ಪಿಎಸ್ಎಲ್ ಮತ್ತು ಐಪಿಎಲ್ ಕಮೆಂಟೇಟರ್ಸ್ ಗಳು 
ಕ್ರಿಕೆಟ್

ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗ: PSL ನಿಂದ ಕಮೆಂಟೇಟರ್ಸ್ ಕೂಡ IPL ಗೆ ಶಿಫ್ಟ್!

ಅಚ್ಚರಿ ಎಂದರೆ ಇದೀಗ ಆಟಗಾರರು ಮಾತ್ರವಲ್ಲ ಅಂಪೈರ್ ಗಳೂ ಕೂಡ ಪಿಎಸ್ಎಲ್ ಬಿಟ್ಟು ಐಪಿಎಲ್ ನತ್ತ ಮುಖ ಮಾಡಿದ್ದಾರೆ.

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಗೆ ಮತ್ತೊಂದು ಆಘಾತ ಎದುರಾಗಿದ್ದು, ಆಟಗಾರರ ಬೆನ್ನಲ್ಲೇ ಇದೀಗ ಪಿಎಸ್ಎಲ್ ನ ಕಮೆಂಟರಿ ಪ್ಯಾನಲ್ ಗೆ ಆಯ್ಕೆಯಾಗಿದ್ದ ಕೆಮೆಂಟೇಟರ್ ಕೂಡ ಐಪಿಎಲ್ ಗೆ ಶಿಫ್ಟ್ ಆಗಿದ್ದಾರೆ.

ಹೌದು.. ಪಾಕಿಸ್ತಾನ ಸೂಪರ್ ಲೀಗ್ ಆರಂಭವಾದಾಗಿನಿಂದ ಆ ಟೂರ್ನಿಯಿಂದ ಹೊರಬರುತ್ತಿರುವ ಆಟಗಾರರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇನ್ನೂ ಅಚ್ಚರಿ ಎಂದರೆ ಇದೀಗ ಆಟಗಾರರು ಮಾತ್ರವಲ್ಲ ಅಂಪೈರ್ ಗಳೂ ಕೂಡ ಪಿಎಸ್ಎಲ್ ಬಿಟ್ಟು ಐಪಿಎಲ್ ನತ್ತ ಮುಖ ಮಾಡಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಸ್ಟಾರ್ ಆಟಗಾರ ನಿಕ್ ನೈಟ್ ಇದೀಗ ಪಿಎಸ್ಎಲ್ ತೊರೆದು ಐಪಿಎಲ್ ಗಾಗಿ ಭಾರತಕ್ಕೆ ಬರುತ್ತಿದ್ದಾರೆ. ಇಲ್ಲಿ ಐಪಿಎಲ್ ನಲ್ಲಿ ಕಮೆಂಟರಿ ಮಾಡಲಿದ್ದಾರೆ. ಈ ಕುರಿತು ಸ್ಟಾರ್ ಸ್ಪೋರ್ಟ್ಸ್ ಮಾಹಿತಿ ನೀಡಿದ್ದು, ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ ಕಾಮೆಂಟರಿ ಪ್ಯಾನೆಲ್‌ನಲ್ಲಿಯೂ ಹೆಸರಿಸಿ ಟ್ವೀಟ್ ಮಾಡಲಾಗಿದೆ.

ಇಕ್ಕಟ್ಟಿನಲ್ಲಿ ಮೊಹ್ಸಿನ್ ನಖ್ವಿ

ಇನ್ನು ಈಗಾಗಲೇ ಪ್ರೇಕ್ಷಕರೇ ಇಲ್ಲದೇ ಪಿಎಸ್ಎಲ್ ಟೂರ್ನಿಯನ್ನು ಆಡಿಸಲಾಗುತ್ತಿದ್ದು, ಇದರಿಂದ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಗೆ ಸಾಕಷ್ಟು ನಷ್ಟ ಎದುರಾಗಿದೆ.

ಇದರ ನಡುವೆ ಆಟಗಾರು ಮತ್ತು ಸಿಬ್ಬಂದಿಗಳು ಐಪಿಎಲ್ ಗೆ ಶಿಫ್ಟ್ ಆಗುತ್ತಿರುವುದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್‌ಗೆ ಮತ್ತೊಂದು ಜಲಾಘಾತ: ಇರಾನ್ ಪರ ಯುದ್ಧಕ್ಕೆ ಯೆಮೆನ್ ಎಂಟ್ರಿ; ಇಸ್ರೇಲ್ ಮೇಲೆ ಮೊದಲ ಕ್ಷಿಪಣಿ ಹಾರಿಸಿದ ಹೌತಿಗಳು!

ದಾವಣಗೆರೆ: ಧಮ್ ತೋರಿಸಲು ಹೋಗಿದ್ದ ಪ್ರದೀಪ್ ಈಶ್ವರ್​ಗೆ ಚಪ್ಪಲಿ-ಪೊರಕೆ ತೋರಿಸಿ, ಹುಚ್ಚ...ಹುಚ್ಚ... ಅಂತ ಕೂಗಿದ BJP ಕಾರ್ಯಕರ್ತರು!

TMC ಸರ್ಕಾರದ ವಿರುದ್ಧ ಅಮಿತ್ ಶಾ 'ಚಾರ್ಜ್ ಶೀಟ್' ಬಿಡುಗಡೆ: ಬಂಗಾಳ ಚುನಾವಣೆ ದೇಶದ ಭದ್ರತೆಗಾಗಿ ಒಂದು ಯುದ್ಧ!

PSL 2026: ಪ್ರೇಕ್ಷಕರೇ ಇಲ್ಲ ಅಂದ್ರೆ ಕೂಗಾಡೋ ಶಬ್ದ ಎಲ್ಲಿಂದ ಬರುತ್ತೆ..: PCB ವಿರುದ್ಧ ಪಾಕ್ ಅಭಿಮಾನಿಗಳೇ ಕಿಡಿ, Video

ಇರಾನ್ ಡ್ರೋನ್ ದಾಳಿ: UAE ಕೈಗಾರಿಕಾ ಪ್ರದೇಶದಲ್ಲಿ ಭಾರೀ ಬೆಂಕಿ: ಐವರು ಭಾರತೀಯರಿಗೆ ಗಾಯ

SCROLL FOR NEXT