ಗುರುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ನಾಲ್ಕು ವಿಕೆಟ್ ಅಂತರದ ಜಯ ಸಾಧಿಸಿತು. ಗುಜರಾತ್ ಟೈಟಾನ್ಸ್ ತಂಡದ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್, ನಾಯಕ ಶುಭಮನ್ ಗಿಲ್ ಅವರು ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು ಎಂದರು. 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡವು ಗಿಲ್ ಅವರ 18 ಎಸೆತಗಳಲ್ಲಿ 43 ರನ್‌ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ 15.5 ಓವರ್‌ಗಳಲ್ಲಿಯೇ ಗೆಲುವಿನ ದಡ ಸೇರಿತು. ಜೋಸ್ ಬಟ್ಲರ್ ಕೂಡ 19 ಎಸೆತಗಳಲ್ಲಿ 39 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.
'ಅದು ನಿಜವಾಗಿಯೂ ಉತ್ತಮ ಬ್ಯಾಟಿಂಗ್ ಮೇಲ್ಮೈ ಆಗಿತ್ತು. ಬೌಲರ್‌ಗಳು ಅಲ್ಲಿ ಹೆಚ್ಚಿನ ಮನ್ನಣೆಗೆ ಅರ್ಹರು ಎಂದು ನಾನು ಭಾವಿಸುತ್ತೇನೆ. ಮತ್ತು ನಮ್ಮ ಗೆಲುವಿಗೆ ಆದ ದೊಡ್ಡ ವ್ಯತ್ಯಾಸವೆಂದರೆ, ಇಂದು ನಾವು ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದು' ಎಂದು ಬಟ್ಲರ್ ಪಂದ್ಯದ ನಂತರ ಹೇಳಿದರು.
'ಮೇಲ್ಮೈ ಬ್ಯಾಟಿಂಗ್‌ಗೆ ಅನುಕೂಲಕರವಾಗಿದ್ದರೂ, ಆರಂಭಿಕ ಹಂತದಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ನೆರವು ಸಿಕ್ಕಿತು. ಹೊಸ ಚೆಂಡಿನೊಂದಿಗೆ, ಸ್ವಲ್ಪ ಕಡಿಮೆಯಾಯಿತು. ಸಿರಾಜ್ ಮತ್ತು ರಬಾಡ ನಮಗೆ ಮತ್ತು ಸ್ಪಷ್ಟವಾಗಿ ಎದುರಾಳಿ ತಂಡದಲ್ಲಿಯೂ ವೇಗಿಗಳು ಉತ್ತಮ ಪ್ರದರ್ಶನ ನೀಡಿದರು' ಎಂದರು.
ಎದುರಾಳಿ ತಂಡದ ವೇಗಿಗಳ ಲಯಕ್ಕೆ ಭಂಗ ತರಲು ಜಿಟಿ ಯೋಜಿಸಿತ್ತು. ಈ ತಂತ್ರವನ್ನು ಗಿಲ್ ಪವರ್ ಪ್ಲೇನಲ್ಲಿ ಸಂಪೂರ್ಣವಾಗಿ ಕಾರ್ಯಗತಗೊಳಿಸಿದರು ಎಂಜು ಬಟ್ಲರ್ ಹೇಳಿದರು.
'ಎದುರಾಳಿ ಬೌಲರ್‌ಗಳು ಬಹಳ ಉತ್ತಮ ಬೌಲರ್‌ಗಳಾಗಿರುವುದರಿಂದ ಮತ್ತು ಅವರು ಸಾಮಾನ್ಯವಾಗಿ ಸ್ಥಿರವಾದ ಲೆಂತ್‌ನಲ್ಲಿ ಬೌಲಿಂಗ್ ಮಾಡುವುದರಿಂದ, ಶಾರ್ಟ್ ಅಥವಾ ಫುಲ್ ಟಾಸ್‌ಗಳನ್ನು ಬೌಲಿಂಗ್ ಮಾಡುವಂತೆ ಒತ್ತಾಯಿಸುವ ಕುರಿತು ಶುಭಮನ್ ಮಾತನಾಡಿದರು. ಆದ್ದರಿಂದ ಅವರಿಗೆ ಶ್ರೇಯಸ್ಸು ಸಲ್ಲುತ್ತದೆ. ನಿಮ್ಮ ನಾಯಕ ಹೇಳಿದ್ದನ್ನು ನಿಖರ, ತುಂಬಾ ಶಾಂತ ಮತ್ತು ಕ್ಲಿನಿಕಲ್ ಆಗಿ ಉನ್ನತ ಬೌಲರ್‌ಗಳ ವಿರುದ್ಧ ಮಾಡಿದಾಗ, ಅದು ಸಾಕಷ್ಟು ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಚೇಸ್ ಮಾಡಲು ನೆರವಾಗುತ್ತದೆ' ಎಂದು ಅವರು ಹೇಳಿದರು.
