ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 19ನೇ ಸೀಸನ್ನ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(PBKS) ತಂಡ ಮಂಗಳವಾರ ಗುಜರಾತ್ ಟೈಟಾನ್ಸ್(GT) ವಿರುದ್ಧ 8 ವಿಕೆಟ್ ಗಳ ರೋಚ ಗೆಲುವು ಸಾಧಿಸಿದೆ.
ಇಂದು ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್ಗಳ ಸಾಧಾರಣ ಮೊತ್ತ ಕಲೆಹಾಕಿತು.
ಆರಂಭಿಕ ಆಘಾತ ಎದುರಿಸಿದ ಗುಜರಾತ್ ತಂಡ, ಸಾಯಿ ಸುದರ್ಶನ್ ಅವರು ಕೇವಲ 13 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ಶುಭಮನ್ ಗಿಲ್ 39 ಹಾಗೂ ಜೋಸ್ ಬಟ್ಲರ್ 38 ರನ್ ಗಳಿಸಿದರು. ನಂತರ ಬಂದ ಗ್ಲೆನ್ ಫಿಲಿಪ್ಸ್ 25 ರನ್ ಸಿಡಿಸಿ ಔಟ್ ಆದರು.
ಗೆಲುವಿಗೆ 163 ರನ್ ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್, ಕೂಪರ್ ಕೊನೊಲಿ ಅವರ ಭರ್ಜರಿ ಅರ್ಧ ಶತಕ(72)ದ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ 19.1 ಓವರ್ ಗಳಲ್ಲಿ 165 ರನ್ ಗಳಿಸುವ ಮೂಲಕ ಮೂರು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿತು.