ಡೆಲ್ಲಿ ಕ್ಯಾಪಿಟಲ್ಸ್  
ಕ್ರಿಕೆಟ್

IPL 2026: ರಾಹುಲ್ ಭರ್ಜರಿ ಬ್ಯಾಟಿಂಗ್; ರಾಜಸ್ಥಾನ ವಿರುದ್ಧ ಡೆಲ್ಲಿ 7 ವಿಕೆಟ್ ಗೆಲುವು!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಪೇರಿಸಿತು.

ಜೈಪುರ: ರಾಜಸ್ಥಾನದ ಪಿಂಕ್ ಸಿಟಿ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಐಪಿಎಲ್ ನ ರೋಚಕ 43 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗಳ ಅಂತರಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ತವರಿನಲ್ಲಿಯೇ ಮಣಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಪೇರಿಸಿತು. ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ 6, ವೈಭವ್ ಸೂರ್ಯವಂಶಿ ಕೇವಲ 4 ರನ್ ಗಳಿಸಿ ಔಟಾಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ಬಳಿಕ ಜೊತೆಯಾದ ಧ್ರುವ್ ಜುರೆಲ್ 42 ಹಾಗೂ ನಾಯಕ ರಿಯಾನ್ ಪರಾಗ್ 90 ರನ್ ಗಳ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಗಳನ್ನು ಬೆಂಡೆತ್ತಿದರು. ಈ ಜೋಡಿ ಬೇರ್ಪಟ್ಟ ನಂತರ ರವೀಂದ್ರ ಜಡೇಜಾ 20, ಫೆರೆರಿಯಾ 47, ಹಾಗೂ ಶುಭಂ ದುಬೆ 6 ರನ್ ಗಳಿಸುವುದರೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಬೃಹತ್ 225 ರನ್ ಕಲೆಹಾಕಿತು.

ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಜೆಮಿಸನ್, ಅಕ್ಷರ್ ಪಟೇಲ್, ಟಿ. ನಟರಾಜನ್ 1 ತಲಾ ಒಂದೊಂದು ವಿಕೆಟ್ ಪಡೆದರು. 226 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪಥುಂ ನಿಸ್ಸಾಂಕಾ 62, ಕೆಎಲ್ ರಾಹುಲ್ ಆಕರ್ಷಕ 75 ರನ್ ಬಾರಿಸುವುದರೊಂದಿಗೆ ಉತ್ತಮ ಅಡಿಪಾಯ ಹಾಕಿದರು.

ಬಳಿಕ ಬಂದ ನಿತಿಶ್ ರಾಣಾ 33, ತ್ರಿಸ್ಟಾನ್ ಸ್ಟಬ್ಬಾಸ್ 18, ಅಶುತೋಷ್ ಶರ್ಮಾ 25 ರನ್ ಗಳಿಸುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್ ಗಳಲ್ಲಿ ಇನ್ನೂ ಐದು ಎಸೆತ ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿ ಗೆಲುವಿನ ನಗೆ ಬೀರಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ- ಇರಾನ್ ನಡುವಿನ ಒಪ್ಪಂದ ಅಂತಿಮವಲ್ಲ: ಡೊನಾಲ್ಡ್ ಟ್ರಂಪ್ ಹೊಸ ಬಾಂಬ್!

ಧಾರವಾಡ: ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ; ಫೋಟೋಗಳು ವೈರಲ್, ಕರ್ನಾಟಕ ವಿವಿ ಪ್ರೊಪೋಸರ್ ಅಮಾನತು!

"ಒಂದೂವರೆ ವರ್ಷಗಳಲ್ಲಿ ಲೇಔಟ್ ಮಾಡಲು ಸಾಧ್ಯವಿಲ್ಲ": ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧದ ರೈತರ ಪ್ರತಿಭಟನೆಗೆ ಆರ್ ಅಶೋಕ್ ಬೆಂಬಲ

ಅಪರೂಪದ ಅನುವಂಶಿಕ ಕಾಯಿಲೆ, ಪುಟ್ಟ ಅಭಿಮಾನಿ ಆಸೆ ನೆರವೇರಿಸಲು ಮನೆಗೇ ಧಾವಿಸಿದ ಪವನ್ ಕಲ್ಯಾಣ್; Video ವೈರಲ್!

ಪರಿಷತ್ ಚುನಾವಣೆ: ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕರು; ಡಿಕೆಶಿ ನೇತೃತ್ವದಲ್ಲಿ ಅಣಕು ಮತದಾನ!

SCROLL FOR NEXT