ಪಂದ್ಯದ ನಿರ್ಣಾಯಕ ಸಮಯದಲ್ಲಿ ಔಟ್ ಆದ ಬಗ್ಗೆ ಮಾತನಾಡುತ್ತಾ, ತಾನು ಅಪಾಯ ತೆಗೆದುಕೊಂಡೆ. ಆದರೆ, ಕ್ಲೀನ್ ಬೌಲ್ಡ್ ಆದ ಕಾರಣ ಅದು ಫಲ ನೀಡಲಿಲ್ಲ. ನನಗೆ ಅಲ್ಲಿ ಸ್ವಲ್ಪ ದುರಾಸೆಯಾಯಿತು. ಮಿಡ್-ವಿಕೆಟ್‌ನಲ್ಲಿ ನನಗೆ ದೊಡ್ಡ ಅಂತರವಿತ್ತು ಮತ್ತು ಅತ್ತ ಹೊಡೆಯಲು ಪ್ರಯತ್ನಿಸಿದೆ. ಆದರೆ, ಅದು ಭುವಿಯಿಂದ ಬಂದ ಉತ್ತಮ ಬೌಲಿಂಗ್ ಆಗಿತ್ತು' ಎಂದು ಅವರು ಹೇಳಿದರು.
ಪಂದ್ಯದ ಆರಂಭದಲ್ಲಿ, ಗುಜರಾತ್ ಟೈಟಾನ್ಸ್ ತಂಡದ ಬೌಲರ್‌ಗಳು ಆರ್‌ಸಿಬಿಯನ್ನು 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಸೀಮಿತಗೊಳಿಸುವಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅರ್ಷದ್ ಖಾನ್ ಮೂರು ವಿಕೆಟ್‌ಗಳನ್ನು ಪಡೆದರೆ, ರಶೀದ್ ಖಾನ್ ಮತ್ತು ಜೇಸನ್ ಹೋಲ್ಡರ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ (40) ಮತ್ತು ವಿರಾಟ್ ಕೊಹ್ಲಿ (28) ಪ್ರಮುಖ ಕೊಡುಗೆ ನೀಡಿದರು.
'ನಮಗೆ ಎರಡು ಅಂಕಗಳು ಬೃಹತ್ ಆಗಿದೆ. ನಮ್ಮ ಮುಂದಿರುವ ತಂಡಗಳನ್ನು ಹಿಡಿದಿಟ್ಟುಕೊಳ್ಳಬೇಕಾದ ಸನ್ನಿವೇಶದಲ್ಲಿದ್ದೇವೆ ಮತ್ತು ನಾವು ಅವರ ಜೊತೆಗೆ ಬಹಳಷ್ಟು ಆಡುತ್ತೇವೆ. ಆದ್ದರಿಂದ ಇದು ಪಂದ್ಯಾವಳಿಯಲ್ಲಿ ಒಂದು ದೊಡ್ಡ ಸಮಯ ಮತ್ತು ಇಂದು ನಿಜವಾಗಿಯೂ ಪ್ರಮುಖ ಗೆಲುವು' ಎಂದು ಅವರು ಹೇಳಿದರು.
ಈ ಗೆಲುವಿನೊಂದಿಗೆ, ಗುಜರಾತ್ ಟೈಟಾನ್ಸ್ ಐದು ಪಂದ್ಯಗಳನ್ನು ಗೆದ್ದಿದ್ದು, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಅವರು ಮುಂದಿನ ಬಾರಿ ಮೇ 3 ರಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದಾರೆ.