ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿಲ್ ಸಾಲ್ಟ್, ಇಶಾನ್ ಕಿಶನ್ ಅವರನ್ನು ಔಟ್ ಮಾಡಲು ಕ್ಯಾಚ್ ಹಿಡಿದರು. 
ಕ್ರಿಕೆಟ್

'ನಾಚಿಕೆಗೇಡು': ದಿನೇಶ್ ಕಾರ್ತಿಕ್ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಕಮೆಂಟ್; ಕ್ಯಾಚ್ ಮಾಸ್ಟರ್ ಮೈಂಡ್‌ಗೆ ಏನೂ ಬೇಡವೇ? ಎಂದ ಫಿಲ್ ಸಾಲ್ಟ್!

ಇಶಾನ್ ಕೇವಲ 38 ಎಸೆತಗಳಲ್ಲಿ 80 ರನ್ ಗಳಿಸಿ ಫುಲ್ ಟಾಸ್‌ ಅನ್ನು ಬೌಂಡರಿಯತ್ತ ಅಟ್ಟಿ ಶತಕಕ್ಕೆ ಸಿದ್ಧರಾಗಿರುವಂತೆ ತೋರುತ್ತಿತ್ತು. ಆಗ, ಆ ಶಾಟ್ ಬೌಂಡರಿ ಲೈನ್ ಕಡೆಗೆ ಸಾಗುತ್ತಿದ್ದಂತೆ ಫಿಲ್ ಸಾಲ್ಟ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅವರನ್ನು ಔಟ್ ಮಾಡಿದರು.

ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟರ್ ಫಿಲ್ ಸಾಲ್ಟ್ ಅವರು ಹಿಡಿದ ಅಸಾಮಾನ್ಯ ಕ್ಯಾಚ್‌ಗಳು ನಿರ್ಣಾಯಕ ಪಾತ್ರವಹಿಸಿದವು. ಆರ್‌ಸಿಬಿ ಉದ್ಘಾಟನಾ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದು, ಪ್ರಶಸ್ತಿ ಡಿಫೆಂಡ್ ಮಾಡಿಕೊಳ್ಳುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ.

ಪಂದ್ಯದ ನಂತರ ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದು, ತಂಡವನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಸ್ಟಾರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ ಮತ್ತು ಇದು 'ನಾಚಿಕೆಗೇಡು' ಎಂದು ಕರೆದಿದ್ದಾರೆ.

ಎಸ್‌ಆರ್‌ಎಚ್ ತಂಡದ ನಾಯಕ ಇಶಾನ್ ಕೇವಲ 38 ಎಸೆತಗಳಲ್ಲಿ 80 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಲು ತಂಡಕ್ಕೆ ನೆರವಾದರು. ಫುಲ್ ಟಾಸ್‌ ಅನ್ನು ಬೌಂಡರಿಯತ್ತ ಅಟ್ಟಿ ಶತಕಕ್ಕೆ ಸಿದ್ಧರಾಗಿರುವಂತೆ ತೋರುತ್ತಿತ್ತು. ಆಗ, ಆ ಶಾಟ್ ಬೌಂಡರಿ ಲೈನ್ ಕಡೆಗೆ ಸಾಗುತ್ತಿದ್ದಂತೆ ಫಿಲ್ ಸಾಲ್ಟ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅವರನ್ನು ಪೆವಿಲಿಯನ್ ಕಡೆ ತೆರಳುವಂತೆ ಮಾಡಿದರು. ಪಾಯಿಂಟ್‌ನಿಂದ ಬಲಕ್ಕೆ ಓಡಿಬಂದ ಸಾಲ್ಟ್, ಒಂದು ಕೈಯಿಂದಲೇ ಕ್ಯಾಚ್ ಹಿಡಿಯುವ ಮೂಲಕ ಇಶಾನ್ ಅವರನ್ನು ಔಟ್ ಮಾಡಿದರು. ಇದು ಈ ಆವೃತ್ತಿಯ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದಾಗಬಹುದಾದ ಕ್ಯಾಚ್ ಆಗಿತ್ತು.

ಮೆಂಟರ್ ದಿನೇಶ್ ಕಾರ್ತಿಕ್ ತಮ್ಮ ಪೋಸ್ಟ್‌ನಲ್ಲಿ ಇಶಾನ್ ಕಿಶನ್ ಅವರನ್ನು ಔಟ್ ಮಾಡುವ ಅದ್ಭುತ ಕ್ಯಾಚ್‌ನ ಚಿತ್ರವನ್ನು ಅಪ್‌ಲೋಡ್ ಮಾಡದ ಬಗ್ಗೆ ಫಿಲ್ ಸಾಲ್ಟ್ ಅಸಮಾಧಾನ ಹೊರಹಾಕಿದ್ದಾರೆ.

'ಪರಿಪೂರ್ಣ ಆರಂಭ' ಎಂದು ಶೀರ್ಷಿಕೆ ನೀಡಿರುವ ಪೋಸ್ಟ್‌ನಲ್ಲಿ ದಿನೇಶ್ ಕಾರ್ತಿಕ್, ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡುತ್ತಿರುವ ಚಿತ್ರ, ಜೇಕಬ್ ಡಫಿ ಮತ್ತು ರಜತ್ ಪಾಟೀದಾರ್ ಅವರನ್ನು ಒಳಗೊಂಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಫಿಲ್ ಸಾಲ್ಟ್ ಅವರ ಚಿತ್ರವಿಲ್ಲ.

ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಫಿಲ್ ಸಾಲ್ಟ್, 'ಕ್ಯಾಚ್ ಮಾಸ್ಟರ್ ಮೈಂಡ್‌ಗೆ ಏನೂ ಬೇಡವೇ? ನಾಚಿಕೆಗೇಡು' ಎಂದು ಬರೆದಿದ್ದಾರೆ.

ಇದೇ ಪೊಸ್ಟ್‌ಗೆ ಟಿಮ್ ಡೇವಿಡ್ ಕೂಡ ಕಮೆಂಟ್ ಮಾಡಿದ್ದು, 'ಮಾಸ್ಟರ್ ಮೈಂಡ್' ಎಂದು ಬರೆದಿದ್ದಾರೆ.

ಆರ್‌ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ದಿನೇಶ್ ಕಾರ್ತಿಕ್ ಅವರನ್ನು 'ಮಾಸ್ಟರ್ ಮೈಂಡ್' ಎಂದು ಕರೆಯಲಾಗುತ್ತದೆ.

202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭದಲ್ಲಿಯೇ ಸಾಲ್ಟ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಬಂದ ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ ಅವರೊಂದಿಗೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕರ್ನಾಟಕದ ಬ್ಯಾಟ್ಸ್‌ಮನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ

Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಮಂಕಿಮ್ಯಾನ್'; ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?

‘Dimagi Naxal’ ವಿವಾದ: ‘ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ’: ಕಿರಣ್‌ ರಿಜಿಜು ವಾಗ್ದಾಳಿ

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!