ಜೇಸನ್ ಹೋಲ್ಡರ್ ಪಡೆದ ವಿವಾದಾತ್ಮಕ ಕ್ಯಾಚ್ ದೃಶ್ಯ 
ಕ್ರಿಕೆಟ್

RCB ನಾಯಕ ರಜತ್ ಪಾಟೀದಾರ್‌ ಔಟ್: ವಿವಾದಾತ್ಮಕ ಕ್ಯಾಚ್‌ ಬಗ್ಗೆ GT ಆಲ್‌ರೌಂಡರ್ ಜೇಸನ್ ಹೋಲ್ಡರ್ ಹೇಳಿದ್ದೇನು?

ಹೋಲ್ಡರ್ ನಾಲ್ಕು ಓವರ್‌ಗಳ ಕೋಟಾದಲ್ಲಿ 2 ವಿಕೆಟ್‌ಗಳನ್ನು ಕಬಳಿಸಿ 29 ರನ್ ಗಳನ್ನು ಬಿಟ್ಟುಕೊಟ್ಟಿದ್ದರಿಂದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ಒಟ್ಟು ಮೂರು ಕ್ಯಾಚ್‌ಗಳನ್ನು ಸಹ ಪಡೆದರು.

ಗುರುವಾರ ನಡೆದ ಐಪಿಎಲ್ 2026ರ ಪಂದ್ಯದ ವೇಳೆ ಗುಜರಾತ್ ಟೈಟಾನ್ಸ್ (GT) ಆಟಗಾರ ಜೇಸನ್ ಹೋಲ್ಡರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟೀದಾರ್ ಅವರನ್ನು ಔಟ್ ಮಾಡಲು ಹಿಡಿದ ಕ್ಯಾಚ್ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಅರ್ಷದ್ ಖಾನ್ ಅವರ ಶಾರ್ಟ್ ಬಾಲ್ ಅನ್ನು ಪಾಟೀದಾರ್ ಹೊಡೆದಾಗ ಟಾಪ್-ಎಡ್ಜ್ಡ್ ಆಗಿ ಮೇಲೆ ಹೋಯಿತು. ಆಗ ಹೋಲ್ಡರ್ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಿಂದ ಬಲಕ್ಕೆ ಓಡಿ ಡೈವಿಂಗ್ ಮೂಲಕ ಅದ್ಭುತ ಕ್ಯಾಚ್ ಪಡೆದರು. ಕಗಿಸೊ ರಬಾಡ ಕೂಡ ಅದೇ ಬಾಲ್ ಹಿಂಬಾಳಿಸಿ ನಡೆದಿದ್ದರು. ಅಂತಿಮವಾಗಿ ಜೇಸನ್ ಕ್ಯಾಚ್ ಹಿಡಿದರು. ಕ್ಯಾಚ್ ತೆಗೆದುಕೊಂಡ ಬಳಿಕ ಜೇಸನ್ ನಿಯಂತ್ರಣ ಕಳೆದುಕೊಂಡಾಗ ಅವರ ಕೈಯಲ್ಲಿದ್ದ ಚೆಂಡು ನೆಲಕ್ಕೆ ತಾಗಿದಂತೆ ಕಂಡರೂ, ಮೂರನೇ ಅಂಪೈರ್ ಔಟ್ ಎಂದು ತೀರ್ಮಾನಿಸಿದರು.

ಪಂದ್ಯದ ನಂತರ, ಹೋಲ್ಡರ್ ಈ ಕ್ಯಾಚ್ ಬಗ್ಗೆ ವಿವರಗಳನ್ನು ನೀಡಿದರು. 'ನಾನು ಅವರನ್ನು (ರಬಾಡ) ನೋಡಿದೆ. ಅವರು ನನ್ನತ್ರ ಓಡಿಬಾರದಿರಲಿ ಎಂದು ಆಶಿಸುತ್ತಿದ್ದೆ. ನಾನು ಅವರ ಮೇಲೂ ಕಣ್ಣಿಟ್ಟಿದ್ದೆ. ನನ್ನ ದೊಡ್ಡ ಕೆಲಸವೆಂದರೆ ಅಲ್ಲಿಗೆ ಹೋಗುವುದು. ಅದು ಬಂದಂತೆ ನಾನು ಅದನ್ನು ಸ್ವಾಗತಿಸಿದೆ. ಆ ಅವಕಾಶವನ್ನು ಬಳಸಿಕೊಂಡಿದ್ದಕ್ಕೆ ಸಂತೋಷಪಡುತ್ತೇನೆ ಮತ್ತು ತಂಡದ ಗೆಲುವಿಗೆ ಸಹಾಯ ಮಾಡಲು ಸಂತೋಷಪಡುತ್ತೇನೆ' ಎಂದು ಅವರು ಹೇಳಿದರು.

ಹೋಲ್ಡರ್ ನಾಲ್ಕು ಓವರ್‌ಗಳ ಕೋಟಾದಲ್ಲಿ 2 ವಿಕೆಟ್‌ಗಳನ್ನು ಕಬಳಿಸಿ 29 ರನ್ ಗಳನ್ನು ಬಿಟ್ಟುಕೊಟ್ಟಿದ್ದರಿಂದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ಒಟ್ಟು ಮೂರು ಕ್ಯಾಚ್‌ಗಳನ್ನು ಸಹ ಪಡೆದರು.

'ಆರ್‌ಸಿಬಿ ವಿರುದ್ಧದ ಆ ಪಂದ್ಯದ ವೇಳೆ ನಮ್ಮೆಲ್ಲರ ಶಕ್ತಿ ಸಾಕಷ್ಟು ಹೆಚ್ಚಿತ್ತು ಮತ್ತು ಪವರ್‌ಪ್ಲೇನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಕ್ಕಾಗಿ ಕೆಜಿ (ಕಗಿಸೋ ರಬಾಡ) ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಶ್ರೇಯ ಸಲ್ಲುತ್ತದೆ. ಈ ಫ್ರಾಂಚೈಸಿ ಕಾರ್ಯನಿರ್ವಹಿಸುವ ರೀತಿ ತುಂಬಾ ಚೆನ್ನಾಗಿದೆ. ಇದರಿಂದಾಗಿ ಮುಕ್ತ ಮನಸ್ಸನ್ನು ಹೊಂದಿರುವುದು, ಆಟದಲ್ಲಿ ತೊಡಗಿಸಿಕೊಳ್ಳುವುದು ಮತ್ತು ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ' ಎಂದು ಹೋಲ್ಡರ್ ಹೇಳಿದರು.

ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು.

ಈ ಪಂದ್ಯದ ಫಲಿತಾಂಶದಿಂದಾಗಿ ಐಪಿಎಲ್ 2026ರ ಅಂಕ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆರ್‌ಸಿಬಿ ಇನ್ನೂ ಎರಡನೇ ಸ್ಥಾನದಲ್ಲಿದೆ ಮತ್ತು ಗುಜರಾತ್ ಟೈಟಾನ್ಸ್ ಐದನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?