ್ ಸಿಬಿ ಸಾಂದರ್ಭಿಕ ಚಿತ್ರ 
ಕ್ರಿಕೆಟ್

IPL ಇತಿಹಾಸದಲ್ಲೇ ಅತಿದೊಡ್ಡ ಮಾರಾಟ: 16,000 ಕೋಟಿ ರೂ ಗೆ RCB ಸೇಲ್; ಹೊಸ ಮಾಲೀಕರು ಯಾರು ಗೊತ್ತಾ?

ಭಾರತೀಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್‌ನ ಬೋಲ್ಟ್ ವೆಂಚರ್ಸ್ ಮತ್ತು ಯುಎಸ್ ಮೂಲದ ಬ್ಲಾಕ್‌ಸ್ಟೋನ್ ಒಳಗೊಂಡಿರುವ ಕನ್ಸೋರ್ಟಿಯಂ ಹೊಸ ಮಾಲೀಕರಾಗಿದ್ದಾರೆ.

ನವದೆಹಲಿ: ಐಪಿಎಲ್ ಹಾಲಿ ಚಾಂಪಿಯನ್ ಆರ್ ಸಿಬಿ ಕೊನೆಗೂ ಮಾರಾಟವಾಗಿದೆ. ಕುಮಾರ್ ಮಂಗಲಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಕನ್ಸೋರ್ಟಿಯಂ (ಒಕ್ಕೂಟ) ಮಂಗಳವಾರ ಅದರ ಹೊಸ ಮಾಲೀಕರಾಗಿದ್ದಾರೆ.

ಭಾರತೀಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಡೇವಿಡ್ ಬ್ಲಿಟ್ಜರ್‌ನ ಬೋಲ್ಟ್ ವೆಂಚರ್ಸ್ ಮತ್ತು ಯುಎಸ್ ಮೂಲದ ಬ್ಲಾಕ್‌ಸ್ಟೋನ್ ಒಳಗೊಂಡಿರುವ ಕನ್ಸೋರ್ಟಿಯಂ ಸುಮಾರು 1.78 ಶತಕೋಟಿ ಡಾಲರ್ ( 16,000 ಕೋಟಿಗಿಂತ ಹೆಚ್ಚು) ಪಾವತಿಸಲಿದೆ ಎಂದು ತಿಳಿದುಬಂದಿದೆ.

ಆರ್ ಸಿಬಿಯ ಶೇ. 100 ರಷ್ಟು ಮಾಲೀಕತ್ವದ ಪಾಲು ಪಡೆಯಲು ಈ ಕಂಪನಿಗಳು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ನೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ. ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಸತ್ಯನ್ ಗಜ್ವಾನಿ ಫ್ರಾಂಚೈಸಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ಐಪಿಎಲ್ ಜಾಗತಿಕ ಕ್ರೀಡಾ ಪವರ್ ಹೌಸ್ ಆಗಿ ಬೆಳೆದಿದ್ದು, ಭಾರತೀಯ ಕ್ರಿಕೆಟ್‌ನ ಸ್ವರೂಪವನ್ನು ಬದಲಾಯಿಸಿದೆ. ಆಧುನಿಕ ಕ್ರೀಡೆಯಲ್ಲಿ ಅತ್ಯಂತ ಬಲವಾದ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಆರ್‌ಸಿಬಿ, ಆದಿತ್ಯ ಬಿರ್ಲಾ ಗ್ರೂಪ್‌ಗೆ ತನ್ನ ಪರಂಪರೆ ವಿಸ್ತರಿಸಲು ಒಂದು ವಿಶಿಷ್ಟ ವೇದಿಕೆಯನ್ನು ನೀಡುತ್ತದೆ. ಈ ಆಸ್ತಿ ಮತ್ತು ಅಸಾಮಾನ್ಯ ಪರಂಪರೆಯನ್ನು ಮತ್ತಷ್ಟು ನಿರ್ಮಿಸಲು ಬದ್ಧವಾಗಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಅಧ್ಯಕ್ಷ ಸತ್ಯನ್ ಗಜ್ವಾನಿ, "ಆರ್‌ಸಿಬಿ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಮತ್ತು ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿದೆ. ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ನಮ್ಮ ಪಾಲುದಾರರೊಂದಿಗೆ ನಾವು ಆರ್‌ಸಿಬಿಯನ್ನು ಜಾಗತಿಕ ಕ್ರೀಡಾ ಸಂಸ್ಥೆಯಾಗಿ ಕಟ್ಟುತ್ತೇವೆ. ಈ ಚಾಂಪಿಯನ್‌ಶಿಪ್ ತಂಡ ಕಟ್ಟಿದ ಆಟಗಾರರು, ತರಬೇತುದಾರರು ಹಾಗೂ ಅಭಿಮಾನಿಗಳಿಗೆ ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನಾ ರಾಜಸ್ಥಾನ್ ರಾಯಲ್ಸ್ ತಂಡವನ್ನು ಯುಎಸ್ ಮೂಲದ ಕಲ್ ಸೋಮಾನಿ ನೇತೃತ್ವದ ಕನ್ಸೋರ್ಟಿಯಂ USD 1.63 ಶತಕೋಟಿ (ಅಂದಾಜು ರೂ 15,290 ಕೋಟಿ) ಗೆ ಸ್ವಾಧೀನಪಡಿಸಿಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!